ಎಂಎಲ್‌ಸಿ ಚುನಾವಣೆಯಲ್ಲಿ ಅಡ್ಡ ಮತದಾನದ ಮಹಾ ಸ್ಫೋಟ! ಬಿಜೆಪಿ-ಜೆಡಿಎಸ್‌ಗೆ ಶಾಸಕರ ಮೇಲೆ ಹಿಡಿತ ತಪ್ಪಿತಾ?

19 Jun 2026 7:04 PM IST

ರಾಜಕೀಯದಲ್ಲಿ ಕೇವಲ ಸಂಖ್ಯಾಬಲವಿದ್ದರೆ ಸಾಲದು, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಗಟ್ಟಿ ನಾಯಕತ್ವವೂ ಬೇಕು ಎಂಬುದನ್ನು ಕರ್ನಾಟಕದ ಈ ಬಾರಿಯ ವಿಧಾನಪರಿಷತ್ ಚುನಾವಣೆ ಸಾಬೀತುಪಡಿಸಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎದುರಾದ ಮೊದಲ ದೊಡ್ಡ ರಾಜಕೀಯ ಪರೀಕ್ಷೆಯಲ್ಲೇ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳ 11 ಶಾಸಕರ ಮತಗಳನ್ನು ಸೆಳೆಯುವ ಮೂಲಕ "ಚದುರಂಗದ ಚಾಣಕ್ಯ" ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಇತರ ಪಕ್ಷಗಳಿಗೆ ಚಳ್ಳೆಹಣ್ಣು ತಿನ್ನಿಸುವ 'ಶಿಸ್ತಿನ ಪಕ್ಷ' ಬಿಜೆಪಿಗೆ ತನ್ನ ಶಾಸಕರೇ ಅಡ್ಡ ಮತದಾನ ಮಾಡಲಿದ್ದಾರೆ ಎಂಬ ಲವಲೇಷ ಸುಳಿವೂ ಇಲ್ಲದಂತೆ ಕಂಗಾಲಾಗಿದ್ದು ಹೇಗೆ? ಕೇಂದ್ರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಹೋದ ನಂತರ ಜೆಡಿಎಸ್‌ನಲ್ಲಿ ಉಂಟಾಗಿರುವ ನಾಯಕತ್ವದ ಕೊರತೆ ಮತ್ತು ಆಂತರಿಕ ಭಿನ್ನಮತ ಬೀದಿಗೆ ಬಂದಿದ್ದು ಹೇಗೆ? 2016 ಮತ್ತು 2018 ರ ಇತಿಹಾಸ ಈ ಬಾರಿಯೂ ಮರುಕಳಿಸಿತಾ?

ರಾಜಕೀಯದಲ್ಲಿ ಕೇವಲ ಸಂಖ್ಯಾಬಲವಿದ್ದರೆ ಸಾಲದು, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಗಟ್ಟಿ ನಾಯಕತ್ವವೂ ಬೇಕು ಎಂಬುದನ್ನು ಕರ್ನಾಟಕದ ಈ ಬಾರಿಯ ವಿಧಾನಪರಿಷತ್ ಚುನಾವಣೆ ಸಾಬೀತುಪಡಿಸಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎದುರಾದ ಮೊದಲ ದೊಡ್ಡ ರಾಜಕೀಯ ಪರೀಕ್ಷೆಯಲ್ಲೇ ಡಿ.ಕೆ. ಶಿವಕುಮಾರ್ ಅವರು ವಿರೋಧ ಪಕ್ಷಗಳ 11 ಶಾಸಕರ ಮತಗಳನ್ನು ಸೆಳೆಯುವ ಮೂಲಕ "ಚದುರಂಗದ ಚಾಣಕ್ಯ" ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಇತರ ಪಕ್ಷಗಳಿಗೆ ಚಳ್ಳೆಹಣ್ಣು ತಿನ್ನಿಸುವ 'ಶಿಸ್ತಿನ ಪಕ್ಷ' ಬಿಜೆಪಿಗೆ ತನ್ನ ಶಾಸಕರೇ ಅಡ್ಡ ಮತದಾನ ಮಾಡಲಿದ್ದಾರೆ ಎಂಬ ಲವಲೇಷ ಸುಳಿವೂ ಇಲ್ಲದಂತೆ ಕಂಗಾಲಾಗಿದ್ದು ಹೇಗೆ? ಕೇಂದ್ರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಹೋದ ನಂತರ ಜೆಡಿಎಸ್‌ನಲ್ಲಿ ಉಂಟಾಗಿರುವ ನಾಯಕತ್ವದ ಕೊರತೆ ಮತ್ತು ಆಂತರಿಕ ಭಿನ್ನಮತ ಬೀದಿಗೆ ಬಂದಿದ್ದು ಹೇಗೆ? 2016 ಮತ್ತು 2018 ರ ಇತಿಹಾಸ ಈ ಬಾರಿಯೂ ಮರುಕಳಿಸಿತಾ?