ʻಸುಲ್ತಾನಾಸ್‌ ಡ್ರೀಮ್‌ʼನ ಯುಟೋಪಿಯಾ ಲೋಕ
x

ʻಸುಲ್ತಾನಾಸ್‌ ಡ್ರೀಮ್‌ʼನ ಯುಟೋಪಿಯಾ ಲೋಕ


ʻಸುಲ್ತಾನಾಸ್‌ ಡ್ರೀಮ್‌ʼನ ಯುಟೋಪಿಯಾ ಲೋಕ

-ನವೈದ್ ಅಂಜುಮ್

..........................

ರೋಕೆಯಾ ಸಖಾವತ್ ಹೊಸೈನ್ ಬರೆದ ʻಸುಲ್ತಾನಾಸ್ ಡ್ರೀಮ್ʼ ಎಂಬ ಪುಸ್ತಕದಲ್ಲಿ ಲೇಡಿಲ್ಯಾಂಡ್ ಎಂಬ ಕಲ್ಪಿತ ಸ್ಥಳವಿದೆ. ಇದೊಂದು ಮಹಿಳಾ ರಾಜ್ಯವಾಗಿದ್ದು, ಮಹಿಳೆಯರು ಜೆನಾನಾದಲ್ಲೇ ಇರುತ್ತಾರೆ ಮತ್ತು ರ‍್ದಾನಾ ಎನ್ನುವುದು ಪುರುಷರಿಗೆ ಮೀಸಲಾದ ಸ್ಥಳ. ಮಹಿಳೆಯರು ಯಾರ ನಿಯಂತ್ರಣಕ್ಕೂ ಒಳಗಾಗದೆ ಮುಕ್ತವಾಗಿ ಹೊರಗೆ ಓಡಾಡಬಹುದು. ತಮ್ಮನ್ನು ಎಂದಿಗೂ ಗುಲಾಮರನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಭರವಸೆ ಹೊಂದಿದ್ದಾರೆ. ಮಹಿಳೆಯರು ತಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು ಯುದ್ಧದಲ್ಲಿ ಆಕ್ರಮಣಕಾರಿ ಪುರುಷರನ್ನು ಸೋಲಿಸುವ ಮೂಲಕ ಹಿಡಿತ ಸಾಧಿಸಿದ ಸ್ಥಳ ಇದು. ಸುರಕ್ಷಿತ ಮತ್ತು ಶುದ್ಧ ಭೂಮಿ, ಸಾಂಕ್ರಾಮಿಕ ರೋಗ ಎಂಬುದು ಇಲ್ಲಿ ಇಲ್ಲ ಮತ್ತು ಚಿಕ್ಕ ವಯಸ್ಸಿನಲ್ಲೇ ಯಾರೂ ಸಾಯುವುದಿಲ್ಲ. ಪ್ರತಿ ಗಿಡವೂ ಅಲಂಕೃತಗೊಂಡಿದ್ದು, ಜಾಗರೂಕತೆಯಿಂದ ನರ‍್ವಹಿಸಲ್ಪಟ್ಟ ಉದ್ಯಾನದಂತೆ ಕಾಣುವ ಸುಂದರ ಸ್ಥಳವಾಗಿದೆ. ಆಕಾಶದಲ್ಲಿ ತೇಲಾಡುವ ಕೊಳವೆ ಸಂರ‍್ಕ ಹೊಂದಿರುವ ವಿಶೇಷ ಬಲೂನು ಇದೆ. ಜನರು ಗಾಳಿಯಿಂದ ಎಷ್ಟು ಬೇಕಾದರೂ ನೀರು ತೆಗೆದುಕೊಳ್ಳಬಹುದು. ಸಸ್ಯಗಳನ್ನು ಪ್ರೀತಿಸುವ ಕಾಳಜಿಯುಳ್ಳ ಮತ್ತು ತಿಳಿವಳಿಕೆಯುಳ್ಳ ರಾಣಿಯ ನಾಯಕತ್ವದಲ್ಲಿ ಜನರು ಜ್ಞಾನವನ್ನು ಅನ್ವೇಷಿಸುತ್ತಾರೆ ಮತ್ತು ಪ್ರಕೃತಿ ಹೊಂದಿರುವ ಅಮೂಲ್ಯ ಸಂಪತ್ತನ್ನು ಹುಡುಕುತ್ತಾರೆ. ಇಲ್ಲಿ ಮಹಿಳೆಯರು ಸದಾ ಕಾಲ ಚಟುವಟಿಕೆಯಿಂದ ಇರುತ್ತಾರೆ. ಇರುವುದು ಪ್ರೀತಿ ಮತ್ತು ಸತ್ಯವನ್ನು ಆಧರಿಸಿದ ಒಂದೇ ಒಂದು ಧರ‍್ಮ. ಮಹಿಳೆ ಪ್ರಾಮಾಣಿಕಳಾಗಿದ್ದರೆ ಆಕೆಯನ್ನು ಧಾರ‍್ಮಿಕಳು ಎಂದು ಪರಿಗಣಿಸಲಾಗುತ್ತದೆ.

