ಕಣ್ಮರೆಯಾಗುತ್ತಿರುವ ಹಕ್ಕಿಗಳ ಬಗ್ಗೆ ಸಲೀಂ ಅಲಿ ನಾಡು ಏಕೆ ಚಿಂತಿಸಬೇಕು?


ʻಹಕ್ಕಿಗಳೆಲ್ಲ ಎಲ್ಲಿ ಹೋದವು?ʼ - ಇದು ಇತ್ತೀಚಿನ ದಿನಗಳಲ್ಲಿ ಪಕ್ಷಿಪ್ರೇಮಿಗಳ ಸಾಮಾನ್ಯ ಪ್ರಶ್ನೆ. ಅರಣ್ಯನಾಶ ಮತ್ತು ಮಾನವನಿಂದ ಉಂಟಾಗುವ ಮಾಲಿನ್ಯದಿಂದ ಪಕ್ಷಿ ಪ್ರಭೇದಗಳು ಅವನತಿ ಹೊಂದುತ್ತಿವೆ. ʻಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್ 2023 ʼ ವರದಿ ಪ್ರಕಾರ, 338 ಪಕ್ಷಿ ಪ್ರಭೇದಗಳ ಸಂಖ್ಯೆಯಲ್ಲಿ ಶೇ.60 ರಷ್ಟು ಕುಸಿತವುಂಟಾಗಿದೆ. ನಗರೀಕರಣ, ಅರಣ್ಯನಾಶ, ಹವಾಮಾನ ಬದಲಾವಣೆ ಮತ್ತು ವಿವಿಧ ರೋಗ ಕುಸಿತಕ್ಕೆ ಕಾರಣ.

35 ಕ್ಕೂ ಹೆಚ್ಚು ಪುಸ್ತಕಗಳ ಲೇಖಕ ರಂಜಿತ್ ಲಾಲ್ ಅವರ ಪ್ರಕಾರ, ʻಹಲವು ಪ್ರಭೇದದ ಹಕ್ಕಿಗಳು ಕಣ್ಮರೆಯಾಗಿವೆ. ನಿರ್ಮಾಣ ಕಾಮಗಾರಿ ಮತ್ತು ಕೀಟನಾಶಕ-ರಾಸಾಯನಿಕ ಗೊಬ್ಬರಗಳ ಬಳಕೆ ಕಣ್ಮರೆಗೆ ಕಾರಣ. ಹಲವು ಹಕ್ಕಿಗಳಿಗೆ ಕಂಬಳಿಹುಳ ಮತ್ತು ಕೀಟಗಳು ಪ್ರೋಟೀನಿನ ಪ್ರಮುಖ ಮೂಲ. ಮರಿಗಳಿಗೆ ಇದೇ ಆಹಾರ. ಆದರೆ, ಈಗ ನಗರ ಪ್ರದೇಶಗಳಲ್ಲಿ ಕೀಟಗಳೇ ನಾಪತ್ತೆಯಾಗಿವೆ. ಕೀಟನಾಶಕ-ಗೊಬ್ಬರಗಳ ಬಳಕೆಯಿಂದ ಮಣ್ಣಿನ ಗುಣಮಟ್ಟ ಕುಸಿಯುತ್ತಿದೆ. ಇದು ಇಡೀ ಪರಿಸರ ವ್ಯವಸ್ಥೆಗೆ ಹಾನಿಯುಂಟು ಮಾಡುತ್ತಿದ್ದು,ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದೆʼ ಎಂದರು.

