ಆಲ್ಕೋಹಾಲ್‌ ಭರಿತ ಕೆಮ್ಮಿನ ಔಷಧದಲ್ಲಿ ಮುಳುಗುತ್ತಿರುವ ಗುಜರಾತ್‌
x

ಆಲ್ಕೋಹಾಲ್‌ ಭರಿತ ಕೆಮ್ಮಿನ ಔಷಧದಲ್ಲಿ ಮುಳುಗುತ್ತಿರುವ ಗುಜರಾತ್‌

-ಆಲ್ಕೋಹಾಲ್‌ ಭರಿತ ಕೆಮ್ಮಿನ ಔಷಧದಲ್ಲಿ ಮುಳುಗುತ್ತಿರುವ ಗುಜರಾತ್‌

-ದಮಯಂತಿ ಧರ್

ಎರಡು ವಾರಗಳ ಹಿಂದೆ ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಐವರು ಮೆಥನಾಲ್‌ ಮಿಶ್ರಿತ ಆಯರ‍್ವೇದಿಕ್ ಸಿರಪ್ ಸೇವಿಸಿ ಮೃತಪಟ್ಟರು.

ಖೇಡಾ ಮತ್ತು ಬಾಗೋದರದ ಇಬ್ಬರು ಅಸ್ವಸ್ಥರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರೂ ಮೆಥನಾಲ್ ಸೇವನೆಯಿಂದ ತೀವ್ರ ಹೃದಯ ಸಮಸ್ಯೆಗಳಿಂದ ಸಾವಿಗೀಡಾದರು.

ಪ್ರಾಥಮಿಕ ಪರೀಕ್ಷೆ ಪ್ರಕಾರ, ಈ ಎಲ್ಲರೂ ಬಿಲೋದರ ಗ್ರಾಮದ ಬಳಿ ಇರುವ ಕಿರಾಣಿ ಅಂಗಡಿಯಿಂದ ಖರೀದಿಸಿದ ಕಲ್ಮೇಘಸವ ಎಂಬ ಆಯರ‍್ವೇದ ಔಷಧ ಸೇವಿಸಿದ್ದರು ಎಂದು ಗೊತ್ತಾಯಿತು.

ನವೆಂಬರ್ ೨೯ ರಂದು ನಾಲ್ವರ ಸಾವಿನ ವಿಷಯ ತಿಳಿಸಲಾಯಿತು. ಅವರ ಅಂತ್ಯಕ್ರಿಯೆ ಅಷ್ಟರಲ್ಲೇ ನಡೆದಿತ್ತು. ಆನಂತರ ಶವಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೆಥನಾಲ್ ಅಂಶ ಪತ್ತೆಯಾಗಿದೆ. ಅವರೆಲ್ಲರೂ ಸಿರಪ್ ಸೇವಿಸಿದ್ದರು ಎಂದು ಕುಟುಂಬ ಸದಸ್ಯರು ದೃಢಪಡಿಸಿದರು. ತನಿಖೆ ಆರಂಭಿಸಿದ್ದೇವೆ ಎಂದು ಖೇಡ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಗೌಡ ತಿಳಿಸಿದರು.

ಒಂದು ವಾರದಲ್ಲಿ ಸುಮಾರು ೬೦ ಜನರಿಗೆ ಸಿರಪ್ ಬಾಟಲಿಗಳನ್ನು ಮಾರಾಟ ಮಾಡಿರುವುದಾಗಿ ಅಂಗಡಿ ಮಾಲೀಕ ಕಿಶನ್ ಸೋಧಾ ಒಪ್ಪಿಕೊಂಡರು. ಸಿರಪ್‌ ಸೇವಿಸಿದ ಅವರ ತಂದೆಯ ಸ್ನೇಹಿತರಾದ ಸಂಕಲ್‌ ಭಾಯ್‌ ಮತ್ತು ಬಲದೇವ್ ಸೋಧಾ, ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಆನಂತರ ನಿಧನರಾದರು. ಸಂಕಲ್ ಭಾಯ್ ಅವರ ರಕ್ತದಲ್ಲಿ ಮೆಥೆನಾಲ್ ಅಂಶ ಇರುವುದು ದೃಢಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಆನಂತರ ಡಿಸೆಂಬರ್ ೭ ರಂದು ಬೋಟಾಡ್ ಜಿಲ್ಲೆಯಲ್ಲಿ ಅದೇ ಸಿರಪ್ ಸೇವಿಸಿದ ಇನ್ನೂ ಇಬ್ಬರು ಸಾವಿಗೀಡಾದರು.

