ಯಮುನಾ ನದಿ ನೀರು ಹಂಚಿಕೆ: ಹರ್ಯಾಣ, ರಾಜಸ್ಥಾನ ಎಂಒಯು ಸಹಿ
x
ಅಲಹಾಬಾದ್‌ ನಲ್ಲಿ ಹರಿಯುತ್ತಿರುವ ಯಮುನಾ ನದಿ

ಯಮುನಾ ನದಿ ನೀರು ಹಂಚಿಕೆ: ಹರ್ಯಾಣ, ರಾಜಸ್ಥಾನ ಎಂಒಯು ಸಹಿ


ನವದೆಹಲಿ, ಫೆ 17: ಯಮುನಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಹರ್ಯಾಣ ಮತ್ತು ರಾಜಸ್ಥಾನ ಎಂಒಯುಗೆ ಸಹಿ ಹಾಕಿವೆ.

ಹರಿಯಾಣದ ಹತ್ನಿಕುಂಡ್‌ನಿಂದ ರಾಜಸ್ಥಾನದ ಪಾಲಿನ ನೀರನ್ನು ಭೂಗತ ಕೊಳವೆಗಳ ಮೂಲಕ ವರ್ಗಾಯಿಸಲು ಮತ್ತು ಜುಂಜುನು, ಚುರು ಮುಂತಾದ ಪ್ರದೇಶಗಳಲ್ಲಿ ಅದರ ಬಳಕೆಗೆ ವಿಸ್ತೃತ ಯೋಜನಾ ವರದಿಯನ್ನು ಜಂಟಿಯಾಗಿ ಸಿದ್ಧಪಡಿಸುವ ಒಪ್ಪಂದಕ್ಕೆ ಹರಿಯಾಣ ಮತ್ತು ರಾಜಸ್ಥಾನ ಸಹಿ ಹಾಕಿದವು

ಹರ್ಯಾಣಾ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ನಡುವೆ ಶನಿವಾರ ನಡೆದ ಸಭೆಯ ನಂತರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನೇತೃತ್ವದಲ್ಲಿ ಸಭೆ ನಡೆಯಿತು. ಈ ದೀರ್ಘಕಾಲದ ಸಮಸ್ಯೆ ಪರಿಹಾರದಿಂದ ರಾಜಸ್ಥಾನದ ಚುರು, ಸಿಖರ್ ಮತ್ತು ಜುಂಜುನು ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ನಿರ್ಣಾಯಕ ಯೋಜನೆಗಳ ಅನುಷ್ಠಾನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಶೇಖಾವತ್ ಹೇಳಿದರು.

ಚುರು, ಸಿಖರ್, ಜುಂಜುನು ಮತ್ತು ರಾಜಸ್ಥಾನದ ಇತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮತ್ತು ಇತರ ಅಗತ್ಯಗಳಿಗಾಗಿ ಜುಲೈ-ಅಕ್ಟೋಬರ್‌ನಲ್ಲಿ 577 ಎಂಸಿಎಂ ನೀರನ್ನು ವರ್ಗಾಯಿಸಲು ರಾಜ್ಯ ಸರ್ಕಾರಗಳು ಡಿಪಿಆರ್‌ ಸಿದ್ಧಪಡಿಸುತ್ತವೆ ಮತ್ತು ಅಂತಿಮಗೊಳಿಸು ತ್ತವೆ.ಯಮುನಾ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ರೇಣುಕಾಜಿ, ಲಖ್ವಾರ್ ಮತ್ತು ಕಿಶೌ ಎಂಬ ಮೂರು ಸಂಗ್ರಹಾಗಾರಗಳನ್ನು ನಿರ್ಮಿಸಿದ ನಂತರ, ಹತ್ನಿಕುಂಡ್‌ನಲ್ಲಿ ಅದೇ ವ್ಯವಸ್ಥೆಯ ಮೂಲಕ ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತದೆ.

ಅಧಿಕಾರಿಯೊಬ್ಬರ ಪ್ರಕಾರ, ರಾಜಸ್ಥಾನ ಮತ್ತು ಹರಿಯಾಣ 1994 ರ ಎಂಒಯುನಲ್ಲಿ ನಿರ್ದಿಷ್ಟಪಡಿಸಿದ ಹಂಚಿಕೆಗಳ ಪ್ರಕಾರ ಯಮುನಾ ನೀರಿನ ಅತ್ಯುತ್ತಮ ಬಳಕೆಗೆ ಸೌಲಭ್ಯಗಳನ್ನು ರಚಿಸುವ ಒಪ್ಪಂದ ಇದಾಗಿದೆ. ಮೇ 12, 1994 ರಂದು ಸಹ ಜಲಾನಯನ ರಾಜ್ಯಗಳ ನಡುವೆ ನೀರಿನ ಹಂಚಿಕೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಎರಡು ದಶಕಗಳಿಂದ ವಿವಾದಕ್ಕೆ ಸಿಲುಕಿದೆ.

Read More
Next Story