ಮಿಶ್ರ ಲಿಂಗ ಫುಟ್ಬಾಲ್ ತಂಡದಿಂದ ನಾಯಕತ್ವ ಸಬಲೀಕರಣ

ಆಲಿಯಾ ವಾಹಿದ್ ಭಲ್ದಾರ್ ಆರು ತಿಂಗಳ ಹಿಂದೆ ಪುಣೆ ನಗರದ ಹಿಂದುಳಿದ ಪ್ರದೇಶದ ಹದಾಸ್ಪರ್ ಗೆ ನಿಯೋಜನೆಗೊಂಡಾಗ, ಅವರಿಗೆ ಗುರಿಯೊಂದನ್ನು ನೀಡಲಾಗಿತ್ತು. ಮೊದಲ ವರ್ಷದ ಮನೋವಿಜ್ಞಾನ ವಿದ್ಯಾರ್ಥಿಯಾದ ಅವರು ಹಿಂದುಳಿದ ಮಕ್ಕಳಿಗೆ ನಾಯಕತ್ವ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವ ಜಾಗತಿಕ ಸಂಸ್ಥೆ ಎನೇಬ್ಲಿಂಗ್ ಲೀಡರ್ಶಿಪ್ (ಇಎಲ್)ನಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.


ಮಿಶ್ರ ಲಿಂಗ ಫುಟ್ಬಾಲ್ ತಂಡದಿಂದ ನಾಯಕತ್ವ ಸಬಲೀಕರಣ

-ಸಮೀರ್ ಕೆ ಪುರ್ಕಾಯಸ್ಥ

……

ಆಲಿಯಾ ವಾಹಿದ್ ಭಲ್ದಾರ್ ಆರು ತಿಂಗಳ ಹಿಂದೆ ಪುಣೆ ನಗರದ ಹಿಂದುಳಿದ ಪ್ರದೇಶದ ಹದಾಸ್ಪರ್ ಗೆ ನಿಯೋಜನೆಗೊಂಡಾಗ, ಅವರಿಗೆ ಗುರಿಯೊಂದನ್ನು ನೀಡಲಾಗಿತ್ತು. ಮೊದಲ ವರ್ಷದ ಮನೋವಿಜ್ಞಾನ ವಿದ್ಯಾರ್ಥಿಯಾದ ಅವರು ಹಿಂದುಳಿದ ಮಕ್ಕಳಿಗೆ ನಾಯಕತ್ವ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವ ಜಾಗತಿಕ ಸಂಸ್ಥೆ ಎನೇಬ್ಲಿಂಗ್ ಲೀಡರ್ಶಿಪ್ (ಇಎಲ್)ನಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಕ್ಕಳಲ್ಲಿ ನಾಯಕತ್ವ ತರಬೇತಿ, ವೈವಿಧ್ಯತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುವ ಮಿಶ್ರ ಲಿಂಗ ಫುಟ್ಬಾಲ್ ಕಾರ್ಯಕ್ರಮಕ್ಕೆ ಯುವ ಪ್ರತಿಭಾವಂತ ಆಟಗಾರರನ್ನು ಹುಡುಕುತ್ತಿದ್ದರು. ಹಾಗೆ ನೋಡಿದರೆ, ಆಕೆಯ ಕೆಲಸ ಸರಳವಾದುದು. ವಾಸ್ತವವೆಂದರೆ, ಅನೇಕರು ಯೋಚಿಸುವಂತೆ ಈ 'ಗುರಿ' ಸಾಧಿಸುವುದು ಹೆಚ್ಚು ಕಷ್ಟಕರ. ಏಕೆಂದರೆ ಈ ಉಪಕ್ರಮವು ನಾಗರಿಕತೆಯಷ್ಟೇ ಪುರಾತನವಾದ ಲಿಂಗ ಬೈನರಿಯನ್ನು ನಿರಚನಗೊಳಿಸಬೇಕಾಗುತ್ತದೆ.