ನಾವು ಸಿಂಹ, ಹುಲಿ ಮತ್ತು ಆನೆಯಂತಹ ಬೃಹತ್ ಪ್ರಾಣಿಗಳ ಮೇಲೆ ಕೇಂದ್ರೀಕರಿಸಿ, ಪಕ್ಷಿಗಳನ್ನು ನಿರ್ಲಕ್ಷಿಸುತ್ತೇವೆ. ರಸ್ತೆಗಳು, ಸೇತುವೆಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸುವಾಗ ಪಕ್ಷಿಗಳ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ಕೊಡಬೇಕು. ಮಕ್ಕಳು ಕೃತಕ ಬುದ್ಧಿಮತ್ತೆ ಬಗ್ಗೆ ಕಲಿಯಲು ಬಯಸುತ್ತಾರೆ. ಆದರೆ, ಅವರಲ್ಲಿ ಎಷ್ಟು ಮಂದಿ ಪಕ್ಷಿಗಳನ್ನು ಅಧ್ಯಯನ ಮಾಡಲು ಬಯಸುತ್ತಾರೆ?ʼ ಎಂದು ಪ್ರಶ್ನಿಸುತ್ತಾರೆ.

ಸಲೀಂ ಅಲಿ (1896-1987) ಸುಸಂಘಟಿತ ಪಕ್ಷಿ ಸಮೀಕ್ಷೆಯನ್ನು ನಡೆಸಿದ ಮೊದಲ ಭಾರತೀಯ; ಹಲವು ಪುಸ್ತಕಗಳ ಲೇಖಕ. ಅವರ ಜನಪ್ರಿಯ ಕೃತಿಗಳಲ್ಲಿ ಒಂದಾದ ʻಹ್ಯಾಂಡ್ಬುಕ್ ಆಫ್ ಬರ್ಡ್ಸ್ ಆಫ್ ಇಂಡಿಯಾ ಮತ್ತು ಪಾಕಿಸ್ತಾನ(ಸಹ ಲೇಖಕ ಎಸ್. ದಿಲ್ಲನ್ ರಿಪ್ಲೆ).

ಬಾಂಬೆಯಲ್ಲಿ ಸುಲೈಮಾನಿ ಬೋಹ್ರಾ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅವರು, ಒಂಬತ್ತನೇ ಮತ್ತು ಕಿರಿಯ ಮಗು. ಬಾಲ್ಯದಲ್ಲಿಯೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡರು. ಮಕ್ಕಳಿಲ್ಲದ ಚಿಕ್ಕಪ್ಪ ಅಮಿರುದ್ದೀನ್ ತ್ಯಾಬ್ಜಿ ಮತ್ತು ಚಿಕ್ಕಮ್ಮ ಹಮೀದಾ ಬೇಗಂ, ಅಲಿಯನ್ನು ಬೆಳೆಸಿದರು. 1883ರಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ಸ್ಥಾಪನೆಯಾದ ಬಳಿಕ ಅಮೀರುದ್ದೀನ್ ಸೊಸೈಟಿ ಯ ಸದಸ್ಯರಾದರು. ಅಲಿ ದಿಯೋನಾರ್ ನಲ್ಲಿದ್ದಾಗ ಎಳವೆಯಲ್ಲಿ ಗುಬ್ಬಚ್ಚಿಗಳನ್ನು ಬೇಟೆಯಾಡಲು ಇಷ್ಟಪಡುತ್ತಿದ್ದರು. 1908 ರಲ್ಲಿ ಆಕಸ್ಮಿಕವಾಗಿ ಹಳದಿ ಕಂಠದ ಗುಬ್ಬಚ್ಚಿ(ಪೆಟ್ರೋನಿಯ ಕ್ಸಾಂಥೋಕೊಲಿಸ್) ಯನ್ನು ನೋಡಿದರು. ಆದರೆ, ಅವರಿಗೆ ಅದನ್ನು ಗುರುತಿಸಲು ಆಗಲಿಲ್ಲ. ಆಗ ಬಿಎನ್ಎಚ್ಎಸ್ ಗೌರವ ಕಾರ್ಯದರ್ಶಿ ಡಬ್ಲ್ಯು.ಎಸ್. ಮಿಲ್ಲಾರ್ಡ್ ಪಕ್ಷಿಯನ್ನು ಗುರುತಿಸಲು ನೆರವಾದರು.

