ಮಣಿಪುರದ ಹಿಂಸೆಯಿಂದ ಸಂತ್ರಸ್ತ ಮಕ್ಕಳಿಗೆ ಚಿತ್ರಕಲೆ, ಆಟದ ಮೂಲಕ ಚಿಕಿತ್ಸೆ
x

ಮಣಿಪುರದ ಹಿಂಸೆಯಿಂದ ಸಂತ್ರಸ್ತ ಮಕ್ಕಳಿಗೆ ಚಿತ್ರಕಲೆ, ಆಟದ ಮೂಲಕ ಚಿಕಿತ್ಸೆ

ಮಣಿಪುರದ ಮಕ್ಕಳು ಪರಿಹಾರ ಶಿಬಿರಗಳ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ತಮ್ಮ ಕಹಿ ನೆನಪುಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ



ಮಣಿಪುರದ ಹಿಂಸೆಯಿಂದ ಸಂತ್ರಸ್ತ ಮಕ್ಕಳಿಗೆ ಚಿತ್ರಕಲೆ, ಆಟದ ಮೂಲಕ ಚಿಕಿತ್ಸೆ

-ಬಬ್ಲಿ ಯಾದವ್

……………………………………..

ಪ್ರಿನ್ಸಿಯಾ (ಹದಿನಾಲ್ಕು ವರ್ಷ)ಗೆ ಈಗ ಪುನರ್ವಸತಿ ಶಿಬಿರವೇ ಮನೆ. ಮಣಿಪುರದ ಸ್ವಗ್ರಾಮದಲ್ಲಿ ಹಿಂಸಾಚಾರ ಪ್ರಾರಂಭವಾದಾಗ ಮತ್ತು ನಿವಾಸಿಗಳನ್ನು ಸ್ಥಳಾಂತರಿಸಿದಾಗ, ಪುನರ್ವಸತಿ ಶಿಬಿರಕ್ಕೆ ತೆರಳುವುದರ ಹೊರತು ಬೇರೆ ಮಾರ್ಗ ಉಳಿದಿರಲಿಲ್ಲ. ಆದರೆ, ಸಾಕು ನಾಯಿ ಯನ್ನು ಜೊತೆಗೆ ಕರೆದೊಯ್ಯಲು ಆಕೆಗೆ ಅವಕಾಶ ನೀಡಲಿಲ್ಲ. ಅವಳ ಕಣ್ಣೆದುರೇ ಸಾಕು ನಾಯಿಯನ್ನು ಹೊಡೆದು ಕೊಲ್ಲಲಾಯಿತು. ಹತ್ಯೆ ಮಾಡಿದಾಕೆ ಮೇ 4 ರಿಂದ ಪ್ರಿನ್ಸಿಯಾ ಜೊತೆಗೆ ಇದ್ದಳು. ಶಿಬಿರದಲ್ಲಿ ಮಾತನಾಡಲು ಅವಕಾಶ ಸಿಗುವವರೆಗೆ ಈ ದೃಶ್ಯಗಳು ಆಕೆಯನ್ನು ನಿರಂತರವಾಗಿ ಕಾಡುತ್ತಿದ್ದವು. ಶಿಬಿರದಲ್ಲಿ ಕಥೆ ಹೇಳುವ ಚಟುವಟಿಕೆಯಲ್ಲಿ ಭಾಗವಹಿಸಿದಾಗ, ಆಕೆಯ ಎದೆಯ ಮೇಲಿನ ಭಾರ ಇಳಿ ಯಿತು.

ಇಂಥದ್ದೇ ಇನ್ನೊಂದು ಸಭೆಯಲ್ಲಿ ಬಾಂಗ್ಲಾದೇಶಿ ನಿರಾಶ್ರಿತರ ಪರಿಸ್ಥಿತಿಯನ್ನು ವಿವರಿಸುವ ಫೋಟೋಬುಕ್ಗಳನ್ನು ವೀಕ್ಷಿಸುತ್ತಿದ್ದಾಗ, ಹುಡುಗಿಯೊಬ್ಬಳು ಮಧ್ಯರಾತ್ರಿಯಲ್ಲಿ3 ತಿಂಗಳು ಪ್ರಾಯದ ತಂಗಿಯೊಂದಿಗೆ ನದಿಯನ್ನು ದಾಟಬೇಕಾಗಿ ಬಂದಿದ್ದನ್ನು ಸ್ಮರಿಸಿಕೊಂಡಳು. ದಾರಿಯುದ್ದಕ್ಕೂ ಗುಂಡಿನ ದಾಳಿ ನಿರಂತರವಾಗಿ ನಡೆಯುತ್ತಿತ್ತು ಮತ್ತು ಮನೆಗಳನ್ಳು ಸುಡುತ್ತಿದ್ದುದನ್ನು ಆಕೆ ನೋಡಿದಳು.