ʻನಾವು ಸಮಾಜದ ಕಡೆಗಣಿಸಲ್ಪಟ್ಟ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದ ವಿಭಿನ್ನ ಲಿಂಗಗಳ ಮಕ್ಕಳೊಂದಿಗೆ ಕೆಲಸ ಮಾಡಬೇಕಿರುವುದರಿಂದ, ಇದು ಸವಾಲಿನ ಕೆಲಸʼ ಎಂದು ಅವರು ʻಫೆಡರಲ್ʼಗೆ ದೂರವಾಣಿ ಸಂಭಾಷಣೆ ವೇಳೆ ತಿಳಿಸಿದರು.

ಮಿಶ್ರ ಲಿಂಗ ತಂಡದಲ್ಲಿರುವ ಮಕ್ಕಳು: ʻಹುಡುಗಿಯರು ಮನೆಯಲ್ಲಿ ಇರುವುದು; ಹುಡುಗರು ಆಟವಾಡಲು ಹೊರಗೆ ಹೋಗುವುದು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಮಿಶ್ರ ಫುಟ್ಬಾಲ್ ನ್ನು ಪ್ರೋತ್ಸಾಹಿಸುವುದು ಕಷ್ಟವಾಗಿತ್ತು. ಮಕ್ಕಳ ಆರಂಭಿಕ ಪ್ರತಿಕ್ರಿಯೆ ʻಇದು ಹೇಗೆ ಸಾಧ್ಯ?ʼ ಶಾಲೆಗಳಲ್ಲೂ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇದ್ದಿತ್ತು. ಪೋಷಕರನ್ನು ಮನವೊಲಿಸುವುದು ಕೂಡ ಕಷ್ಟಕರವಾಗಿತ್ತುʼ ಎಂದು ಅವರು ಹೇಳಿದರು.

ಯುನಿಸೆಫ್ ವರದಿ ಪ್ರಕಾರ, ಭಾರತದಲ್ಲಿ ಹುಡುಗರ ಮತ್ತು ಹುಡುಗಿಯರ ಹದಿಹರೆಯ ವಿಭಿನ್ನವಾಗಿರುತ್ತದೆ. ಹುಡುಗರಿಗೆ ಹೆಚ್ಚಿನ ಸ್ವಾತಂತ್ರ್ಯ ಇರುತ್ತದೆ. ಆದರೆ, ಹುಡುಗಿಯರು ಶಿಕ್ಷಣ, ಮದುವೆ ಮತ್ತು ಸಾಮಾಜಿಕ ಸಂಬಂಧಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಮಿತಿ ಎದುರಿಸುತ್ತಾರೆ ಎಂದು ವರದಿ ಹೇಳುತ್ತದೆ.

ಬದಿಗೊತ್ತಲ್ಪಟ್ಟ ಮತ್ತು ಗ್ರಾಮೀಣ ಸಮುದಾಯಗಳಲ್ಲಿ, ಗಮನಾರ್ಹ ಅಸಮಾನತೆ ಇದೆ. 'ಗ್ರಾಮೀಣ ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಸ್ಥಿತಿ 2023' ವರದಿ ಪ್ರಕಾರ, ಶೇ.78 ಪೋಷಕರು ಹೆಣ್ಣು ಮಕ್ಕಳಿಗೆ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ ನೀಡಲು ಬಯಸುವ ಪೋಷಕರ ಪ್ರಮಾಣ ಶೇ.78. ಇಂಥ ಬಾಲಕರ ಪ್ರಮಾಣ ಶೇ.82. ಯುನಿಸೆಫ್ ವರದಿ ಪ್ರಕಾರ, ಜಾಗತಿಕವಾಗಿ ಹೆಣ್ಣುಮಕ್ಕಳು ಹೆರಿಗೆ ಸಮಯದಲ್ಲಿ ಬದುಕುಳಿಯುವ, ಶಾಲಾ ಮುನ್ನ ಶಿಕ್ಷಣ ಪಡೆಯುವ ಮತ್ತು ಭಾಗವಹಿಸುವಿಕೆಗೆ ಹೆಚ್ಚು ಅವಕಾಶಗಳಿವೆ. ಆದರೆ, ಭಾರತ ಹುಡುಗರಿಗಿಂತ ಹೆಚ್ಚು ಹುಡುಗಿಯರು ಸಾಯುವ ಏಕೈಕ ದೇಶ.

