
ಈಶಾನ್ಯ ಭಾರತ ಉತ್ಸವದ ಮುಖ್ಯ ಸಂಘಟಕ ಶ್ಯಾಮಕಾನು ಮಹಾಂತ (ಹಸಿರು ಬಣ್ಣದಲ್ಲಿ) ಮತ್ತು ಅವರ ವ್ಯವಸ್ಥಾಪಕ ಸಿದ್ಧಾರ್ಥ
ಜುಬೀನ್ ಗಾರ್ಗ್ ಪ್ರಕರಣ: ನ್ಯಾಯಾಂಗ ಆಯೋಗ ರಚನೆ; ಇಡಿ, ಐಟಿ ತನಿಖೆಗೆ ಸೇರುವ ಸಾಧ್ಯತೆ
2001-2003ರ ಅವಧಿಯಲ್ಲಿ ನಾರ್ತ್ ಈಸ್ಟರ್ನ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶ್ಯಾಮ್‌ಕಾನು ಮಹಾಂತ 14 ಕೋಟಿ ರೂಪಾಯಿಗೂ ಹೆಚ್ಚು ಸಾಲವನ್ನು ಅಕ್ರಮವಾಗಿ ವಿತರಿಸಿದ್ದಾರೆ ಎಂದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಶುಕ್ರವಾರ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಂಗಪುರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಮುಖ್ಯ ಆಯೋಜಕ ಶ್ಯಾಮ್‌ಕಾನು ಮಹಾಂತ ವಿರುದ್ಧ ಸಂಘಟಿತ ಆರ್ಥಿಕ ಅಪರಾಧಗಳು ಮತ್ತು ಬೆನಾಮಿ ಆಸ್ತಿಗಳ ಸ್ವಾಧೀನದ ಕುರಿತು ತನಿಖೆ ನಡೆಸಲು ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳು ಅಸ್ಸಾಂ ಪೊಲೀಸರೊಂದಿಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ಮಾತನಾಡಿರುವ ಹಿಮಂತ ಬಿಸ್ವ ಶರ್ಮಾ, ಗೌಹತಿ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗುತ್ತದೆ. ನಾವು ನಾಳೆ ಆಯೋಗವನ್ನು ರಚಿಸುತ್ತೇವೆ. ಈಗ ಜುಬೀನ್ ಗಾರ್ಗ್ ಅವರ ಸಾವಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ವೀಡಿಯೋ ಹೊಂದಿರುವ ಎಲ್ಲರೂ ಮುಂದೆ ಬಂದು ಆಯೋಗದ ಮುಂದೆ ಸಾಕ್ಷಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಸಿಐಡಿ ತನಿಖೆ ಮುಂದುವರಿದಿದೆ
ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಈಜುವಾಗ ಜುಬೀನ್ ಗಾರ್ಗ್ ಮೃತಪಟ್ಟಿದ್ದರು. ರಾಜ್ಯ ಸಿಐಡಿ ಈಗಾಗಲೇ ಈ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಈ ಪ್ರಕರಕ್ಕೆ ಸಂಬಂಧಿಸಿದಂತೆ ಶ್ಯಾಮ್‌ಕಾನು ಮಹಾಂತ ವಿರುದ್ಧ 60 ಕ್ಕೂ ಹೆಚ್ಚು ಎಫ್ಐಆರ್‌ಗಳು ದಾಖಲಾಗಿದ್ದು, ಹತ್ತು ಜನರಿಗೂ ಹೆಚ್ಚು ಮಂದಿ ಆರೋಪಿಗಳ ಪಟ್ಟಿಯಲ್ಲಿದ್ದಾರೆ. ಈಗಾಗಲೇ ನಾಲ್ವರನ್ನು ಬಂಧಿಸಿ, 14 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ವಿವಿಧ ಮಾಹಿತಿಗಳನ್ನು ಹಂಚಿಕೊಂಡವರು ಈಗ ಶಪಥ ಪತ್ರ ( affidavits) ಗಳನ್ನು ಆಯೋಗದ ಮುಂದೆ ಸಲ್ಲಿಸಬೇಕು. ಸಿಂಗಾಪುರದಲ್ಲಿ ಗಾಯಕನೊಂದಿಗೆ ಇದ್ದ ಅಸ್ಸಾಂ ಅಸೋಸಿಯೇಶನ್ ಸದಸ್ಯರು ಸಹ ಸಾಕ್ಷಿ ನೀಡಬೇಕು, ಇಲ್ಲವಾದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಮರಣೋತ್ತರ ವರದಿ ಪತ್ನಿಗೆ ಹಸ್ತಾಂತರ
ಸಿಂಗಾಪುರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿ ಜುಬೀನ್ ಅವರ ಪತ್ನಿ ಗರಿಮಾ ಅವರಿಗೆ ಹಸ್ತಾಂತರಿಸಲಾಗಿದೆ. ಗೌಹತಿ ಮೆಡಿಕಲ್ ಕಾಲೇಜ್‌ನಲ್ಲಿ ನಡೆದ ಎರಡನೇ ಮರಣೋತ್ತರ ಪರೀಕ್ಷೆಯ ವರದಿ ನಾಳೆ ಕೊಡಲಾಗುತ್ತದೆ. ಅದನ್ನು ಸಾರ್ವಜನಿಕಗೊಳಿಸುವುದೇ ಅಥವಾ ಇಲ್ಲವೇ ಎಂಬುದು ಗರಿಮಾ ಅವರ ನಿರ್ಧಾರ ಎಂದು ಅವರು ತಿಳಿಸಿದರು.
ಇದೇ ವೇಳೆ, ED ಮತ್ತು I-T ಇಲಾಖೆಗಳು ಈಗಾಗಲೇ ಸಿಐಡಿ ಕಚೇರಿಗೆ ಭೇಟಿ ನೀಡಿ ಶ್ಯಾಮ್‌ಕಾನು ಮಹಾಂತ ವಿರುದ್ಧ ನಡೆದ ಆರ್ಥಿಕ ವಂಚನೆ ಕುರಿತು ಪರಿಶೀಲನೆ ನಡೆಸಿವೆ. ಸೆಪ್ಟೆಂಬರ್ 25 ಮತ್ತು 26 ರಂದು ನಡೆದ ಶೋಧ ಕಾರ್ಯದಲ್ಲಿ ಹಲವಾರು ಪ್ಯಾನ್ ಕಾರ್ಡ್‌ಗಳು, 30 ಕ್ಕೂ ಹೆಚ್ಚು ಕಂಪನಿಗಳ ಮತ್ತು ಸರ್ಕಾರಿ ಅಧಿಕಾರಿಗಳ ಮುದ್ರೆಗಳು, ಬೆನಾಮಿ ಆಸ್ತಿಗಳ ದಾಖಲೆಗಳು ವಶಪಡಿಸಿಕೊಂಡಿವೆ.
2001-2003ರ ಅವಧಿಯಲ್ಲಿ ನಾರ್ತ್ ಈಸ್ಟರ್ನ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಶ್ಯಾಮ್‌ಕಾನು ಮಹಾಂತ 14 ಕೋಟಿ ರೂಪಾಯಿಗೂ ಹೆಚ್ಚು ಸಾಲವನ್ನು ಅಕ್ರಮವಾಗಿ ವಿತರಿಸಿದ್ದಾರೆ ಎಂದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಾಲ ಪಡೆದ DSS E-Connect Ltd ಕಂಪನಿಯು ಅಸ್ಸಾಂನಲ್ಲಿ ಕಾಲ್ ಸೆಂಟರ್ ತೆರೆಯುವುದಾಗಿ ಹೇಳಿ ಹಣ ಪಡೆದು, ಯಾವುದೇ ಯೋಜನೆ ಕಾರ್ಯಗತಗೊಳಿಸದೇ ಸಾಲವನ್ನು ಮರುಪಾವತಿಸದೇ ಬಿಟ್ಟಿತ್ತು. ಈ ಪ್ರಕರಣವನ್ನು 2004ರಲ್ಲಿ NEDFi ಒಳಗಿನಿಂದ ತನಿಖೆಗೆ ಒಳಪಡಿಸಿದರೂ ಅದು ಪೂರ್ಣಗೊಂಡಿರಲಿಲ್ಲ.ಅದೇ ವರ್ಷದಲ್ಲಿ ಶ್ಯಾಮ್‌ಕಾನು ಮಹಾಂತNEDFi ಗೆ ರಾಜೀನಾಮೆ ನೀಡಿ, ನಂತರ IL&FSನಲ್ಲಿ ಉಪಾಧ್ಯಕ್ಷರಾಗಿ ಸೇರಿದರು. ನಂತರ ಅವರು ತಮ್ಮದೇ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಟ್ರೆಂಡ್ MMS ಪ್ರಾರಂಭಿಸಿದರು.