ಈ ಕಾರ್ಯಾಗಾರಗಳಲ್ಲಿ ಸಂಘರ್ಷದಲ್ಲಿ ಸಿಲುಕಿದ್ದ ಮಕ್ಕಳ ಗಾಯವನ್ನು ಮಾಯಿಸಲು ಕಲಾಪ್ರಕಾರಣಗಳನ್ನು ಬಳಸಲಾಗು ತ್ತದೆ; ಬೆಳವಣಿಗೆಯನ್ನು ಉತ್ತೇಜಿಸಲಾಗುತ್ತದೆ. ಸೀಮಿತ ಸಂಪನ್ಮೂಲ ಇರುವ ಮಣಿಪುರದ ಕಲಾವಿದರು, ಪ್ರದರ್ಶಕರು, ಉದ್ಯಮಿಗಳು ಮತ್ತು ಸಂಗೀತಗಾರರು ಒಟ್ಟಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇವರೆಲ್ಲರೂ ಪರಿಹಾರ ಶಿಬಿರಗಳಲ್ಲಿ ಸಮಯ ಕಳೆಯುತ್ತಾರೆ. ಇಂಥ ಪರಿಹಾರ ಶಿಬಿರಗಳಲ್ಲಿನ ಉಪಶಮನ ಕ್ರಿಯೆಗಳು ಮಕ್ಕಳಲ್ಲಿ ಭರವಸೆ ಮೂಡಿಸುತ್ತವೆ.

ಕುಕಿ ಮತ್ತು ಮೈತಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದಾಗಿ ಮಣಿಪುರ ಕಳೆದ ಏಳು ತಿಂಗಳಿನಿಂದ ಸಂಕಷ್ಟದಲ್ಲಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಹಿಂಸಾಚಾರವು 12,000 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 70,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.

ಮಣಿಪುರದ ನಾಗರಿಕರಿಗೆ ಹಿಂಸಾಚಾರ ಹೊಸದೇನೂ ಅಲ್ಲ. ಸಾನಾ ಖುಮುಕ್ಚಮ್(35) 1990 ರ ದಶಕದಲ್ಲಿ ಹಿಂಸಾಚಾರ, ಭಯೋತ್ಪಾದನೆ, ಮತ್ತು ಸಶಸ್ತ್ರ ಸಂಘರ್ಷದ ನಡುವೆ ಕಾಕ್ಚಿಂಗ್ ಜಿಲ್ಲೆಯ ಕಿನ್ನೋ ಉಮಾತೆಲ್ನಲ್ಲಿ ಬೆಳೆದರು. ಪರ್ಯಾಯ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಂದಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ಅವರು ಭಾಗಿದಾರ ಪ್ರೇಮಾನಂದ್ ನಾಂಗ್ ತೊಂಬಮ್ ಮತ್ತು ಅವರ ಸ್ನೇಹಿತ ಯೆಂಖೋಥೆಮ್ ಬಾಯ್ಚಾ ಜೊತೆ ಕೆಲಸ ಮಾಡುತ್ತಾರೆ. ಅವರಿಬ್ಬರು ದೆಹಲಿಯಲ್ಲಿ ಶಿಕ್ಷಣ ಪಡೆದ ದೃಶ್ಯ ಮತ್ತು ರಂಗಭೂಮಿ ಕಲಾವಿದರು. ಮೂವರೂ ಮಕ್ಕಳಿಗೆ ಮನರಂಜನೆ ಮತ್ತು ಸ್ಫೂರ್ತಿ ನೀಡುವ ಆಕರ್ಷಕ ಕಥೆಗಳನ್ನು ಹೇಳಲು ದೃಶ್ಯ ಮಾಧ್ಯಮವನ್ನು ಬಳಸುತ್ತಾರೆ. ಸಾನಾ ಪ್ರಸ್ತುತ ಕಕ್ಚಿಂಗ್ ಖುನೌ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ʻಸಂಘರ್ಷ ಪ್ರಾರಂಭವಾದಾಗ ಎನ್ಜಿಒಗಳೊಂದಿಗೆ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲಾರಂಭಿಸಿದೆವುʼ ಎಂದು ಕಲಾ ವಿದ್ಯಾರ್ಥಿ ಪ್ರೇಮಾನಂದ್ ಹೇಳುತ್ತಾರೆ. ಅವರು ದೃಶ್ಯಕಥೆ ಹೇಳುವ ಕಾರ್ಯಾಗಾರವನ್ನು ಖೊಮ್ಡೊನ್ಬಿ ಮೆಮೋರಿಯಲ್ ಇಂಗ್ಲಿಷ್ ಸ್ಕೂಲ್ ನ ಶಿಬಿರ, ಕಕ್ಚಿಂಗ್ ಖುನೌದಲ್ಲಿನ ಹಿಜಾಮ್ ಅಂಗೋಮ್ ಲೈಕೈ ಶಿಬಿರ ಮತ್ತು ಬಿಷ್ಣುಪುರ ಜಿಲ್ಲೆಯ ಮೊಯರಾಂಗ್ ಬಜಾರ್ ಪರಿಹಾರ ಶಿಬಿರದಲ್ಲಿ ನಡೆಸಿಕೊಟ್ಟಿದ್ದಾರೆ.

