ಟ್ರಾನ್ಸ್‌ಜೆಂಡರ್‌ಗಳಿಗೆ ಆರೋಗ್ಯ ಸೇವೆ ಮರೀಚಿಕೆ
x

ಟ್ರಾನ್ಸ್‌ಜೆಂಡರ್‌ಗಳಿಗೆ ಆರೋಗ್ಯ ಸೇವೆ ಮರೀಚಿಕೆ


ಟ್ರಾನ್ಸ್‌ಜೆಂಡರ್‌ಗಳಿಗೆ ಆರೋಗ್ಯ ಸೇವೆ ಮರೀಚಿಕೆ


ಟ್ರಾನ್ಸ್‌ಜೆಂಡರ್‌ಗಳು ಸಮರ್ಪಕ ಆರೋಗ್ಯ ಸೇವೆ ದೊರೆಯದೆ ಗಂಡಾಂತರಕ್ಕೆ ಸಿಲುಕಿದ್ದಾರೆ. ನೂರೆಂಟು ಪ್ರಶ್ನೆಗಳು ಎದುರಾಗುವುದರಿಂದ, ವೈದ್ಯರು ಇಲ್ಲವೇ ಆಸ್ಪತ್ರೆಗಳಿಗೆ ಹೋಗುವುದಕ್ಕೆ ನಿರಾಕರಿಸುತ್ತಾರೆ ಮತ್ತು ಸ್ವಯಂ ವೈದ್ಯ ಮಾಡಿಕೊಳ್ಳುತ್ತಾರೆ.

...

ಮುಂಬೈನ ಟ್ರಾನ್ಸ್‌ಜೆಂಡರ್ ಸೋಹೈಲ್(೨೪ ರ‍್ಷ) ಕಳೆದ ತಿಂಗಳು ಜ್ವರ ಮತ್ತು ಶೀತದಿಂದ ಬಳಲುತ್ತಿದ್ದಾಗ ಚಿಕಿತ್ಸೆ ಪಡೆಯಲು ರ‍್ಕಾರಿ ಆಸ್ಪತ್ರೆಗೆ ಹೋಗಿದ್ದರು; ಆದರೆ, ಚಿಕಿತ್ಸೆ ಪಡೆಯದೆ ವಾಪಾಸಾದರು. ʻವೈದ್ಯರು ನನ್ನನ್ನು ಹಳೆಯ ಹೆಸರಿನಿಂದ ಕರೆದಾಗ ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಂಡೆ. ಕೋಣೆಯಲ್ಲಿದ್ದ ಎಲ್ಲರೂ ನನ್ನತ್ತ ನೋಡತೊಡಗಿದರು. ತೀವ್ರ ಮುಜುಗರಕ್ಕೊಳಗಾದೆʼ ಎಂದು ಸೊಹೈಲ್ ವಿವರಿಸಿದರು. ʻಇದು ನಿಮ್ಮ ಹೆಸರಾ? ನಿಮ್ಮ ಎದೆ ಏಕೆ ಚಪ್ಪಟೆಯಾಗಿದೆ? ಪೀರಿಯಡ್ಸ್ ಆಗುತ್ತದೆಯೇ? ಎಂದು ಪ್ರಶ್ನಿಸಿದರು. ಆಘಾತಗೊಂಡು ಮನೆಗೆ ವಾಪಸಾದವನು ವಾರವಿಡೀ ಎಲ್ಲಿಯೂ ಹೋಗದೆ ಕಳೆದೆʼ ಎಂದು ಹೇಳಿದರು.

