"ದರ್ಶನ್‌ಗೆ ಶಿಕ್ಷೆಯಾಗಲಿ" : ನಟಿ ರಮ್ಯಾ ಮರು ಟ್ವೀಟ್‌ಗೆ ದರ್ಶನ್ ಅಭಿಮಾನಿಗಳ ವಿರೋಧ
ಬೆಂಗಳೂರಿನಲ್ಲಿ ಈಚೆಗೆ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ನನ್ನು ಪೊಲೀಸರು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಚಿತ್ರರಂಗದ ಹಲವರು ನಟ, ನಟಿಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ನಟ ರಮ್ಯಾ ಅವರ ಅಭಿಪ್ರಾಯಕ್ಕೆ, ನಟ ದರ್ಶನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.