Mahakumbh Mela : ಗಂಗಾ ಸಂಗಮದ ನೀರಿನಲ್ಲಿ ಮಲಬಾಕ್ಟೀರಿಯಾ? ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಿರಸ್ಕರಿಸಿದ ಸಿಎಂ ಯೋಗಿ
x
ಯೋಗಿ ಆದಿತ್ಯನಾಥ್​.

Mahakumbh Mela : ಗಂಗಾ ಸಂಗಮದ ನೀರಿನಲ್ಲಿ ಮಲಬಾಕ್ಟೀರಿಯಾ? ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಿರಸ್ಕರಿಸಿದ ಸಿಎಂ ಯೋಗಿ

’Mahakumbh Mela: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಹಾ ಕುಂಭದ ವೇಳೆ ಸಂಗಮದ ನೀರಿನಲ್ಲಿ ಮಲಬಾಕ್ಟೀರಿಯಾ ಪತ್ತೆಯಾಗಿದೆ ಎಂಬ ವರದಿ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಸ್ಥಿರತೆಯ ಕುರಿತು ತೀವ್ರ ಆತಂಕವನ್ನು ಎಬ್ಬಿಸಿದೆ.


ಗಂಗಾನದಿಯ ನೀರು ಮಹಾಕುಂಭ ಮೇಳ ನಡೆಯುತ್ತಿರುವ ಸಂಗಮದಲ್ಲಿ ಸ್ನಾನ ಮಾಡುವುದಕ್ಕೆ ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ನೀಡಿರುವುದರ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ವರದಿಯಲ್ಲಿ ಮಹಾಕುಂಭ ನಡೆಯುವ ಸಂಗಮದ ನೀರಿನಲ್ಲಿ ಮಲಬಾಕ್ಟೀರಿಯಾ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಬುಧವಾರ (ಫೆಬ್ರವರಿ 19) ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಈ ನೀರಿನಲ್ಲಿ ಲಕ್ಷಾಂತರ ಜನರು ಮಹಾ ಕುಂಭ ಮೇಳದ ವೇಳೆ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಸಂಗಮದ ನೀರು ಕೇವಲ ಸ್ನಾನಕ್ಕೆ ಮಾತ್ರವಲ್ಲ, ಕುಡಿಯಲೂ ಯೋಗ್ಯವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯನ್ನು "ನಕಲಿ" ಮತ್ತು "ಅಪ ಪ್ರಚಾರ" ಎಂದಿದ್ದಾರೆ. , ಧಾರ್ಮಿಕ ಕಾರ್ಯಕ್ರಮವನ್ನು ಹಾಳು ಮಾಡುವುದಕ್ಕೆ ಈ ವರದಿಯನ್ನು ಬಳಸಲಾಗುತ್ತಿದೆ ಎಂದು ಅವರು ಎಂದು ಆರೋಪಿಸಿದರು.

ಸನಾತನ ಧರ್ಮ, ಗಂಗೆ, ಅಥವಾ ಮಹಾ ಕುಂಭ ವಿರುದ್ಧ ಸುಳ್ಳು ಆರೋಪ ಮಾಡುವುದು ಅಥವಾ ''ನಕಲಿ ವೀಡಿಯೊ" ಹರಡುವುದು ಕೋಟ್ಯಂತರ ಜನರ ಭಕ್ತಿ ಮಾಡುವ ಅಪಮಾಣ ಎಂದು ಹೇಳಿದ್ದಾರೆ.

ಮಾಲಿನ್ಯ ವರದಿ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಗೆ ಸಲ್ಲಿಸಿದ ವರದಿಯಲ್ಲಿ, ಪ್ರಯಾಗ್​​ರಾಜ್​ನಲ್ಲಿ ಕುಂಭದ ವೇಳೆ ಹಲವು ಸ್ಥಳಗಳ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಾಗಿರಲಿಲ್ಲ ಎಂದು ಹೇಳಿದೆ.

ಮಲದಲ್ಲಿರುವ ಕೋಲಿಫಾರ್ಮ್ ಬ್ಯಾಕ್ಟೀರಿಯಾ, ರಕ್ತಜಂತುಗಳು ಮತ್ತು ಮನುಷ್ಯರ ಹೊಟ್ಟೆಯಲ್ಲಿ ಕಂಡುಬರುವ ಬ್ಯಾಕ್ಟೀರಿಯವಾಗಿದೆ. ಇದು ಸಾಮಾನ್ಯವಾಗಿ ನೀರಿನ ಮಾಲಿನ್ಯ ಮತ್ತು ಸೋಂಕುಗಳು ಹೆಚ್ಚಲು ಕಾರಣವಾಗಿವೆ.