ಮಿಲ್ಲಾರ್ಡ್ ಭೇಟಿ ಹೊಸ ದಿಗಂತವನ್ನು ತೆರೆಯಿತು. 1980 ರ ದಶಕದ ಅಂತ್ಯದ ವೇಳೆಗೆ ಅವರು ತಮ್ಮ ಆತ್ಮಚರಿತ್ರೆ ʻ ದಿ ಫಾಲ್ ಆಫ್ ಎ ಸ್ಪ್ಯಾರೋ ʼ ಬರೆದರು. ಈ ಪುಸ್ತಕದಲ್ಲಿ ಅವರು ಬರ್ಮಾದಿಂದ ಬರ್ಲಿನ್, ಹೈದರಾಬಾದ್ನಿಂದ ಡೆಹ್ರಾಡೂನ್ವರೆಗಿನ ಸಾಹಸಮಯ ಪ್ರಯಾಣದ ಬಗ್ಗೆ ಬರೆಯುತ್ತಾರೆ. ಅವರು ತಮ್ಮ ಹೊರಾಂಗಣ ಸಾಹಸಗಳನ್ನು ಮತ್ತು ನೈಸರ್ಗಿಕ ಸಾಹಸಿ ಕೌಶಲ್ಯವನ್ನು ಸುಂದರವಾಗಿ ವಿವರಿಸುತ್ತಾರೆ. ಜವಾಹರಲಾಲ್ ನೆಹರು, ಇಂದಿರಾಗಾಂಧಿ, ಸರೋಜಿನಿ ನಾಯ್ಡು, ಎಸ್. ದಿಲ್ಲನ್ ರಿಪ್ಲೆ ಮತ್ತು ಇ.ಪಿ. ಜೀ ಅವರೊಂದಿಗೆ

ಭೇಟಿಯನ್ನು ವಿವರಿಸುತ್ತಾರೆ. ರಾಜ್ಯದ ಸೇವೆಯಲ್ಲಿರುವ ಬ್ರಿಟಿಷರು ತುಟಿ ಚಿಚ್ಚುವುದಿಲ್ಲ ಎಂಬ ಭಾವನೆಯಿಂದಲೇ ಅವರು ಮಿಲ್ಲಾರ್ಡ್ ಅವರನ್ನು ಭೇಟಿ ಮಾಡಲು ಹೋದರು. ಆದರೆ, ಮಿಲ್ಲಾರ್ಡ್ ಆ ಗುಂಪಿಗೆ ಸೇರಿದವರಾಗಿರಲಿಲ್ಲ. ಅವರು ಅಲಿಗೆ ತಮ್ಮ ಗ್ರಂಥಾಲಯದಿಂದ ಕೆಲವು ಪುಸ್ತಕ ಓದಲು ನೀಡಿದರು: ಎಡ್ವರ್ಡ್ ಹ್ಯಾಮಿಲ್ಟನ್ ಐಟ್ಕೆನ್ ಅವರ ಅತ್ಯುತ್ತಮ ಪುಸ್ತಕ ʻದಿ ಬರ್ಡ್ಸ್ ಆಫ್ ಬಾಂಬೆʼ ಮತ್ತು ʻಎ ನ್ಯಾಚುರಲಿಸ್ಟ್ ಆನ್ ದಿ ಪ್ರೌಲ್ʼ. ಈ ಪುಸ್ತಕವನ್ನು ಅಲಿ ಮುಂದಿನ ಆರು ದಶಕದಲ್ಲಿ ಹಲವು ಬಾರಿ ಓದಿದರು.