ಆಯರ‍್ವೇದ ಹೆಸರಿನಲ್ಲಿ ಮದ್ಯ ಮಾರಾಟ

ಗುಜರಾತ್ ರಾಜ್ಯ೧೯೬೦ರಲ್ಲಿ ಅಸ್ತಿತ್ವಕ್ಕೆ ಬಂದಂದಿನಿಂದಲೂ ಆ ರಾಜ್ಯದಲ್ಲಿ ಮದ್ಯ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಮದ್ಯ ನಿಷೇಧ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕಾನೂನುಗಳಿವೆ. ಆದರೆ, ರಾಜ್ಯದಲ್ಲಿ ಅಕ್ರಮ ಮದ್ಯ ದಂಧೆ ಮುಂದುವರಿದಿದೆ.

ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಪ್ರಕಾರ, ಆಯರ‍್ವೇದ ಮಿಶ್ರಣಗಳಲ್ಲಿ ಗರಿಷ್ಠ ಆಲ್ಕೋಹಾಲ್ ಮಿತಿ ಶೇ.೧೨. ಆದರೆ, ಸಿರಪ್ ಗಳಲ್ಲಿ ಶೇ.೧೪ ರಿಂದ ಶೇ.೮೬ರವರೆಗೆ ಆಲ್ಕೋಹಾಲ್ ಇರುವುದು ಪತ್ತೆಯಾಗಿದೆ. ಮದ್ಯಕ್ಕೆ ಜನಪ್ರಿಯ ರ‍್ಯಾಯವೆಂದರೆ, ಎಥೆನಾಲ್‌ ಒಳಗೊಂಡ ಆಯರ‍್ವೇದ ಸಿರಪ್‌ಗಳು. ಇವುಗಳನ್ನು ಮಧ್ಯ ಗುಜರಾತ್‌ನಲ್ಲಿ ಉತ್ಪಾದಿಸಲಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ, ವಡೋದರಾ ಜಿಲ್ಲೆಯ ಅಪರಾಧ ತಡೆ ವಿಭಾಗ (ಪಿಸಿಬಿ), ಆಯರ‍್ವೇದ ಕೆಮ್ಮಿನ ಸಿರಪ್‌ ಎಂದು ಮಾರಾಟ ಮಾಡುತ್ತಿದ್ದ ಬಿಯರ್ ಬಾಟಲಿಗಳನ್ನು ವಶಪಡಿಸಿಕೊಂಡಿತು.

ಅದೇ ತಿಂಗಳು ಆನಂದ್‌ನ ಪೊಲೀಸರು ಮಹಿಳೆಯೊಬ್ಬರ ಬಳಿ ಶೇ.೧೧.೧೧ ಆಲ್ಕೋಹಾಲ್ ಅಂಶವಿದ್ದ ಆಯರ‍್ವೇದ ಉತ್ಪನ್ನಗಳು ಪತ್ತೆಯಾದವು. ಮತ್ತೊಂದು ಘಟನೆಯಲ್ಲಿ ಬರ‍್ಸಾದ್ ತಾಲೂಕಿನ ದಹೇವಾನ್ ಗ್ರಾಮದ ಮನೆಯೊಂದರಿಂದ ೩೧.೩೪ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡರು. ರಾಜ್‌ಕೋಟ್ ಮತ್ತು ವಡೋದರಾದ ನಕಲಿ ವಿಳಾಸವಿರುವ ಕಂಪನಿ ಈ ಉತ್ಪನ್ನಗಳನ್ನು ತಯಾರಿಸಿ, ಪೂರೈಸುತ್ತಿತ್ತು. ಡಿಸೆಂಬರ್ ೨ ರಂದು ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ (ಎಫ್‌ಡಿಸಿಎ) ಸಂಕ ರ‍್ದಾ ಗ್ರಾಮದಲ್ಲಿ ೮೫.೮೧ ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿತು. ಕಂಪನಿ ಈ ಉತ್ಪನ್ನಗಳನ್ನು ಉತ್ಪಾದಿಸಲು ಅಥವಾ ಮಾರಾಟ ಮಾಡಲು ಅನುಮತಿ ಪಡೆದಿರಲಿಲ್ಲ.