ಜಾಗತಿಕ ಲಿಂಗ ಕಂದರ ಸೂಚ್ಯಂಕದಲ್ಲಿ ಭಾರತ 146 ದೇಶಗಳಲ್ಲಿ 127 ನೇ ಸ್ಥಾನದಲ್ಲಿದೆ.

ʻಹೆಣ್ಣುಮಕ್ಕಳನ್ನು ಆಟಕ್ಕೆ ಕಳುಹಿಸುವ ಕಲ್ಪನೆ ಅನೇಕ ಪೋಷಕರಿಗೆ ಬಂಡಾಯದಂತೆ ಕಾಣಿಸಿತು. ಒಟ್ಟಾಗಿ ಆಟವಾಡುವ ಕಲ್ಪನೆ ದ್ರೋಹ ಎಂದು ಅವರು ಭಾವಿಸಿದರುʼ ಎಂದು ಆಲಿಯಾ ಹೇಳಿದರು.

ಎನೇಬ್ಲಿಂಗ್ ಲೀಡರ್ ಶಿಪ್ ಈ ಮನಸ್ಥಿತಿಯನ್ನು ಬದಲಿಸಲು ಕಳೆದ ನವೆಂಬರ್ನಲ್ಲಿ ಮಿಶ್ರ ಲಿಂಗ ಫುಟ್ಬಾಲ್ ಪಂದ್ಯಾವಳಿಯನ್ನು ರೂಪಿಸಿತು. ಗ್ರಾಮೀಣ ಮತ್ತು ನಗರ ಸರ್ಕಾರಿ ಶಾಲೆಗಳ 11-13ರ ವಯೋಮಾನದ ಸುಮಾರು 5,000 ಹುಡುಗರು ಮತ್ತು ಹುಡುಗಿಯರನ್ನು

ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿ ತಂಡದಲ್ಲಿ ಸಮಾನ ಸಂಖ್ಯೆಯ ಬಾಲಕ ಮತ್ತು ಬಾಲಕಿಯರು ಇರುತ್ತಾರೆ. ತಂಡಗಳನ್ನು ಒಂಬತ್ತು ಪ್ರಾದೇಶಿಕ ಗುಂಪುಗಳಾಗಿ ವಿಂಗಡಿಸಲಾಗಿದೆ. ವಿಜೇತರು ಫೆಬ್ರವರಿ ಮಧ್ಯದಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಲೀಗ್ನಲ್ಲಿ ಆಡಲು ಅರ್ಹತೆ ಪಡೆಯುತ್ತಾರೆ.

ಟೂರ್ನಿಯ ಅಂತಿಮ ಪಂದ್ಯ ಜನವರಿ 7 ರಂದು ನಡೆಯಲಿದೆ. ʻಆರಂಭದಲ್ಲಿ ಆಟಗಾರರನ್ನು ಹುಡುಕುವುದು ಕಷ್ಟಕರವಾಗಿತ್ತು. ಪೋಷಕರು ಮಗಳನ್ನು ಗಂಡು ಮಕ್ಕಳೊಂದಿಗೆ ಆಟವಾಡಲು ಕಳುಹಿಸಲು ಹಿಂಜರಿಯುತ್ತಿದ್ದರುʼ ಎಂದು ಎನೇಬ್ಲಿಂಗ್ ಲೀಡರ್ ಶಿಪ್ ನ

ಉಪೇಂದ್ರ ಸಂತೋಷ್ ಯಾದವ್ ಹೇಳಿದರು. ನಾಲ್ವರು ಹುಡುಗಿಯರು ಕಾರ್ಯಕ್ರಮದಿಂದ ಹೊರನಡೆದರು. ಆಲಿಯಾ ಕೂಡ ಈ ಸಮಸ್ಯೆ ಎದುರಿಸಿದರು. ʻಪೋಷಕರ ವಿರೋಧದಿಂದ ಕಾರ್ಯಕ್ರಮದಿಂದ ಹೊರಗುಳಿದಿದ್ದ ಬಾಲಕಿಯೊಬ್ಬಳು ಮತ್ತೆ ವಾಪಸಾಗಿದ್ದು ಒಂದು ಬೆಳ್ಳಿಗೆರೆʼ ಎಂದು ಹೇಳಿದರು.