ದೇಶದಲ್ಲಿ ತೃತೀಯ ಲಿಂಗಿಗಳು ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ಪಡೆಯಲು ಪ್ರಯತ್ನಿಸಿದಾಗ ಇಂಥ ಅನುಭವ ಸಾಮಾನ್ಯ. ಎಚ್ಐವಿ ಮತ್ತು ಲೈಂಗಿಕ ರೋಗಗಳ ತಡೆಗಟ್ಟುವಿಕೆಗೆ ಸೀಮಿತವಾಗಿದ್ದು, ಮಾನಸಿಕ ಆರೋಗ್ಯ ಸಮಸ್ಯೆ, ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಗೆ ಅವಕಾಶವಿಲ್ಲ. ಬೆಂಗಳೂರಿನಲ್ಲಿ ೨೦,೦೦೦ ಕ್ಕೂ ಹೆಚ್ಚು ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳಿದ್ದು, ಅನಾರೋಗ್ಯಕ್ಕೆ ಒಳಗಾದಾಗ ಹೆಚ್ಚಿನವರು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ʻಜನರು ನಮ್ಮನ್ನು ರ‍್ಕಸ್‌ ಪ್ರಾಣಿಗಳಂತೆ ಕೆಟ್ಟದಾಗಿ ನಡೆಸಿಕೊಳ್ಳುವುದರಿಂದ, ನಮ್ಮಲ್ಲಿ ಅನೇಕರು ವೈದ್ಯರು ಅಥವಾ ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಕೆಲವು ವೈದ್ಯರು ನಮ್ಮನ್ನು ಇತರ ರೋಗಿಗಳಂತೆ ಪರಿಗಣಿಸುತ್ತಾರೆ; ಆದರೆ, ಹೆಚ್ಚಿನವರು ನಮ್ಮನ್ನು ಸ್ರ‍್ಶಿಸಲು ಅಥವಾ ಚಿಕಿತ್ಸೆ ನೀಡಲು ನಿರಾಕರಿಸುತ್ತಾರೆʼ ಎಂದು ಟ್ರಾನ್ಸ್‌ವುಮನ್ ಮತ್ತು ಟ್ರಾನ್ಸ್ ರೈಟ್ಸ್ ಕರ‍್ಯರ‍್ತೆ ಉಮಾ ಹೇಳುತ್ತಾರೆ.

ಸೊಹೈಲ್ ಪ್ರಕಾರ, ನಮ್ಮ ದೇಹ ವಿಶಿಷ್ಟವಾಗಿದೆ; ಆದ್ದರಿಂದ ನಮ್ಮ ಅವಶ್ಯಕತೆಗಳು ಸಹ ಅನನ್ಯವಾಗಿವೆ. ಟ್ರಾನ್ಸ್ ಜನರಿಗೆ ವೈದ್ಯರು ತಮ್ಮ ವೈಯಕ್ತಿಕ ಅಭಿಪ್ರಾಯಗಳಿಂದ ಪ್ರಭಾವಿತವಾದ ಸಲಹೆ ನೀಡುತ್ತಾರೆ. ಉದಾಹರಣೆಗೆ, ಕಣ್ಣಿನ ಸೋಂಕಿನ ಪರೀಕ್ಷೆಗೆ ರ‍್ಕಾರಿ ಆಸ್ಪತ್ರೆಗೆ ಹೋದ ಟ್ರಾನ್ಸ್ ಮಹಿಳೆಯನ್ನು ವೈದ್ಯರು ನಿಂದಿಸಿದರು; ಸುರಕ್ಷಿತ ಅಂತರವನ್ನು ಕಾಯ್ದುಕೊಂಡರು. ಸಲಿಂಗಕಾಮಿ, ದ್ವಿಲಿಂಗಿ ಮತ್ತು ಟ್ರಾನ್ಸ್‌ಜೆಂಡರ್‌ ಸಮುದಾಯಕ್ಕೆ ಸಹಾಯ ಮಾಡುವ ಅಹಮದಾಬಾದ್‌ನ ಲಕ್ಷ್ಯ ಎಂಬ ಎನ್‌ಜಿಒ ಸ್ಥಾಪಕ ಸಿಲ್ವೆಸ್ಟರ್ ಇಂಥ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಎಚ್‌ಐವಿ ಪಾಸಿಟಿವ್ ಆಗಿರುವ ಟ್ರಾನ್ಸ್‌ವುಮನ್ ಸಾಯಿರಾ, ಅಹಮದಾಬಾದ್‌ನ ರ‍್ಕಾರಿ ಆಸ್ಪತ್ರೆಗೆ ಪರೀಕ್ಷೆಗೆಂದು ಭೇಟಿ ನೀಡಿದಾಗ ವೈದ್ಯರು ಮತ್ತು ಶುಶ್ರೂಷಕಿ ಅವಳನ್ನು ಗದರಿಸಿದರು; ʻನಿಮಗೆ ಈ ಕಾಯಿಲೆ ಬಾರದೆ ಬೇರೆ ಯಾರಿಗೆ ಬರುತ್ತದೆ?ʼ ಟ್ರಾನ್ಸ್‌ಜೆಂಡರ್ ಮತ್ತು ಎಚ್ಐವಿ ಪೀಡಿತರು ತಾರತಮ್ಯಕ್ಕೆ ಗುರಿಯಾಗುತ್ತಾರೆ ಎಂದು ಸಿಲ್ವೆಸ್ಟರ್ ಹೇಳಿದರು.