ಶಿಬಿರಗಳಲ್ಲಿ ಮಕ್ಕಳು ಚಿತ್ರಕಲೆ, ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ಫೋಟೋಬುಕ್ಗಳಿಗೆ ಪರಿಚಯಿಸಲ್ಪಡುತ್ತಾರೆ ಮತ್ತು ಆನಂತರ ಸುತ್ತಮುತ್ತಲಿನ ಯಾವುದೇ ವಿಷಯವನ್ನು ಸೆರೆಹಿಡಿಯಲು ಕ್ಯಾಮೆರಾ ಬಳಸುತ್ತಾರೆ. ಮಕ್ಕಳ ದಿನನಿತ್ಯದ ಹೆಚ್ಚು ಪಾಲು ಮನೆ ಮತ್ತು ಶಾಲೆಯಲ್ಲಿ ಕಳೆಯುತ್ತದೆ. ಮಕ್ಕಳು ಫೋಟೋ ತೆಗೆದುಕೊಳ್ಳಲು ಆಯ್ಕೆ ಮಾಡಿಕೊಂಡ ವಿಷಯ-ಕಮಲದ ಹೂವುಗಳು ಅರಳುತ್ತಿರುವ ಕೊಳ. ʻಮಣಿಪುರದ ಮಕ್ಕಳಿಗೆ ಫುಟ್ಬಾಲ್ ಆಡುವ ಆಸೆ ಇದೆ. ಆದರೆ, ಕೆಲವು ಶಿಬಿರಗಳಲ್ಲಿ ಆಟದ ಮೈದಾನವಿಲ್ಲ.ಹದಿಹರೆಯದ ಕೆಲವರು ಸೂರ್ಯಾಸ್ತದ ನಂತರ ಅಡುಗೆ ಮಾಡಲು ಸಹಾಯ ಮಾಡುತ್ತಾರೆ, ʼಎಂದು ಪ್ರೇಮಾನಂದ ಹೇಳಿದರು.

ಬಾಮ್ಚಾ(33) ರಂಗಭೂಮಿ ಮತ್ತು ರಂಗ ಕಲೆಯಲ್ಲಿ ತೊಡಗಿಸಿಕೊಂಡವರು. ʻಮಕ್ಕಳು ತಮ್ಮ ಸುತ್ತಲಿನ ಹಿಂಸಾಚಾರದ ಬಗ್ಗೆ ಏನು ಹೇಳು ಬಯಸುತ್ತಾರೆ ಎಂಬುದನ್ನು ಕೇಳಲು ಅವಕಾಶ ನೀಡುವುದು ನಮ್ಮ ಉದ್ದೇಶʼ ಎನ್ನುತ್ತಾರೆ.