ಎಲ್ಲ ಭಾಗಿದಾರರಿಂದ ಕ್ಕ್ರೀಡಾಕೂಟಕ್ಕೆ ಸಿಗುತ್ತಿರುವ ಪ್ರೋತ್ಸಾಹ ಸಿಗುತ್ತಿದೆ ಎಂದು ಎನೇಬ್ಲಿಂಗ್ ಲೀಡರ್ ಶಿಪ್ನ ಸಂಸ್ಥಾಪಕ ಮತ್ತು ಸಿಇಒ ರವಿ ಸೊನ್ನದ್ ಹೇಳಿದರು. ʻಇಎಲ್ ಬಾಲಕಿಯರ ಸಬಲೀಕರಣ ಮತ್ತು ಬಾಲಕಿಯರ ಬಗೆಗಿನ ಬಾಲಕರ ಗ್ರಹಿಕೆಗಳನ್ನು ಬದಲಿಸಲು ಕೆಲಸ ಮಾಡುತ್ತದೆ. ಸಂವಹನದ ಕೊರತೆ ತಪ್ಪು ತಿಳಿವಳಿಕೆಗೆ ಕಾರಣವಾಗುತ್ತದೆʼ ಎಂದು ಹೇಳಿದರು. ʻಸಮಾನ ಅವಕಾಶ ನೀಡುವ ಮೂಲಕ ಪರಸ್ಪರರ ಸಾಮರ್ಥ್ಯಗಳು, ಆಟದ ಶೈಲಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹುಡುಗಿಯರನ್ನು ಪ್ರೋತ್ಸಾಹಿಸುವ ಸಮುದಾಯವನ್ನು ಬೆಳೆಸಲು ಇಚ್ಛಿಸುತ್ತೇವೆ. ಲಿಂಗವನ್ನು ಪರಿಗಣಿಸದೆ ಯುವಜನರು ತಮ್ಮ ಕನಸುಗಳನ್ನು ಪೂರೈಸಿಕೊಳ್ಳಲು ಅನುವು ಮಾಡಿಕೊಡುತ್ತೇವೆʼ ಎಂದು ಹೇಳಿದರು.

ಹಳೆಯ ಪಡಿಯಚ್ಚನ್ನು ಬದಲಿಸುವುದು ಸುಲಭವಲ್ಲ ಮತ್ತು ಒಂದು ಕ್ರೀಡಾಕೂಟ ಅದನ್ನು ಸಾಧಿಸಲಾಗುವುದಿಲ್ಲ. ಎನೇಬ್ಲಿಂಗ್ ಲೀಡರ್ ಶಿಪ್ನ ಇದಕ್ಕಾಗಿ ಶಿಕ್ಷಣ ವಿಧಾನ, ತರಬೇತಿದಾರರು ಮತ್ತು ಬೋಧನಾತಂತ್ರಗಳನ್ನು ರೂಪಿಸಿದೆ. ಇಎಲ್- ಪ್ಲೇ ಕಾರ್ಯಕ್ರಮದಡಿ ಹಮ್ಮಿಕೊಂಡಿರುವ ಮಿಶ್ರ ಲಿಂಗ ಫುಟ್ಬಾಲ್ ಪಂದ್ಯಾವಳಿಯು ದೊಡ್ಡ ಕಾರ್ಯಕ್ರಮದ ಒಂದು ಭಾಗ ಮತ್ತು ಲೆಗೋ ಮತ್ತು ಸಂಗೀತ ಸೇರಿದಂತೆ ವಿವಿಧ ಮಾಧ್ಯಮಗಳನ್ನು ಸಂಸ್ಥೆ ಬಳಸುತ್ತಿದೆ.