ಶುಕ್ರವಾರ ಅಸ್ಸಾಂನ ನ್ಯಾಯಾಲಯವು ಗಾಯಕ-ಸಂಗೀತ ಸಂಯೋಜಕ ಜುಬೀನ್ ಗಾರ್ಗ್ ಅವರ ಸಾವಿನ ಸಂಬಂಧವಾಗಿ ಅವರ ಬ್ಯಾಂಡ್ ಸದಸ್ಯರಾದ ಶೇಖರ್ಜ್ಯೋತಿ ಗೋಸ್ವಾಮಿ ಮತ್ತು ಅಮೃತಪ್ರಭಾ ಮಹಂತ ಅವರನ್ನು 14 ದಿನಗಳ ಪೊಲೀಸರ ವಶಕ್ಕೆ ಕಳುಹಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿಂತೆ,ಅಸ್ಸಾಂನ ನ್ಯಾಯಾಲಯವು ಶುಕ್ರವಾರ ಅವರ ಬ್ಯಾಂಡ್ ಸದಸ್ಯರಾದ ಶೇಖರಜ್ಯೋತಿ ಗೋಸ್ವಾಮಿ ಮತ್ತು ಅಮೃತಪ್ರಭಾ ಮಹಾಂತ ಅವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಜುಬೀನ್ ಗಾರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ ಶರ್ಮಾ ಮತ್ತು ಕಾರ್ಯಕ್ರಮದ ಆಯೋಜಕ ಶ್ಯಾಮ್‌ಕಾನು ಮಹಾಂತ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಬುಧವಾರ ದೆಹಲಿಯಿಂದ ಬಂಧಿಸಲಾಗಿದ್ದು, ಪ್ರಸ್ತುತ ಅವರು 14 ದಿನಗಳ ಕಾಲ ಸಿಐಡಿ ವಶದಲ್ಲಿದ್ದಾರೆ.
ಜುಬೀನ್ ಅವರ ಪತ್ನಿ ಗರಿಮಾ ಸಿಜೆಎಂ ಮುಂದೆ ತನ್ನ ಹೇಳಿಕೆ ದಾಖಲಿಸಿ, ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ. ನಮಗೆ ಸಾಧ್ಯವಾದಷ್ಟು ಬೇಗ ನ್ಯಾಯ ಬೇಕು. ಇದೇ ನನ್ನ ನ್ಯಾಯಾಂಗ ವ್ಯವಸ್ಥೆಗೆ ಪ್ರಾರ್ಥನೆ. ನಾವು ಅವರನ್ನು ಕಳೆದುಕೊಂಡದ್ದು ನಿಖರವಾಗಿ ಏನಾಯಿತು ಎಂಬುದನ್ನು ತಿಳಿಯಲು ಬಯಸುತ್ತೇನೆ. ನಾವು ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕರಿಸುತ್ತೇವೆ ಎಂದು ಅವರ ಪತ್ನಿ ಗರಿಮಾ ಪತ್ರಕರ್ತರಿಗೆ ತಿಳಿಸಿದ್ದರು.