ಅಲಿ ಚಿಕ್ಕವರಿದ್ದಾಗ 'ಪ್ರಕೃತಿ ಸಂರಕ್ಷಣೆ' ಎಂಬ ಪದವನ್ನೇ ಕೇಳಿರಲಿಲ್ಲ. ಅವರು ಮಾವಿನ ತೋಪುಗಳಿಂದ ಸುತ್ತುವರಿದ ಖೆತ್ವಾಡಿಯಲ್ಲಿ ಪ್ರತಿದಿನ ಮ್ಯಾಗ್ಪೈ-ರಾಬಿನ್ ಹಕ್ಕಿಯ ಹಾಡು ಕೇಳುತ್ತ ಬೆಳೆದರು. ಮಿಲ್ಲಾರ್ಡ್ ಹಕ್ಕಿಗಳ ಚರ್ಮ ಸುಲಿದು ಸಂರಕ್ಷಿಸುವಿಕೆಯನ್ನು

ಮತ್ತು ಸೂಕ್ತ ಟಿಪ್ಪಣಿ ಮಾಡಿಕೊಳ್ಳುವುದನ್ನು ಕಲಿಸಿದರು. ಇಲ್ಲಿ ಸ್ಕಾಟ್ಲೆಂಡಿನ ನಾರ್ಮನ್ ಬಾಯ್ಡ್ ಕಿನ್ನೈರ್ ಅವರನ್ನು ಭೇಟಿ ಮಾಡಿದರು. ಕಿನ್ನೈರ್ ಆನಂತರ ಸ್ಪೆಷಲ್ ಪ್ರಾವಿಡೆನ್ಸ್ ಸೊಸೈಟಿಯ ಮೇಲ್ವಿಚಾರಕರಾಗಿ ನೇಮಕಗೊಂಡರು ಮತ್ತು ಬ್ರಿಟಿಷ್ ಮ್ಯೂಸಿಯಂನ ಉಸ್ತುವಾರಿ ವಹಿಸಿಕೊಂಡರು. ಅವರು ಅಲಿಯನ್ನು ಎಸ್.ಎಚ್. ಪ್ರೇಟರ್ ಮತ್ತು ಪಿ.ಎಫ್. ಗೋಮ್ಸ್ ಅವರ ಬಳಿ ತರಬೇತಿಗೆ ಬಿಟ್ಟರು.

ಈಗ ಅತ್ಯಾಧುನಿಕ ಕ್ಯಾಮೆರಾಗಳು, ಸಂಚರಿಸಲು ಎಸ್ ಯುವಿಗಳು ಇವೆ. ಅದರೆ, ಅಲಿ ಎತ್ತಿನ ಗಾಡಿಯಲ್ಲಿ ಬೈನಾಕ್ಯುಲರ್ ಹಿಡಿದುಕೊಂಡು ದೇಶದ ಸುತ್ತಗಲ ಸುತ್ತಿದರು. ಜಾರ್ಜ್ ಪಿ. ಸ್ಯಾಂಡರ್ಸನ್ ಅವರ ʻತರ್ಟೀನ್ ಇಯರ್ಸ್ ಅಮಾಂಗ್ ದ ವೈಲ್ಡ್ ಬೀಸ್ಟ್ಸ್ ಆಫ್ ಇಂಡಿಯಾ, ಕ್ಯಾಪ್ಟನ್ ಏ.ಐ.ಆರ್. ಗ್ಲಾಸ್ಫರ್ಡ್ ಅವರ ʻರೈಫಲ್ ಮತ್ತುರೊಮಾನ್ಸ್ ಇನ್ ದ ಇಂಡಿಯನ್ ಜಂಗಲ್ʼ, ಥಿಯೋಡರ್ ರೂಸ್ವೆಲ್ಟ್ ಅವರ ʻ ಆಫ್ರಿಕನ್ ಗೇಮ್ ಟ್ರೇಲ್ಸ್ʼ ಇತ್ಯಾದಿ ಪುಸ್ತಕಗಳು ಅವರ ಮಾರ್ಗದರ್ಶಕವಾಗಿದ್ದವು.