ʻಸುಲ್ತಾನಾಸ್ ಡ್ರೀಮ್ʼನಲ್ಲಿ ವಿಭಿನ್ನ ಹಿನ್ನೆಲೆಯಿಂದ ಬಂದಿರುವ ಸುಲ್ತಾನಾ ಮತ್ತು ಸಿಸ್ಟರ್ ಸಾರಾ ನಡುವಿನ ಸಂಭಾಷಣೆಯನ್ನು ಒಳಗೊಂಡಿದೆ. ಸಿಸ್ಟರ್ ಸಾರಾ ತನ್ನ ಸ್ನೇಹಿತೆ ಎಂದು ಸುಲ್ತಾನಾ ಪರಿಗಣಿಸುತ್ತಾಳೆ. ರೋಕೆಯಾ ೧೬ ರ‍್ಷದವಳಿದ್ದಾಗ ವಿವಾಹವಾದರು. ಆನಂತರ ಬರೆಯಲು ಪ್ರಾರಂಭಿಸಿದರು ಮತ್ತು ಅವರ ಮೊದಲ ಪ್ರಬಂಧ 'ಪಿಪಾಶಾ' ೧೯೦೨ ರಲ್ಲಿ ಕಲ್ಕತ್ತಾದ ನವಪ್ರಭ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಯಿತು. ಆಕೆಯ ಫ್ಯಾಂಟಸಿ ಕಥೆ ೧೯೦೫ ರಲ್ಲಿ ಮದ್ರಾಸಿನ ಇಂಡಿಯನ್ ಲೇಡೀಸ್ ಮ್ಯಾಗಜಿನ್‌ನಲ್ಲಿ ಪ್ರಕಟಗೊಂಡಿತು. ಈ ಕಥೆ ಆಕೆಯನ್ನು ಭಾರತೀಯ ವೈಜ್ಞಾನಿಕ ಕಾದಂಬರಿಗಳ ಪ್ರರ‍್ತಕಳನ್ನಾಗಿ ಮಾಡಿತು. ಆದರೆ, ಆಕೆ ಮೃತಪಟ್ಟ ೪೧ ರ‍್ಷಗಳ ನಂತರ ೧೯೭೩ ರವರೆಗೆ ಅವರ ಕೃತಿಗಳು ಹೆಚ್ಚು ಗಮನ ಸೆಳೆಯಲಿಲ್ಲ. ಅವರ ಕೃತಿಗಳ ಸಂಗ್ರಹವನ್ನು ಕವಿ ಮತ್ತು ವಿರ‍್ಶಕ ಅಬ್ದುಲ್ ಖಾದಿರ್ ಸಂಕಲಿಸಿದ್ದು, ಢಾಕಾದ ಬಾಂಗ್ಲಾ ಅಕಾಡೆಮಿ ಪ್ರಕಟಿಸಿತು.

