ರಾಜಸ್ಥಾನದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯ ಗಳಿಸುವುದೇ?
ಕಾಂಗ್ರೆಸ್ ಕಳೆದ ವರ್ಷ ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಂಡಿದ್ದು, 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ.
2014ರಲ್ಲಿ ಆಡಳಿತಾರೂಢ ಬಿಜೆಪಿ ಎಲ್ಲಾ 25 ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತು. 2019 ರಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ 24 ಸ್ಥಾನ ಗೆದ್ದುಕೊಂಡಿತು. ಉಳಿದ ಒಂದು ಸ್ಥಾನ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಪಾಲಾಯಿತು. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಏಪ್ರಿಲ್ 19 ಮತ್ತು 26 ರಂದು ನಡೆಯಲಿದೆ.
ಹ್ಯಾಟ್ರಿಕ್ ಮೇಲೆ ಕಣ್ಣು: ʻಡಬಲ್-ಎಂಜಿನ್ ಸರ್ಕಾರʼ ದಿಂದ ಬೆಳವಣಿಗೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯು ಹ್ಯಾಟ್ರಿಕ್ ಸಾಧಿಸಲು ಸಹಾಯ ಮಾಡುತ್ತದೆ ಎಂದು ಪಕ್ಷ ಅಂದುಕೊಂಡಿದೆ. ಆದರೆ, ಅದು ಅಂದುಕೊಂಡಷ್ಟು ಸುಲಭವಲ್ಲ. ನವೆಂಬರ್ 2023 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು 200ರಲ್ಲಿ 115 ಸ್ಥಾನ ಗೆದ್ದರೂ, ಕೆಲವೇ ವಾರಗಳಲ್ಲಿ ಕಾರನ್‌ಪುರ ವಿಧಾನಸಭೆ ಸ್ಥಾನವನ್ನು ಕಳೆದುಕೊಂಡಿತು.
ಇತ್ತೀಚೆಗೆ ಚುರು ಸಂಸದ ರಾಹುಲ್ ಕಸ್ವಾನ್ ಬಿಜೆಪಿ ತೊರೆದಿದ್ದು, ಮೀನಾ, ಗುಜ್ಜರ್ ಮತ್ತು ಜಾಟ್ ಮತ್ತಿತರ ಸಮುದಾಯಗಳ ನಿರೀಕ್ಷೆಗಳು ಹೆಚ್ಚುತ್ತಿವೆ. ಸಿಎಂ ಸ್ಥಾನದ ರೇಸ್‌ನಲ್ಲಿ ಇದ್ದಂತೆ ಕಾಣುತ್ತಿದ್ದ ಕಿರೋಡಿ ಲಾಲ್ ಮೀನಾ ಅವರಿಗೆ ಆ ಸ್ಗೈಥಾನ ದಕ್ರಾಕದೆ ಇರುವುದು ಮೀನಾ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ನಿರ್ಲಕ್ಷಿಸಿದ ಬಳಿಕ ಗುಜ್ಜರ್‌ಗಳು ಬಿಜೆಪಿ ಕ್ಯಾಬಿನೆಟ್‌ನಲ್ಲಿ ಉತ್ತಮ ಪ್ರಾತಿನಿಧ್ಯವನ್ನು ನಿರೀಕ್ಷಿಸಿದ್ದರು.
ಜನವರಿಯಲ್ಲಿ ಭರತ್‌ಪುರ ಮತ್ತು ಧೋಲ್‌ಪುರ್ ಜಿಲ್ಲೆಗಳ ಜಾಟ್ ಸಮುದಾಯದವರು ಇತರ ಹಿಂದುಳಿದ ವರ್ಗ (ಒಬಿಸಿ) ಕೋಟಾಕ್ಕೆ ಆಗ್ರಹಿಸಿ, ಚಳವಳಿ ಆರಂಭಿಸಿ ದರು.
ಕಾಂಗ್ರೆಸ್ ಸಂಕಷ್ಟಕ್ಕೆ ಕೊನೆಯಿಲ್ಲ: ಆದರೆ, ಕಾಂಗ್ರೆಸ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಹೋಲಿಸಿದರೆ ಇದು ಚಿಕ್ಕ ಸಮಸ್ಯೆ. ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಜಗಳದಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಶಕ್ತಿ ಕುಸಿದಿದೆ. ಚುನಾವಣೆಗೆ ಮುನ್ನ ಕೆಲವು ಪ್ರಮುಖ ಕಾಂಗ್ರೆಸ್ ನಾಯಕರು ವಲಸೆ ಹೋಗಿರುವುದರಿಂದ ಪಕ್ಷದ ಸಂಕಷ್ಟ ಮತ್ತಷ್ಟು ಹೆಚ್ಚಿದೆ.