ಅಹಮದಾಬಾದ್‌ನ ವಿಜ್ಞಾನ ಪ್ರಯೋಗಾಲಯವು ಉತ್ಪನ್ನಗಳಲ್ಲಿ ಎಥೆನಾಲ್ ಅಂಶವನ್ನು ದೃಢಪಡಿಸಿತು. ಡಿಸೆಂಬರಿನಲ್ಲಿ ಮೇಘ ಸವ(ಅಸವ ಅರಿಷ್ಟ ಎಂದೂ ಕರೆಯುತ್ತಾರೆ) ಸೇವಿಸಿ, ಏಳು ಜನ ಸಾವಿಗೀಡಾದ ಬಳಿಕ ತನಿಖೆ ಆರಂಭಿಸಿದ ಗುಜರಾತ್ ಪೊಲೀಸರು, ಎಥೆನಾಲ್ ಪೂರೈಸಿದ ತೌಫಿಕ್ ಶೇಖ್ ಅವರನ್ನು ವಿಚಾರಣೆಗೆ ಒಳಪಡಿಸಿದರು.

ಮುಂಬೈನ ಮೀರಾ ರೋಡ್‌ನಲ್ಲಿ ಅಜ್ಯಾನ್‌ ಮಲ್ಟಿಲಿಂಕ್ ಎಲ್‌ಎಲ್‌ಪಿ ಕಂಪನಿ ಕಚೇರಿ ಮೇಲೆ ದಾಳಿ ನಡೆಸಿದ ಗುಜರಾತ್ ಪೊಲೀಸರಿಗೆ ಶೇಖ್ ಮತ್ತು ಅವರ ಸಹಚರರು ೧೩,೦೦೦ ಲೀಟರ್ ಎಥೆನಾಲ್ ಮಾರಾಟ ಮಾಡಿರುವುದು ಪತ್ತೆಯಾಯಿತು. ಎಥೆನಾಲ್‌ ಅನ್ನು ಅಪ್ಸಾಲ್ ಎಂದು ಮಾರಾಟ ಮಾಡಲಾಗುತ್ತಿತ್ತು ಮತ್ತು ಗುಜರಾತಿಗೆ ಸಾಗಿಸಿ, ಆಯರ‍್ವೇದ ಸಿರಪ್ ಉತ್ಪಾದಿಸಲು ಬಳಸಲಾಗುತ್ತಿತ್ತು. ಬಾಟಲಿಯೊಂದಕ್ಕೆ ೧೦೦ ರೂ.ನಂತೆ ಮಾರಲಾಗುತ್ತಿತ್ತು.

ಕಿರಾಣಿ, ಪಾನ್ ಅಂಗಡಿಗಳಲ್ಲಿ ಸಿರಪ್ ಮಾರಾಟ

ಔಷಧ ಮತ್ತು ಸೌಂರ‍್ಯರ‍್ಧಕಗಳ ಕಾಯಿದೆ ಪ್ರಕಾರ, ಆಯರ‍್ವೇದ ಔಷಧವನ್ನುಮಾರಾಟ ಮಾಡಲು ಪರವಾನಗಿ ಅಗತ್ಯವಿಲ್ಲ.

ಆದರೆ, ಆಯರ‍್ವೇದ ಔಷಧಗಳ ಉತ್ಪಾದನೆಗೆ ನರ‍್ದಿಷ್ಟ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಇಂಥ ವಿನಾಯಿತಿಯಿಂದಾಗಿ ಈ ಉತ್ಪನ್ನಗಳ ಅನಿಯಂತ್ರಿತ ಮಾರಾಟ ನಡೆಯುತ್ತದೆ. ಇದರಲ್ಲಿ ಆಲ್ಕೋಹಾಲ್ ಅಂಶ ಇರುವಂಥವು ಕೂಡ ಸೇರಿವೆ. ಇದು ಮದ್ಯ ನಿಷೇಧ ಕಾನೂನಿಗೆ ವಿರುದ್ಧವಾಗಿದೆ. ಇಂಥ ಆಯರ‍್ವೇದ ಔಷಧಿಗಳ ಪೈಕಿ ʻಅಸವ ಅರಿಷ್ಟʼ ಎಂಬ ಸಿರಪ್ ಶೇ.೧೨ ರಷ್ಟು ಆಲ್ಕೋಹಾಲ್ ಹೊಂದಿದೆ ಮತ್ತು ಗುಜರಾತಿನಲ್ಲಿ ವಿದೇಶಿ ಮದ್ಯಕ್ಕೆ ಬದಲಿಯಾಗಿ ಬಳಕೆಯಾಗುತ್ತಿದೆ ಎಂಬುದು ಗಮನಿಸಬೇಕಾದ ಅಂಶ.