ಆದರೆ, ವೈಜ್ಞಾನಿಕ ಕಾದಂಬರಿಯನ್ನು ಬರೆದ ಮೊದಲ ಮಹಿಳೆ ರೋಕೆಯಾ ಅಲ್ಲ. ಆ ಶ್ರೇಯ ೧೮೧೮ರಲ್ಲಿ ಫ್ರಾಂಕೆನ್‌ಸ್ಟೈನ್ ಅನ್ನು ಬರೆದ ಇಂಗ್ಲಿಷ್ ಕಾದಂಬರಿಗರ‍್ತಿ ಮೇರಿ ಶೆಲ್ಲಿಗೆ ಸಲ್ಲುತ್ತದೆ. ವಿಕ್ಟರ್ ಫ್ರಾಂಕೆನ್‌ಸ್ಟೈನ್ ಎಂಬ ಯುವ ವಿಜ್ಞಾನಿ ಸತ್ತ ದೇಹದ ಭಾಗಗಳನ್ನು ಬಳಸಿಕೊಂಡು ಬುದ್ಧಿವಂತ ದೈತ್ಯನನ್ನು ಸೃಷ್ಟಿಸುತ್ತಾನೆ. ಅದು ಉಂಟುಮಾಡುವ ತಲ್ಲಣಗಳು ಕಾದಂಬರಿಯಲ್ಲಿ ಅನಾವರಣಗೊಂಡಿವೆ. ಈಗ ಅನೇಕ ಲೇಖಕಿಯರು ವೈಜ್ಞಾನಿಕ ಅಥವಾ ಸೈನ್ಸ್‌ ಫಿಕ್ಷನ್‌ ಎಂಬ ಪ್ರಕಾರವನ್ನು ಮುನ್ನಡೆಸುತ್ತಿದ್ದಾರೆ. ಕೆಲವು ಗಮನರ‍್ಹ ಹೆಸರುಗಳೆಂದರೆ ಮಂಜುಳಾ ಪದ್ಮನಾಭನ್, ವಂದನಾ ಸಿಂಗ್, ಪ್ರಿಯಾ ಸಾರುಕ್ಕೈ ಛಬ್ರಿಯಾ, ಕಲ್ಪನಾ ಸ್ವಾಮಿನಾಥನ್, ಎಸ್‌.ಬಿ. ದಿವ್ಯಾ (ದಿವ್ಯಾ ಶ್ರೀನಿವಾಸನ್ ಬ್ರೀಡ್), ಲಾವಣ್ಯ ಲಕ್ಷ್ಮೀನಾರಾಯಣ, ತಾಶನ್ ಮೆಹ್ತಾ ಮತ್ತು ಇತ್ತಿತರರು. ಕಲ್ಪಿತ ಪ್ರಪಂಚಗಳಲ್ಲಿ ನಡೆಯುವ ಈ ಕೃತಿಗಳು ನಮ್ಮ ಭವಿಷ್ಯ ಹೇಗಿರಬಹುದು ಎಂಬುದನ್ನು ಕಟ್ಟಿಕೊಡುತ್ತವೆ.

