ಬೆಂಗಳೂರು ಟೆಕ್ ಸಮ್ಮಿಟ್: ಜಾಗತಿಕ ನಾವೀನ್ಯತೆಯ ಮಹಾಸಂಗಮ| BTS 2025
ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ವಿಶ್ವಕ್ಕೇ ಹೆಗ್ಗುರುತಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ' (BTS 2025) ಅದ್ದೂರಿಯಾಗಿ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಇಸ್ರೇಲ್, ಸೌದಿ ಅರೇಬಿಯಾ ಸೇರಿದಂತೆ 60ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತಿವೆ. ಈ ಜಾಗತಿಕ ತಂತ್ರಜ್ಞಾನದ ಹಬ್ಬದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ನಮ್ಮ ರಾಜ್ಯದ ಹೆಮ್ಮೆಯ 'ಕಿಯೋ' ಕಂಪ್ಯೂಟರ್. ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಕಿಯೋನಿಕ್ಸ್ ಅಭಿವೃದ್ಧಿಪಡಿಸಿರುವ ಈ ಕಂಪ್ಯೂಟರ್, ಕೇವಲ 18,999 ರೂಪಾಯಿಗೆ ಲಭ್ಯವಿದ್ದು, ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನರಿಗೆ ಡಿಜಿಟಲ್ ಜ್ಞಾನವನ್ನು ತಲುಪಿಸುವ ಗುರಿ ಹೊಂದಿದೆ.