ಗುಜರಾತ್‌ನ ವಡೋದರಾದ ಗರಿಮಾ ಗೃಹ್‌ ಇಂಥವರಿಗೆ ಆಶ್ರಯ ನೀಡುತ್ತದೆ. ʼಪುರುಷರು ಅಥವಾ ಮಹಿಳೆಯರ ವರ‍್ಡ್‌ಗಳಲ್ಲಿ ಇರಲು ಅನುಮತಿಸದ ಕಾರಣ ಕಾರಿಡಾರ್‌ಗಳಲ್ಲಿ ಮಲಗಬೇಕಾಗುತ್ತದೆʼ ಎಂದು ಸಿಲ್ವೆಸ್ಟರ್‌ ಹೇಳುತ್ತಾರೆ. ರ‍್ಕಾರಿ ಆಸ್ಪತ್ರೆಗಳಲ್ಲಿ ತಾರತಮ್ಯ ಮತ್ತು ಖಾಸಗಿ ಆಸ್ಪತ್ರೆಗಳು ದುಬಾರಿಯಾದ್ದರಿಂದ, ಟ್ರಾನ್ಸ್‌ಜೆಂಡರ್‌ಗಳು ಚಿಕಿತ್ಸೆಗೆ ನಕಲಿ ವೈದ್ಯರನ್ನು ಆಶ್ರಯಿಸಬೇಕಾಗುತ್ತದೆ. ಮೂಲಭೂತ ಆರೋಗ್ಯ ಸೇವೆಗಳನ್ನು ಪಡೆದು ಕೊಳ್ಳಲು ಆಗದೆ ಇರುವುದು ಸಮುದಾಯದ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಆರೋಗ್ಯ ಸೇವೆ ಲಭ್ಯವಿಲ್ಲದೆ ಇರುವುದರಿಂದ, ಗಂಭೀರ ಆರೋಗ್ಯ ಸಮಸ್ಯೆಗೆ ಮತ್ತು ಸಾವಿಗೆ ತುತ್ತಾಗಬ ಹುದು.

೨೦೧೪ ರಲ್ಲಿ ಸುಪ್ರೀಂ ಕರ‍್ಟ್‌ ತೃತೀಯ ಲಿಂಗಿಗಳನ್ನು ಅಧಿಕೃತವಾಗಿ ಅಂಗೀಕರಿಸಿತು. ಆನಂತರ, ಕೇಂದ್ರ ರ‍್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತೃತೀಯಲಿಂಗಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಅಧ್ಯಯನ ಮಾಡಲು ತಜ್ಞರ ಗುಂಪನ್ನು ರಚಿಸಿತು. ಪ್ರತಿ ರಾಜ್ಯದಲ್ಲೂ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸಲು ರಾಜ್ಯ ರ‍್ಕಾರಗಳಿಗೆ ಸುಪ್ರೀಂ ಕರ‍್ಟ್ ಸೂಚನೆ ನೀಡಿತು. ಆದರೆ, ಇಂಥ ಸಮಿತಿಯನ್ನು ರಚಿಸಲು ಗುಜರಾತ್ ರ‍್ಕಾರ ಐದು ರ‍್ಷ ತೆಗೆದುಕೊಂಡಿತು. ಫೆಬ್ರವರಿ ೨೦೧೯ ರಲ್ಲಿ ೧೬ ಸದಸ್ಯರ ಟ್ರಾನ್ಸ್‌ಜೆಂಡರ್ ಕಲ್ಯಾಣ ಮಂಡಳಿಯನ್ನು ರಚಿಸಿತು. ಆದರೆ, ಮೂರು ರ‍್ಷಗಳ ನಂತರವೂ ಈ ಮಂಡಳಿಯಿಂದ ಟ್ರಾನ್ಸ್‌ಜೆಂಡರ್‌ಗಳಿಗೆ ಹೆಚ್ಚಿನ ಪ್ರಯೋಜನ ಆಗಿಲ್ಲ ಎಂದು ಎಲ್‌ಜಿಬಿಟಿ ಹಕ್ಕುಗಳ ವಕೀಲ, ಸಲಿಂಗಕಾಮಿ ರಾಜಕುಮಾರ ಮನ್ವೇಂದ್ರ ಸಿಂಗ್ ಗೋಹಿಲ್ ಹೇಳುತ್ತಾರೆ.