ಮಂಜುಳಾ ಪದ್ಮನಾಭನ್ ದೆಹಲಿಯ ರಾಜತಾಂತ್ರಿಕರ ಕುಟುಂಬದಲ್ಲಿ ಜನಿಸಿದರು. ತಂದೆಯ ಉದ್ಯೋಗದ ಹಿನ್ನೆಲೆಯಲ್ಲಿ ಪಾಕಿಸ್ತಾನ, ಸ್ವೀಡನ್ ಮತ್ತು ಥೈಲ್ಯಾಂಡ್‌ ಮತ್ತಿತರ ದೇಶಗಳಲ್ಲಿದ್ದರು. ಹದಿಹರೆಯದಲ್ಲಿ ಭಾರತಕ್ಕೆ ಹಿಂತಿರುಗಿ, ವೈಜ್ಞಾನಿಕ ಕಾಲ್ಪನಿಕ ಬರವಣಿಗೆ ಆರಂಭಿಸಿದರು. ಬಾಲ್ಯದ ವಿಭಿನ್ನ ಅನುಭವಗಳು ಅವರಿಗೆ ನೆರವಾದವು. ʻಪ್ರಪಂಚವನ್ನು ಸುತ್ತುವುದರಿಂದ ವಿಭಿನ್ನ ಆಲೋ ಚನಾ ವಿಧಾನ, ವಿಭಿನ್ನ ಆಯಾಮಗಳನ್ನು ಕಂಡುಕೊಳ್ಳಬಹುದುʼ ಎಂದು ಕಲಾವಿದೆ, ವ್ಯಂಗ್ಯಚಿತ್ರಕರ‍್ತಿ ಮತ್ತು ನಾಟಕಕಾರರೂ ಆಗಿರುವ ಪದ್ಮನಾಭನ್ ಬರೆಯುತ್ತಾರೆ. ʻಸ್ಟೋಲನ್ ಅರ‍್ಸ್ ಅಂಡ್ ಅದರ್ ಕ್ಯೂರಿಯಾಸಿಟೀಸ್ʼ (ಹ್ಯಾಚೆಟ್ ಇಂಡಿಯಾ ಪ್ರಕಟಣೆ) ಪುಸ್ತಕದ ಮುನ್ನುಡಿಯಲ್ಲಿ ಅವರ ಕೃತಿಗಳ ವಿವರಗಳಿವೆ. ಲೇಖಕರು ಕುತೂಹಲದಿಂದ ಮರ‍್ಗವನ್ನು ಕಂಡುಕೊಳ್ಳುತ್ತಾರೆ; ಆದರೆ, ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಸ ವಿಷಯಗಳ ಅನ್ವೇಷಣೆಯಿಂದ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶ ಪಡೆಯಬಹುದು ಎನ್ನುವ ಮಂಜುಳಾ ಪದ್ಮನಾಭನ್, ತಮ್ಮ ವೈಜ್ಞಾನಿಕ ಕಾಲ್ಪನಿಕ ಕಥೆಗಳಲ್ಲಿ ಭವಿಷ್ಯದ ಜಗತ್ತನ್ನು ಪರಿಸರ-ಸ್ತ್ರೀವಾದಿ ದೃಷ್ಟಿಕೋನದಿಂದ ತೋರಿಸುತ್ತಾರೆ. ಅವರ ಕೃತಿಗಳು ಪ್ರಮುಖ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸುತ್ತವೆ. ಅಂಗಾಂಗಗಳ ಅಕ್ರಮ ಮಾರಾಟ, ಅತ್ಯಾಚಾರ ಮತ್ತು ಹೆಣ್ಣು ಭ್ರೂಣಗಳ ಹತ್ಯೆಯಂತಹ ಆತಂಕಕಾರಿ ಸಂಗತಿಗಳನ್ನು ನಾವು ಗಮನಿಸಬೇಕೆಂದು ಅವರು ಬಯಸುತ್ತಾರೆ. ʻಎಸ್ಕೇಪ್ʼ ಪುಸ್ತಕ ವೈಯಕ್ತಿಕ ಸ್ವಾತಂತ್ರ‍್ಯದ ಮೇಲಿನ ನರ‍್ಬಂಧಗಳನ್ನು ಸುಧಾರಿಸದಿದ್ದರೆ ದೇಶದ ಕಠೋರ ಭವಿಷ್ಯವನ್ನು ಮುನ್ಸೂಚಿಸುತ್ತದೆ.