ಗಮನಿಸಬೇಕಾದ ಅಂಶವೆಂದರೆ, ಆಲ್ಕೋಹಾಲ್ ಆಧರಿತ ಆಯರ‍್ವೇದ ಸಿರಪ್‌ಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಗುಜರಾತ್ ರ‍್ಕಾರಕ್ಕೆ ತಿಳಿದಿತ್ತು. ಹೀಗಿದ್ದರೂ, ರಾಜ್ಯದಲ್ಲಿ ಸುಮಾರು ೯೧೫ ಪರವಾನಗಿ ಪಡೆದ ಆಯರ‍್ವೇದ ಔಷಧ ತಯಾರಕರು ಕರ‍್ಯನರ‍್ವಹಿ ಸುತ್ತಿದ್ದಾರೆ. ಎಫ್‌ಡಿಎ ಉಪ ಆಯುಕ್ತ ಹೇಮಂತ್ ಕೋಶಿಯಾ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿರುವ ಕಿರಾಣಿ ಮತ್ತು ಪಾನ್ ಅಂಗಡಿಗಳ ಮೂಲಕ ಸಿರಪ್ ಮಾರಾಟ ನಡೆಯುತ್ತಿದೆ.

ದುರಂತದ ನಂತರ ಎಫ್‌ಡಿಸಿಇ (ಫೆಡರಲ್ ಡಿಪರ‍್ಟ್‌ಮೆಂಟ್ ಆಫ್ ಸಿವಿಲ್ ಎರ‍್ಜೆನ್ಸಿ), ಗುಜರಾತಿನಲ್ಲಿ ಹಾನಿಯ ಮೌಲ್ಯಮಾಪನ ವನ್ನು ಪ್ರಾರಂಭಿಸಿತು. ಒಂದೇ ದಿನ ೭೦೦ ಕಡೆ ದಾಳಿ ನಡೆಸಿ, ತಂಪು ಪಾನೀಯದ ಅಂಗಡಿ, ತಂಬಾಕು ಸ್ಟಾಲ್‌ ಮತ್ತು ಸಣ್ಣ ಕಿರಾಣಿ ಅಂಗಡಿಗಳಲ್ಲಿ ಆಲ್ಕೊಹಾಲ್‌ ಇರುವ ಸಿರಪ್‌ಗಳ ಮಾರಾಟವನ್ನು ಪತ್ತೆ ಹಚ್ಚಲಾಗಿದೆ. ಅಹಮದಾಬಾದ್‌ನ ಸೋಡಾ ಮತ್ತು ತಂಪು ಪಾನೀಯ ಅಂಗಡಿಯೊಂದರಿಂದ ೬೯ ಬಾಟಲಿಗಳನ್ನು ಸಂಗ್ರಹಿಸಿದ್ದೇವೆ ಎಂದು ಕೋಶಿಯಾ ಹೇಳಿದರು.

ಗುಜರಾತ್ ಡಿಜಿಟಲ್ ಇಂಡಿಯಾ ಡೆವಲಪ್‌ಮೆಂಟ್ ಅಸಿಸ್ಟೆನ್ಸ್ ರಾಜ್ಯದಲ್ಲಿ ಆಯರ‍್ವೇದ ಸಿರಪ್‌ಗಳ ಅಕ್ರಮ ಮಾರಾಟದ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಕಳೆದ ವಾರ ಗಾಂಧಿನಗರದ ಪೊಲೀಸರು ಮೆಡಿಕಲ್ ಮತ್ತು ಜನರಲ್ ಸ್ಟೋರ್‌ಗಳಿಂದ ೨೩೮ ಬಾಟಲಿಗಳನ್ನು ವಶಪಡಿಸಿ ಕೊಂಡು, ಮೂವರನ್ನು ಬಂಧಿಸಿದರು.
Read More
Next Story