ಮೇ 2023 ರಲ್ಲಿ ಸಂಗೀತಗಾರ ಚಮೋವಾ ಥಿಯಂ ಅವರು ಸಿಯೋಮ್ ಮ್ಯೂಸಿಕ್ ಎಂಬ ಜಾನಪದ ಆಧಾರಿತ ಸಂಗೀತ ಕಾರ್ಯಕ್ರಮ ಕ್ಕಾಗಿ ಇಂಫಾಲ್ನಿಂದ ಬೆಂಗಳೂರಿಗೆ 3,000 ಕಿಲೋಮೀಟರ್ ಪ್ರಯಾಣಿಸಿದ್ದರು. ಮಣಿಪುರದ ಸಂಸ್ಕೃತಿ ಮತ್ತು ಜಾನಪದ ಸಂಪ್ರದಾಯ ಗಳ ಬಗ್ಗೆ ತಿಳಿಸುವುದು ಉದ್ದೇಶ. ಎರಡು ತಿಂಗಳ ನಂತರ ಮಣಿಪುರಕ್ಕೆ ವಾಪಸಾಗಿ, ಪುನರ್ವಸತಿ ಶಿಬಿರಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಲಾರಂಭಿಸಿದರು.

ವಾಂಗ್ಖೈ ಚವೋಬಾ(47) ಸ್ಥಳಾಂತರಗೊಂಡಿದ್ದು, ಮನೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಹಣಕಾಸಿನ ಸಮಸ್ಯೆಯಿಂದ ಇಂಫಾಲ್ ನಲ್ಲಿದ್ದ ಪೂರ್ವಜರ ಮನೆಯನ್ನು ಮಾರಬೇಕಾಯಿತು. ಮಾದಕ ವ್ಯಸನ, ದೈಹಿಕ ಹಲ್ಲೆಗೆ ಒಳಗಾಗಿ, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಲ್ಲಿ ಕೆಲಸ ಮಾಡಬೇಕಾಗಿ ಬಂದಿತು. ಪರಿಹಾರ ಶಿಬಿರಗಳಿಗೆ ಜನರು ಹೊದಿಕೆಗಳು, ಚಳಿಗಾಲದ ಬಟ್ಟೆಗಳು ಮತ್ತು ಔಷಧ ದಾನ ಮಾಡುತ್ತಾರೆ. ಸಮಯ/ನೆರವು ನೀಡುವುದು, ಕಲೆ ಮತ್ತು ಸಂಗೀತದ ಜೊತೆಗೆ ದೇಣಿಗೆ ಕೂಡ ಅಗತ್ಯವೆಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಅವರು ಹೇಳುತ್ತಾರೆ.

ವರ್ಷದ ಆರಂಭದಲ್ಲಿ ಮೈತ್ರಿ ಸೊಸೈಟಿ ಮತ್ತು ಸೆಂಟರ್ ಫಾರ್ ಹೀಲಿಂಗ್ ಅಂಡ್ ಟ್ರಾಮಾಕ್ಕೆ ಹಣ ಸಂಗ್ರಹಿಸಲು ರಿಷಿಕೇಶ್ ತಂಗ್ಜಮ್ (ದಿ ಕೋಯಿ), ನಾಂಗ್ತೋಯ್ ಖುಮಾಮ್ಟೆಮ್ (ಲೈಹಾವೊ) ಮತ್ತು ಪ ಥಾವನ್ ಇನ್ನಿತರ ಮಣಿಪುರಿ ಕಲಾವಿದರೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಪ್ರದರ್ಶನ ಪ್ರಸ್ತುತಪಡಿಸಿದ್ದರು.

ಕಥೆಗಳು ತಿಳಿವಳಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ; ನಾವು ಕಲಿಸಲು ಶುಲ್ಕ ವಿಧಿಸುವುದಿಲ್ಲ.ಸಂಗ್ರಹಿಸಿದ ದೇಣಿಗೆಯಿಂದ ಸಂಗೀತ ಕೊಠಡಿಯನ್ನುಕಟ್ಟಿದ್ದೇವೆ. ಜನವರಿಯಲ್ಲಿ ಪರೀಕ್ಷೆ ನಂತರ ಮಕ್ಕಳೊಂದಿಗೆ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ ಅವರು.




Read More
Next Story