ʻಸೈನ್ಸ್ ಫಿಕ್ಷನ್ ಮತ್ತು ಇಂಡಿಯನ್ ವುಮೆನ್ ರೈರ‍್ಸ್: ಎಕ್ಸ್‌ಪ್ಲೋರಿಂಗ್ ರಾಡಿಕಲ್ ಪೊಟೆನ್ಷಿಯಲ್ಸ್ʼ ಕೃತಿಯ ಲೇಖಕಿ ವಂದನಾ ಸಿಂಗ್. ದಿಲ್ಲಿಯಲ್ಲಿ ಹುಟ್ಟಿ ಬೆಳೆದ ವಂದನಾ ಸಿಂಗ್,ಈಗ ಅಮೆರಿಕದಲ್ಲಿ ವಾಸಿಸುತ್ತಿದ್ದು ಭೌತಶಾಸ್ತ್ರದ ಪ್ರಾಧ್ಯಾಪಕಿ. ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಬರೆಯುತ್ತಾರೆ. ಅವರ ಮೊದಲ ಪುಸ್ತಕ, ʻದಿ ವುಮನ್ ಹೂ ಥಾಟ್ ಶಿ ವಾಸ್ ಎ ಪ್ಲಾನೆಟ್ ಅಂಡ್ ಅದರ್ ಸ್ಟೋರೀಸ್ (೨೦೦೮)ʼ ವೈಜ್ಞಾನಿಕ ಕಾಲ್ಪನಿಕತೆಯು ಹೇಗೆ ಅಗಾಧತೆಯೊಂದಿಗೆ ಸಂರ‍್ಕ ಹೊಂದಲು ಅನುವು ಮಾಡಿಕೊಡುತ್ತದೆ ಎಂಬುದನ್ನು ತೋರಿಸುತ್ತದೆ. ಕಾಲೇಜಿನಲ್ಲಿ ಓದುತ್ತಿರುವ ವಿದ್ಯರ‍್ಥಿಯೊಬ್ಬನಿಗೆ ದೆಹಲಿಯ ಬೀದಿಯಲ್ಲಿ ವಿಚಿತ್ರವಾದ ನಾಲ್ಕು ಬದಿಯ ವಸ್ತುವೊಂದು ಸಿಗುತ್ತದೆ. ಇದು ಬಾಹ್ಯಾಕಾಶ ನೌಕೆಯೇ ಅಥವಾ ರಹಸ್ಯ ಆಯುಧವೇ ಎಂದು ಗೊತ್ತಾಗುವುದಿಲ್ಲ. ಕಾಫ್ಕನನ್ನು ನೆನಪಿಸುವ ಒಂದು ವಿಚಿತ್ರ ಕಥೆಯಲ್ಲಿ ೧೧ ನೇ ಶತಮಾನದ ಕವಿಯೊಬ್ಬ ಬಾಹ್ಯಾಕಾಶ ನೌಕೆಯಲ್ಲಿ ಬದಲಾಗಿ ಬಿಡುತ್ತಾನೆ. ಜಗತ್ತು ಮತ್ತು ಬ್ರಹ್ಮಾಂಡವನ್ನು ನೋಡುವ ನಮ್ಮ ದೃಷ್ಟಿಕೋನ ವನ್ನು ಮತ್ತು ವಿಶಾಲ ತಿಳಿವಳಿಕೆ ಹೊಂದಲು ನಮ್ಮ ಆಲೋಚನಾ ವಿಧಾನವನ್ನು ಬದಲಿಸಿಕೊಳ್ಳಬೇಕೆಂದು ತಿಳಿಸಿಕೊಡುತ್ತಾರೆ. ವೈಜ್ಞಾನಿಕ ಕಾಲ್ಪನಿಕ ಕಾದಂಬರಿಗಳು ನಮ್ಮ ಮತ್ತು ಪ್ರಪಂಚದ ಬಗ್ಗೆ ನಮ್ಮ ನಂಬಿಕೆಗಳು ಮತ್ತು ಊಹೆಗಳನ್ನು ಪ್ರಶ್ನಿಸಲು ಮತ್ತು ಸವಾಲು ಹಾಕಲು ಅನುವು ಮಾಡಿಕೊಡುತ್ತದೆ ಎಂದು ಅವರು ಸಂರ‍್ಶನವೊಂದರಲ್ಲಿ ಹೇಳಿದ್ದರು. ಇದು ವಸಾಹತುಶಾಹಿಯೋತ್ತರ ರಾಷ್ಟ್ರಗಳ ಬರಹಗಾರರಿಗೆ ತಮ್ಮದೇ ಭವಿಷ್ಯ ಮತ್ತು ರ‍್ಯಾಯಗಳನ್ನು ಕಲ್ಪಿಸಿಕೊಳ್ಳಲು ಅವಕಾಶ ನೀಡುವ ಶಕ್ತಿಯುತ ಮತ್ತು ವಿಮೋಚನೆಯ ಕರ‍್ಯ. ಹವಾಮಾನ ಬಿಕ್ಕಟ್ಟನ್ನು ಎದುರಿಸಲು ನೈರ‍್ಗಿಕ ಪ್ರಪಂಚವನ್ನು ರ‍್ಥಮಾಡಿಕೊಳ್ಳುವ ಮತ್ತು ಸಂರ‍್ಕಿಸುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಅವರು ಹೇಳಿದ್ದಾರೆ.