ʻಕಳೆದ ೨೦ ರ‍್ಷಗಳಲ್ಲಿ ಟ್ರಾನ್ಸ್‌ಜೆಂಡರ್‌ಗಳ ಆರೋಗ್ಯವನ್ನು ಕೇಂದ್ರೀವಾಗಿಟ್ಟುಕೊಂಡ ಸಂಶೋಧನೆಗಳು ಹೆಚ್ಚುತ್ತಿವೆ. ಆದರೆ, ಹೆಚ್ಚಿನ ಸಂಶೋಧನೆಗಳು ಏಡ್ಸ್ ನ್ನು ಗುರಿಯಾಗಿಸಿಕೊಂಡಿವೆ. ಟ್ರಾನ್ಸ್ ಮೆನ್ ಮತ್ತು ಟ್ರಾನ್ಸ್‌ ಮ್ಯಾಸ್ಕುಲಿನ್ ಐಡೆಂಟಿಟಿ ಹೊಂದಿರುವವರ ಆರೋಗ್ಯ ರಕ್ಷಣೆ ಅಗತ್ಯಗಳ ಬಗ್ಗೆ ಆರೋಗ್ಯ ವೃತ್ತಿಪರರು ಕಲಿಯಬೇಕಾದ್ದು ಬಹಳಷ್ಟು ಇದೆ,ʼ ಎಂದು ಟ್ರಾನ್ಸ್ಜೆಂಡರ್ ಹಕ್ಕುಗಳ ಕರ‍್ಯರ‍್ತೆ ಉಮಾ ಹೇಳುತ್ತಾರೆ. ಇವರನ್ನು ತಪ್ಪಾಗಿ ಗುರುತಿಸುವ ಅಥವಾ ತಾರತಮ್ಯದಿಂದ ನೋಡುವ ಸಮಸ್ಯೆಯಿದೆ; ಇದನ್ನು ʻಟ್ರಾನ್ಸ್ ಬ್ರೋಕನ್ ರ‍್ಮ್ ಸಿಂಡ್ರೋಮ್ʼ ಎಂದು ಕರೆಯಲಾಗುತ್ತದೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಟ್ರಾನ್ಸ್‌ಜೆಂಡರ್ ಮತ್ತು ವಿಭಿನ್ನ ಲೈಂಗಿಕತೆಯವರು ಎದುರಿಸುವ ತಾರತಮ್ಯ. ಲಿಂಗ ಪರಿರ‍್ತನೆ ಪ್ರಕ್ರಿಯೆಯಿಂದ ವೈದ್ಯಕೀಯ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು-ಆರೋಗ್ಯ ರಕ್ಷಣೆ ನೀಡುವವರು ತಪ್ಪಾಗಿ ಭಾವಿಸಿದಾಗ ಸಂಭವಿಸುತ್ತದೆ.