ʻತರಬೇತಿ ನೀಡುತ್ತಿರುವ ಮಕ್ಕಳ ಭಾವನಾತ್ಮಕ ಮತ್ತು ನಡವಳಿಕೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇವೆʼ ಎಂದು ಆಲಿಯಾ ಮತ್ತು ಉಪೇಂದ್ರ ಹೇಳುತ್ತಾರೆ. ʻಆರಂಭದಲ್ಲಿ ಮಕ್ಕಳು ಅಸೌಕರ್ಯ ಅನುಭವಿಸಿದರು. ಆದರೆ, ತರಬೇತಿ ಬಳಿಕ ಪರಸ್ಪರ ಸಂವಹನ ನಡೆಸುತ್ತಾರೆ. ಒಂದು ಹೆಜ್ಜೆ ಮುಂದೆ ಇರಿಸಿದ್ದೇವೆʼ ಎಂದು ಆಲಿಯಾ ಹೇಳಿದರು. ಪುಣೆಯ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ತರಗತಿಯಲ್ಲಿರುವ ಅಂಕಿತಾ, ಈಗ ಆರಾಮವಾಗಿ ಇತರ ಮಕ್ಕಳೊಂದಿಗೆ ಬೆರೆಯುತ್ತಾಳೆ. 3ನೇ ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಮುಜಾಹಿದ್ ಗೆ ಪೋಷಕರ ಸಂಪೂರ್ಣ ಬೆಂಬಲವಿದೆ.

ʼಅರಂಭದಲ್ಲಿ ಗುಂಪುಗಳನ್ನು ರಚಿಸಲಿಲ್ಲ. ವಿರಾಮದ ಸಮಯದಲ್ಲಿ, ಹುಡುಗಿಯರು ಮತ್ತು ಹುಡುಗರು ಪ್ರತ್ಯೇಕ ಗುಂಪುಗಳಲ್ಲಿಇದ್ದರು. ಆದರೆ, ಕಾಲಾನಂತರದಲ್ಲಿ ಎಲ್ಲವೂ ಬದಲಾಯಿತುʼ ಎಂದರು ಉಪೇಂದ್ರ. ಶಿಕ್ಷಕರಲ್ಲೂ ಬದಲಾವಣೆ ಆಗಿದೆ. ಚೆನ್ನೈನ ಕನಮಪೆಟ್ಟ ಸರ್ಕಾರಿ ಶಾಲೆಯ ಪ್ರಾಂಶುಪಾಲೆ ಸಾತ್ವಿಕಾ, ‘ನಾನು 6 ಮತ್ತು 8ನೇ ತರಗತಿಗೆ ಪಾಠ ಮಾಡುತ್ತೇನೆ. ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ 6 ನೇ ತರಗತಿಯ ವಿದ್ಯಾರ್ಥಿಗಳ ವರ್ತನೆ ಸಹಜವಾಗಿದೆ. ಲಿಂಗ ಸಮಾನತೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿರುವುದರಿಂದ, ಸಂವಹನ, ಆಟ ಆಡುವಾಗ ಅಥವಾ ತರಗತಿಯಲ್ಲಿ ಅವರು ಆರಾಮವಾಗಿರುತ್ತಾರೆʼ ಎಂದು ಹೇಳಿದರು.

……………………………….




ಗ್ರಾಮೀಣ ಮತ್ತು ನಗರ ಸರ್ಕಾರಿ ಶಾಲೆಗಳ 11-13ರ ವಯೋಮಾನದ ಸುಮಾರು 5,000 ಹುಡುಗರು ಮತ್ತು ಹುಡುಗಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವರು ದೇಶದ ಅತಿದೊಡ್ಡ ಫುಟ್ಬಾಲ್ ಕೂಟದಲ್ಲಿ500 ಮಿಶ್ರ ಲಿಂಗ ತಂಡಗಳಾಗಿ ಸ್ಪರ್ಧಿಸುತ್ತಿದ್ದಾರೆ.…………………………

Read More
Next Story