ಎಸ್‌.ಬಿ. ದಿವ್ಯಾ ʻರನ್‌ಟೈಮ್ʼ (೨೦೧೬) ಮತ್ತು ʻಮಷಿನ್‌ಹುಡ್ʼ (೨೦೨೧) ನಂಥ ಪುಸ್ತಕಗಳಿಂದ ವೈಜ್ಞಾನಿಕ ಕಾದಂಬರಿ ಓದುಗರಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ತಂತ್ರಜ್ಞಾನ ಮತ್ತು ಮಾನವರು ಹೇಗೆ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದನ್ನು ಅಧ್ಯಯನ ಮಾಡುವ ಮೂಲಕ ಅವರು ಪ್ರಸ್ತುತ ಮತ್ತು ಭವಿಷ್ಯವನ್ನು ಒಟ್ಟಾಗಿಸಿದ್ದಾರೆ. ತಂತ್ರಜ್ಞಾನದ ನೈತಿಕ ಪರಿಣಾಮಗಳನ್ನು ಮತ್ತು ವೈಜ್ಞಾನಿಕ ಪ್ರಗತಿಗಳು ಮಾನವನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಗಣಿಸುವಂತೆ ಮಾಡುತ್ತಾರೆ. ʻಕಂಟಿಂಜೆನ್ಸಿ ಪ್ಲಾನ್ಸ್‌ ಫಾರ್‌ ಅಪೋಕ್ಯಾಲಿಪ್ಸ್‌ ಆಂಡ್‌ ಅದರ್‌ ಪಾಸಿಬಲ್‌ ಸಿಚುಯೇಷನ್ಸ್‌ʼ (೨೦೧೯) ಪುಸ್ತಕದಲ್ಲಿರುವ ಒಂದು ಕಥೆಯಲ್ಲಿ, ನಾವು ಯಾರು ಮತ್ತು ಕಾಲ್ಪನಿಕ ಜಗತ್ತಿನಲ್ಲಿ ಪ್ರೀತಿ ಎಂದರೆ ಏನು ಎಂಬ ಕಠಿಣ ಪ್ರಶ್ನೆಗಳನ್ನು ಅನ್ವೇಷಿಸುತ್ತಾರೆ. ಸಣ್ಣ ಜೀವಿಗಳನ್ನು ಅಧ್ಯಯನ ಮಾಡಿದ ಮತ್ತು ಹಾನಿಕಾರಕ ವಸ್ತುಗಳಿಂದ ರಕ್ಷಿಸಲು ಹೊರಗಿನ ಪ್ರಪಂಚದಿಂದ ತನ್ನನ್ನು ಪ್ರತ್ಯೇಕಿಸಿಕೊಂಡ ಮಹಿಳಾ ವಿಜ್ಞಾನಿಯೊಬ್ಬರನ್ನು ಈ ಕಥೆ ನಮಗೆ ಪರಿಚಯಿಸುತ್ತದೆ. ಈ ರ‍್ಷದ ಆರಂಭದಲ್ಲಿ ಬಿಡುಗಡೆಗೊಂಡ ಕಾದಂಬರಿ ʻಮೇರುʼ, ಜಯಂತಿ ಮತ್ತು ವಹಾ ಎಂಬ ಮಹಿಳೆಯರನ್ನು ಕೇಂಸ್ರವಾಗಿ ಇರಿಸಿಕೊಂಡಿದೆ. ಅಲಾಯ್ಸ್ ಎಂದು ಕರೆಯಲ್ಪಡುವ ಮಾನವರೂಪಿಗಳು ಜಯಂತಿಯನ್ನು ದತ್ತು ಪಡೆಯುತ್ತಾರೆ. ವಹಾ ಅಲಾಯ್‌ಗಳ ಪೈಲಟ್. ಇಬ್ಬರೂ ಭೂಮಿಯನ್ನು ಹೋಲುವ ಮೇರು ಎಂಬ ಗ್ರಹದಲ್ಲಿ ಭೇಟಿಯಾಗುತ್ತಾರೆ.