ಪಕ್ಷಿ ವೀಕ್ಷಣೆ ಎನ್ನುವುದು ಶ್ರೀಮಂತರು ಸಮಯ ಕೊಲ್ಲಲು ಬಳಸುವ ನಿಷ್ಪ್ರಯೋಜಕ ಕ್ರಿಯೆ ಎಂದು ಪರಿಗಣಿಸುತ್ತಿದ್ದ ಕಾಲ ಅದು. ಈಗ ಅದು ಪಕ್ಷಿ ವಿಜ್ಞಾನ ಎಂದು ಪರಿಗಣಿಸಲ್ಪಟ್ಟಿದೆ. ಅಲಿ ಅವರ ಆಸಕ್ತಿ ನೈಸರ್ಗಿಕ ಪರಿಸರದಲ್ಲಿನ ಜೀವಂತ ಪಕ್ಷಿಗಳ ಮೇಲೆ ಕೇಂದ್ರೀಕೃತ ವಾಗಿತ್ತು. ಅವರ ಗದ್ಯದಲ್ಲಿ ಎಲ್ಲಿಯೂ ಅನಾಸಕ್ತಿಕರ ಅಂಶಗಳಿಲ್ಲ.

ಅಲಿ ಪಕ್ಷಿಗಳ ನಡವಳಿಕೆ ಮತ್ತು ಪರಿಸರದ ವಿವಿಧ ಅಂಶಗಳ ಬಗ್ಗೆ ವಿವರ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿದ್ದರು. ಅವುಗಳ ಆವಾಸಸ್ಥಾನ, ಅಭ್ಯಾಸ, ಚಟುವಟಿಕೆ, ಸಾಮಾಜಿಕ ಗುಂಪು ಇತ್ಯಾದಿಯನ್ನು ಟೇಪ್ ರೆಕಾರ್ಡರ್ ಇನ್ನಿತರ ಉಪಕರಣಗಳ ಮೂಲಕ ವ್ಯವಸ್ಥಿತವಾಗಿ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ದಾಖಲಿಸಿಕೊಳ್ಳುತ್ತಿದ್ದರು.

ʻಸಣ್ಣ ನೋಟ್ಬುಕ್ ಮತ್ತು ಪೆನ್ಸಿಲ್ ನಿಂದ ಸ್ಥಳದಲ್ಲೇ ಟಿಪ್ಪಣಿ ಬರೆಯುವುದು ನನಗೆ ತೃಪ್ತಿ ನೀಡುವ ಸರಳ ವಿಧಾನ. ಪಕ್ಷಿಗಳ ನಡವಳಿಕೆ, ಕರೆ ಮತ್ತು ಹಾಡು, ಆಹಾರ, ಗೂಡು ಕಟ್ಟುವಿಕೆ ಮತ್ತು ಆಸಕ್ತಿಕರ ಆಂಶಗಳ ವಿವರಣೆಯನ್ನು ಸೇರಿಸುತ್ತೇನೆ. ಶಿಬಿರಕ್ಕೆ ಹಿಂದಿರುಗಿದ ಬಳಿಕ ಟಿಪ್ಪಣಿಗಳನ್ನು ಸಂಬಂಧಿತ ವಿಭಾಗಕ್ಕೆ ವರ್ಗಾಯಿಸುತ್ತಿದ್ದರು. ಆಗ ಪಕ್ಷಿಗಳ ಬಣ್ಣದ ಮುದ್ರಿತ ಪುಸ್ತಕಗಳು ಅಪರೂಪವಾಗಿದ್ದವು.

ಅಲಿ ವಿರಾಮದ ಚಟುವಟಿಕಕೆಯೊಂದನ್ನು ವೃತ್ತಿಯನ್ನಾಗಿಸಿಕೊಂಡತು. ದೇಶ 5 ಶತಕೋಟಿ ಡಾಲರ್ ಆರ್ಥಿಕತೆಯಾಗಲು ಮುಂದಾಗಿರುವ ಸಮಯದಲ್ಲಿ ಅದು ತನ್ನ ಹಕ್ಕಿ ಸಂಪತ್ತನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕಿದೆ ಮತ್ತು ಸಲೀಂ ಅಲಿ ಅವರ ಕೊಡುಗೆಗಳನ್ನು ಮರೆಯಬಾರದು ಇಲ್ಲವೇ ಅಳಿಸಬಾರದು.

- ನವೈದ್ ಅಂಜುಮ್

Read More
Next Story