ದೇಶದ ಜನಸಂಖ್ಯೆಯ ಶೇ. ೮, ಅಂದರೆ ಸುಮಾರು ೧೦೪ ದಶಲಕ್ಷ ಮಂದಿ ಎಲ್‌ಜಿಬಿಟಿ ಸಮುದಾಯದ ಭಾಗವಾಗಿ ಗುರುತಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಜನಸಂಖ್ಯೆಗೆ ಆರೋಗ್ಯ ಸೇವೆ ನಿರಾಕರಿಸುವುದು ಗಂಭೀರ ಆರೋಗ್ಯ ಬಿಕ್ಕಟ್ಟಿಗೆ ಕಾರಣವಾಗಬಹುದು. ಆರೋಗ್ಯ ರಕ್ಷಣೆ ಉದ್ಯಮದಲ್ಲಿ ಲಿಂಗ ಪರಿರ‍್ತಿತ ಪುರುಷರು ಹೆಚ್ಚು ತಾರತಮ್ಯ ಎದುರಿಸುತ್ತಾರೆ. ಟ್ರಾನ್ಸ್‌ಜೆಂಡರ್‌ ವ್ಯಕ್ತಿ ತನ್ನ ಹೆಸರನ್ನು ಹೇಳಿದ ನಂತರವೂ ಹಿಂದಿನ ಹೆಸರಿನಿಂದ ಕರೆಯುವ ಸಮಸ್ಯೆಯೇ ʻಡೆಡ್‌ನೇಮಿಂಗ್ʼ. ಇದು ಮುಜುಗರ ಮತ್ತು ಅವಮಾನ ಉಂಟುಮಾಡುತ್ತದೆ. ೨೦೧೯ ರಲ್ಲಿ ಸಂಸತ್ತು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆಯನ್ನು ಅಂಗೀಕರಿಸಿತು. ಈ ಸಮುದಾಯಕ್ಕೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವುದು ರ‍್ಕಾರಗಳ ಜವಾಬ್ದಾರಿ ಎಂದು ಈ ಕಾನೂನು ಹೇಳುತ್ತದೆ.

ಲಿಂಗ ಪರಿರ‍್ತನೆ ಶಸ್ತ್ರಚಿಕಿತ್ಸೆ, ಹರ‍್ಮೋನ್ ಚಿಕಿತ್ಸೆ, ಸಮಾಲೋಚನೆ, ಎಚ್ಐವಿ ಮೇಲ್ವಿಚಾರಣೆ ಮತ್ತು ಮಾನಸಿಕ ಆರೋಗ್ಯ ಬೆಂಬಲ ಇದರಲ್ಲಿ ಸೇರಿದೆ. ನವದೆಹಲಿಯಲ್ಲಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನಗಳ ಸಂಸ್ಥೆ(ಎಐಐಎಂಎಸ್‌) ೨೦೨೪ರಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ವಿಶೇಷ ಕೇಂದ್ರವನ್ನು ಆರಂಭಿಸುವುದಾಗಿ ಘೋಷಿಸಿದೆ. ಇದು ಈ ಸಮುದಾಯಕ್ಕೆ ಒಳ್ಳೆಯ ಸುದ್ದಿ. ಎಲ್ಲ ರಾಜ್ಯಗಳಿಗೆ ಅನ್ವಯಿಸುವ ನಿಯಮಗಳನ್ನು ರಚಿಸಬೇಕು ಮತ್ತು ಜಾರಿಗೊಳಿಸಬೇಕು. ಟ್ರಾನ್ಸ್‌ಜೆಂಡರ್‌ಗಳಿಗೆ ಚಿಕಿತ್ಸೆ ನೀಡಲು ಲಿಂಗ ಗುರುತಿಸುವಿಕೆ ಮುಖ್ಯವಲ್ಲ ಎಂದು ಆರೋಗ್ಯ ಸೇವೆಗಳ ಪೂರೈಸುವವರು ತಿಳಿದಿರಬೇಕು. ಸಮುದಾಯಕ್ಕೆ ಪ್ರಾಥಮಿಕ ಮತ್ತು ಮಾಧ್ಯಮಿಕ ಆರೋಗ್ಯ ಸೇವೆಗಳನ್ನು ಒದಗಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರ‍್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಮಾನಸಿಕ ಆರೋಗ್ಯ ಸೇವೆಗಳನ್ನು ಖಾಸಗಿ ವಲಯದ ಸಂಸ್ಥೆಗಳು ಒದಗಿಸುತ್ತಿವೆ ಎಂದು ಸಿಲ್ವೆಸ್ಟರ್ ಹೇಳಿದರು.

(ಗುರುತು ರಹಸ್ಯವಾಗಿಡಲು ಲೇಖನದಲ್ಲಿನ ಹೆಸರುಗಳನ್ನು ಬದಲಿಸಲಾಗಿದೆ.)

- ದಮಯಂತಿ ಧರ್

(ಲೇಖನವು ʼದ ಫೆಡರಲ್‌ʼ ನಲ್ಲಿ ಡಿಸೆಂಬರ್‌ ೧೦, ೨೦೨೩ ರಂದು ಪ್ರಕಟಗೊಂಡಿತ್ತು)

Read More
Next Story