ಪದ್ಮನಾಭನ್ ಮತ್ತು ವಂದನಾ ಮಹಿಳಾ ಬರಹಗಾರರು, ಬಹುಸಾಂಸ್ಕೃತಿಕ ಬರಹಗಾರರು ಅಥವಾ ವಸಾಹತುಶಾಹಿಯೋತ್ತರ ಬರಹಗಾರರು ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ ಏಕೆಂದರೆ, ಅವರು ನರ‍್ದಿಷ್ಟ ರ‍್ಗಕ್ಕೆ ಸೀಮಿತವಾಗಿರಲು ಬಯಸುವುದಿಲ್ಲ. ಅವರ ಕಥೆಗಳಲ್ಲಿ ಸೃಷ್ಟಿಸುವ ವಿಭಿನ್ನ ಪ್ರಪಂಚಗಳು ಅವರ ಮಿತಿಯಿಲ್ಲದ ಕಲ್ಪನೆಯನ್ನು ಅನಾವರಣಗೊಳಿಸುತ್ತದೆ. ೨೦೧೫ ರಲ್ಲಿ ಬರೆದ ʻಎಸ್ಕೇಪ್ʼ ಕಾದಂಬರಿಯು ಮೀಜಿ ಎಂಬ ಹುಡುಗಿ ಸುತ್ತ ಸುತ್ತುತ್ತದೆ. ಇಡೀ ಜೀವನವನ್ನು ಜೈಲಿನಲ್ಲಿ ಕಳೆದ ಮೀಜಿ, ತನ್ನ ತಾಯ್ನಾಡನ್ನು ತೊರೆಯಬೇಕಾಗಿ ಬರುತ್ತದೆ. ‘ಸುಲ್ತಾನಾಸ್ ಡ್ರೀಮ್‌ʼ ಪುಸ್ತಕದಲ್ಲಿ ವಿವರಿಸಿರುವ ಲೇಡಿಲ್ಯಾಂಡ್‌ಗಿಂತ ಈ ಜಗತ್ತು ತುಂಬ ಭಿನ್ನವಾಗಿದೆ. ಈ ಹೊಸ ಜಗತ್ತಿನಲ್ಲಿ ತಂತ್ರಜ್ಞಾನವು ವಸ್ತುಗಳನ್ನು ತಯಾರಿಸುವ ವಿಧಾನವನ್ನು ಬದಲಾಯಿಸಿದೆ. ಹೆಣ್ಣಿಲ್ಲದ ಪ್ರಪಂಚದಲ್ಲಿ ಗಂಡಸರೇ ಅಧಿಕಾರ ನಡೆಸುತ್ತಾರೆ ಮತ್ತು ವಿಷಯಗಳು ಅಸ್ತವ್ಯಸ್ತವಾಗಿವೆ. ಮೀಜಿ ಓಡಿಹೋಗಲು ಪ್ರಯತ್ನಿಸಿದಾಗ, ತನ್ನ ನಿಜವಾದ ಗುರುತು ಕಂಡುಕೊಳ್ಳುತ್ತಾಳೆ ಮತ್ತು ಬದುಕುಳಿದ ಏಕೈಕ ವ್ಯಕ್ತಿಯಾಗಿ ಎಷ್ಟು ಅನನ್ಯಳು ಎಂಬುದನ್ನು ರ‍್ಥ ಮಾಡಿಕೊಳ್ಳುತ್ತಾಳೆ. ತನ್ನೊಳಗಿನ ಶಕ್ತಿಗಳನ್ನು ನರ‍್ವಹಿಸಲು ಹೋರಾಡುತ್ತಿರುವಾಗ, ಜನರಲ್‌ಗಳಿಂದ ಕೊಲ್ಲಲ್ಪಟ್ಟ ಮಹಿಳೆಯರ ಭಯಾನಕ ಕಥೆಗಳ ಬಗ್ಗೆ ಕಲಿಯುತ್ತಾಳೆ. ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಈ ಮಹಿಳೆಯರಿಗೆ ಬದುಕಲು ಅವಕಾಶ ನಿರಾಕರಿಸಲಾಯಿತು. ಮಿಲಿಟರಿ ನಾಯಕರು ಜನರಿಗೆ ಸೂಚನೆ ನೀಡಿದ ಸೂಚನೆ: ʻಡ್ರೋನ್‌ಗಳು ರ‍್ಮಿನ್ ಬುಡಕಟ್ಟು ಮಹಿಳೆಯರಂತೆ ಇರಬೇಕು: ವಿಧೇಯರು, ಬುದ್ಧಿವಂತರು ಮತ್ತು ಪ್ರಶ್ನಿಸಲು ಆಗದವರುʼ. ಪುರುಷ ಪ್ರಾಬಲ್ಯದ ಜಗತ್ತಿನಲ್ಲಿ ತನ್ನನ್ನು ಒಂಟಿಯಾಗಿ ಬಿಟ್ಟಿದ್ದಕ್ಕಾಗಿ ಮೀಜಿ ತಾಯಿ ಮೇಲೆ ಸಿಟ್ಟಾಗಿದ್ದಳು; ಆದರೆ, ಅರಿವು ಮೂಡಿದ ಬಳಿಕ ಬದುಕಲು ಹೋರಾಡುವುದನ್ನು ಮುಂದುವರಿಸುವುದಾಗಿ ಅವಳು ಭರವಸೆ ನೀಡುತ್ತಾಳೆ.

---------

(ಲೇಖನ ದ ಫೆಡರಲ್‌ ನಲ್ಲಿ ಡಿಸೆಂಬರ್‌ ೦೮, ೨೦೨೩ ರಂದು ಪ್ರಕಟಗೊಂಡಿತ್ತು)Read More
Next Story