ಮಹಿಳೆ, ವಿದ್ಯಾರ್ಥಿನಿಯರ ಕೊಲೆ: ಕಠಿಣ ಕಾನೂನು ರೂಪಿಸಲು ಹಕ್ಕೋತ್ತಾಯ
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೋತ್ತಾಯ ಸಭೆ ಆಯೋಜಿಸಲಾಗಿತ್ತು. ರಾಜ್ಯದಲ್ಲಿ ಈಚೆಗೆ ಯುವತಿಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕೊಲೆಗಳನ್ನು ವಿರೋಧಿಸಿ ಈ ಹಕ್ಕೋತ್ತಾಯ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ನಾವೆದ್ದು ನಿಲ್ಲದಿದ್ದರೆ ಸಂಘಟನೆ, ಮಹಿಳಾ ಮುನ್ನಡೆ,ಜನವಾದಿ ಮಹಿಳಾ ಸಂಘಟನೆ, ಎದ್ದೇಳು ಕರ್ನಾಟಕ ಹಾಗೂ ತಮಟೆ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಮೌನ ಮುರಿಯದಿದ್ದರೆ ಈ ದಮನ ನಿಲ್ಲದು ಎನ್ನುವ ಘೋಷಾವಾಕ್ಯದೊಂದಿಗೆ ಸಭೆ ನಡೆಯಿತು.
