ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಸ್ನೇಹಿತನ ಮೇಲೆ ಹಲ್ಲೆ
x

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಸ್ನೇಹಿತನ ಮೇಲೆ ಹಲ್ಲೆ


ಪುಣೆ: ಪುಣೆ ನಗರದ ಹೊರವಲಯದಲ್ಲಿ 21 ವರ್ಷದ ಮಹಿಳೆ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಚ್ಚು ಮತ್ತು ಬಿದಿರು ಕೋಲುಗಳಿಂದ ಸಜ್ಜಿತರಾಗಿದ್ದ ಮೂವರು, ಮಹಿಳೆಯ ಆಭರಣಗಳನ್ನು ಕಿತ್ತುಕೊಂಡು ಆನಂತರ ಅತ್ಯಾಚಾರ ಎಸಗಿದ್ದಾರೆ. ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ 10.45 ರ ಸುಮಾರಿಗೆ ಬೋಪ್‌ದೇವ್ ಘಾಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಒಂದು ದಿನದ ನಂತರ ಪೊಲೀಸರು ಇಬ್ಬರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಪತ್ತೆ ಹಚ್ಚಲು ನಾಗರಿಕರ ಸಹಾಯ ಕೋರಿದ್ದಾರೆ.

ಕೊಂಧ್ವಾ ಪೊಲೀಸರ ಪ್ರಕಾರ, ʻಮಹಿಳೆ ಮತ್ತು ಆಕೆಯ ಸ್ನೇಹಿತ ಗುರುವಾರ ತಡರಾತ್ರಿ ಬೋಪ್‌ದೇವ್ ಘಾಟ್ ಪ್ರದೇಶಕ್ಕೆ ಹೋಗಿದ್ದರು. ಸ್ನೇಹಿತನನ್ನು ಆತ ಧರಿಸಿದ್ದ ಬಟ್ಟೆ ಮತ್ತು ಬೆಲ್ಟ್‌ನಿಂದ ಕಟ್ಟಿಹಾಕಿ, ಆನಂತರ ಆಕೆ ಮೇಲೆ ಅತ್ಯಾಚಾರ ಎಸಗಿದರು ಎಂದು ಪೊಲೀಸರು ಹೇಳಿದರು.

ಮಹಿಳೆ ಮತ್ತು ಸ್ನೇಹಿತ ಶುಕ್ರವಾರ ಮುಂಜಾನೆ 5 ಗಂಟೆ ಸುಮಾರಿಗೆ ಪುಣೆ ನಗರದ ಸಸೂನ್ ಜನರಲ್ ಆಸ್ಪತ್ರೆಗೆ ಆಗಮಿಸಿದ್ದು, ಪೊಲೀಸರಿಗೆ ಘಟನೆ ಬಗ್ಗೆ ತಿಳಿದುಬಂದಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ರಂಜನ್‌ ಕುಮಾರ್‌ ಶರ್ಮಾ ಹೇಳಿದ್ದಾರೆ.

ಮಹಿಳೆ ಪ್ರತಿಭಟಿಸಿದಾಗ ಸ್ನೇಹಿತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳ ಪತ್ತೆಗೆ ಹತ್ತು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸ್ನೇಹಿತ ನೀಡಿದ ವಿವರಣೆ ಆಧಾರದ ಮೇಲೆ ಇಬ್ಬರು ಶಂಕಿತರ ರೇಖಾಚಿತ್ರಗಳನ್ನು ಸಿದ್ಧಪಡಿಸಿದ್ದೇವೆ ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ʻಆರೋಪಿಗಳು ಸ್ಥಳದಿಂದ ಹೋದ ನಂತರ ಯುವತಿ ತನ್ನ ಸ್ನೇಹಿತನನ್ನು ಬಿಡಿಸಿದ್ದಾರೆ. ಆನಂತರ ಇಬ್ಬರೂ ಮಹಿಳೆ ಮನೆಗೆ ಹೋಗಿ, ಬಳಿಕ ಕೊತ್ತೂರಿನ ಖಾಸಗಿ ಆಸ್ಪತ್ರೆಗೆ ಹೋದರು. ಅಲ್ಲಿನ ಸಿಬ್ಬಂದಿ ಸಸೂನ್‌ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು,ʼ ಎಂದು ಅಧಿಕಾರಿ ಹೇಳಿದರು.

ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಹಾಗೂ ಶ್ವಾನ ದಳವನ್ನು ಕಳಿಸಲಾಗಿದೆ. ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಂಪರ್ಕಿಸುವಂತೆ ಪೊಲೀಸರು ಮೂರು ಮೊಬೈಲ್ ಫೋನ್ ಸಂಖ್ಯೆ( 8691999689, 8275200947, 9307545045) ನೀಡಿದ್ದಾರೆ.

ಸಂಸದೆ ಟೀಕೆ: ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಅವರು, ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿಫಲರಾಗಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ʼಇದೊಂದು ಭಯಾನಕ ಪ್ರಕರಣ. ಮಹಾಯುತಿ ಸರ್ಕಾರದಲ್ಲಿ ಮಹಿಳೆಯರ ಮೇಲಿನ ಅಪರಾಧ ಮತ್ತು ದೌರ್ಜನ್ಯ ಹೆಚ್ಚಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಪಡೆ ಉತ್ತಮವಾಗಿದೆ. ಆದರೆ, ಸಮಸ್ಯೆ ಮಂತ್ರಾಲಯದಲ್ಲಿ (ರಾಜ್ಯ ಸಚಿವಾಲಯ) ಇದೆ. ಗೃಹ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,ʼ ಎಂದು ಸುಳೆ ಆಗ್ರಹಿಸಿದರು.

ಪುಣೆಯಲ್ಲಿ ಮೇ ತಿಂಗಳಿನಲ್ಲಿ ಪೋರ್ಷೆ ಅಪಘಾತದ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು ಮತ್ತು ಥಾಣೆ ಜಿಲ್ಲೆಯ ಬದ್ಲಾಪುರ್ ಪಟ್ಟಣದ ಶಾಲೆಯಲ್ಲಿ ಅಟೆಂಡರ್ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ಸಂಸದೆ ಉಲ್ಲೇಖಿಸಿದರು.

Read More
Next Story