ಯೋಗಿ ಆದಿತ್ಯನಾಥನ ಪ್ರತಿಕ್ರಿಯೆ ಏನು?

ಈ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಆಯೋಜಿಸಿಲ್ಲ. ಇದು ಸಮಾಜದ ಸಮಾರಂಭ. ಯಶಸ್ವಿಯಾಗಿ ಆಯೋಜಿಸುವುದು ಸರ್ಕಾರದ ಆದ್ಯ ಕರ್ತವ್ಯ," ಎಂದು ಯೋಗಿ ಹೇಳಿದ್ದಾರೆ.

"ನಮಗೆ ಈ ಶತಮಾನದ ಮಹಾ ಕುಂಭದೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದ್ದು ಅದೃಷ್ಟ. ಈ ಸಮಾರಂಭದಲ್ಲಿ ದೇಶ ಮತ್ತು ವಿಶ್ವದ ಜನರು ಭಾಗಿಯಾಗಿದ್ದಾರೆ" ಎಂದು ಅವರು ಹೇಳಿದರು. ಮಂಗಳವಾರ ಮಧ್ಯಾಹ್ನದ ವೇಳೆಗೆ 56 ಕೋಟಿ ಜನರು ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಯೋಗಿ ಹೇಳಿದರು.

ನೀರಿನ ಮಾಲಿನ್ಯ ಮಟ್ಟ

ಮಾಲಿನ್ಯ ನಿಯಂತ್ರಣ ಮಂಡಳೀ ಫೆಬ್ರವರಿ 3ರಂದು ಎನ್​​ಜಿಟಿಗೆ ಸಲ್ಲಿಸಿದ ನೀರಿನ ಗುಣಮಟ್ಟ ವರದಿಯಲ್ಲಿ, ಗಂಗಾ ಮತ್ತು ಯಮುನಾ ನದಿಗಳ ಕೆಲವು ಸ್ಥಳಗಳಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಮಟ್ಟ ಅಪಾರ ಪ್ರಮಾಣದಲ್ಲಿ ಹೆಚ್ಚಿದೆ ಎಂದು ತಿಳಿಸಲಾಗಿದೆ.

ವರದಿ ಪ್ರಕಾರ, ಗಂಗಾ ನದಿಯಲ್ಲಿ ಕೋಲಿಫಾರ್ಮ್ ಮಟ್ಟಗಳು 1,400 ಪಟ್ಟು ಹೆಚ್ಚಾಗಿದ್ದು, ಯಮುನಾ ನದಿಯಲ್ಲಿ 660 ಪಟ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಈ ನದಿಗಳ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದು ಹೇಳಲಾಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಎನ್​​ಜಿಟಿ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳನ್ನು ಸಮನ್ಸ್ ನೀಡಿದೆ.

ಸಾರ್ವಜನಿಕ ಆರೋಗ್ಯಕ್ಕೆ ಆತಂಕ

ನಿಯಮಾವಳಿಯ ಪ್ರಕಾರ, ಸ್ನಾನಕ್ಕೆ ಯೋಗ್ಯ ನೀರಿನಲ್ಲಿ ಕೋಲಿಫಾರ್ಮ್ ಮಟ್ಟ 500 MPN/100ml ಗಿಂತ ಹೆಚ್ಚಿರಬಾರದು. ಆದರೆ, ಜನವರಿ 19ರ ವೇಳೆಗೆ ಗಂಗಾ ಮತ್ತು ಯಮುನಾ ನದಿಗಳಲ್ಲಿ ಕೋಲಿಫಾರ್ಮ್ ಮಟ್ಟವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಜನವರಿ 12, 13, 14, 15 ಮತ್ತು 19 ರಂದು ನೀರಿನ ಮಾದರಿಗಳನ್ನು ಪರೀಕ್ಷಿಸಿತ್ತು. ಆದರೆ ಯಾವುದೇ ದಿನವೂ ನೀರಿನ ಗುಣಮಟ್ಟ ನಿಗದಿತ ಮಟ್ಟ ತಲುಪಿಲ್ಲ .

Read More
Next Story