ಮಾಜಿ ಸಚಿವ ಹಾಗೂ ನಾಲ್ಕು ಬಾರಿ ಶಾಸಕರಾಗಿದ್ದ ಮಹೇಂದ್ರಜೀತ್ ಸಿಂಗ್ ಮಾಳವೀಯ, ಕಳೆದ ತಿಂಗಳು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಕಳೆದ ವರ್ಷ ಕಾಂಗ್ರೆಸ್ ತೊರೆದಿದ್ದ ಜ್ಯೋತಿ ಮಿರ್ಧಾ, ನಾಗೋರ್‌ನಿಂದ ಬಿಜೆಪಿ ಟಿಕೆಟ್ ಪಡೆದಿದ್ದಾರೆ.
ಮಾಜಿ ಸಚಿವರಾದ ರಾಜೇಂದ್ರ ಯಾದವ್ ಮತ್ತು ಲಾಲ್ ಚಂದ್ ಕಟಾರಿಯಾ, ಮಾಜಿ ಸಂಸದ ಕರಣ್ ಸಿಂಗ್ ಯಾದವ್, ಮಾಜಿ ಶಾಸಕರಾದ ರಿಚ್‌ಪಾಲ್ ಮಿರ್ಧಾ, ಅವರ ಪುತ್ರ ವಿಜಯ್‌ಪಾಲ್ ಮಿರ್ಧಾ, ಮಾಜಿ ಸ್ವತಂತ್ರ ಶಾಸಕ ಅಲೋಕ್ ಬೇನಿವಾಲ್ ಮತ್ತು ರಾಜ್ಯ ಸೇವಾದಳದ ಮಾಜಿ ಮುಖ್ಯಸ್ಥ ಸುರೇಶ್ ಚೌಧರಿ ಕೂಡ ಆಡಳಿತ ಪಕ್ಷಕ್ಕೆ ಸೇರಿದ್ದಾರೆ. ಮಾಳವೀಯ ಅವರ ಪಕ್ಷಾಂತರವು ಬನ್ಸ್ವಾರಾ ಮತ್ತು ಡುಂಗರ್‌ಪುರದ ವಾಗಡ್ ಪ್ರದೇಶದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಬಿಜೆಪಿಗೆ ಸಹಾಯ ಮಾಡುತ್ತದೆ. 2019 ರಲ್ಲಿ ನಾಗೌರ್ ಸ್ಥಾನವನ್ನು ಗೆದ್ದ ಹನುಮಾನ್ ಬೇನಿವಾಲ್ ಅವರಿಂದ ಮಿರ್ಧಾ ಎದುರಿಸಬೇಕಿದೆ.
ಕಾಂಗ್ರೆಸ್‌ಗೆ ಮುಂದಿನ ಹಾದಿ: ಗೆಹ್ಲೋಟ್ ಅವರ ರಾಜಕೀಯ ಚಾಣಾಕ್ಷತೆ ಮತ್ತು ಯುವಕರು- ಗುಜ್ಜಾರ್‌ಗಳಲ್ಲಿ ಪೈಲಟ್ ಅವರ ಜನಪ್ರಿಯತೆ ಬಿಜೆಪಿಯ ಮತ ಬ್ಯಾಂಕ್ ಗೆ ಧಕ್ಕೆ ತರಲಿದೆ ಏಂಬುದು ಕಾಂಗ್ರೆಸ್ ನಿರೀಕ್ಷೆ. ಆದರೆ, ಈ ಇಬ್ಬರು ನಾಯಕರ ಕಿತ್ತಾಟ ಕಳೆದ ಐದು ವರ್ಷಗಳಲ್ಲಿ ಪಕ್ಷಕ್ಕೆ ಹಾನಿ ಮಾಡಿದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ನ ಸಂಘಟನಾತ್ಮಕ ರಚನೆ ಮತ್ತು ಬೂತ್ ನಿರ್ವಹಣೆಯಲ್ಲಿ ಕೊರತೆಯಿದೆ. ಬಿಜೆಪಿ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಭಾವಿಸುವ ಗುಜ್ಜರ್ ಸಮುದಾಯದ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತದೆ.
ಮೊದಲ ಪಟ್ಟಿ ಹೊರಬಿದ್ದಿದೆ: ಬಿಜೆಪಿ 15 ಸ್ಥಾನಗಳ ಮೊದಲ ಪಟ್ಟಿಯಲ್ಲಿ ಎಂಟು ಸಂಸದರನ್ನು ಉಳಿಸಿಕೊಂಡಿದೆ ಮತ್ತು ಏಳು ಸ್ಥಾನಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. ಈ ಏಳು ಸ್ಥಾನಗಳಲ್ಲಿ ಎರಡು ತೆರವಾಗಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ನ ಪ್ರಮುಖ ಶಾಸಕರು ಸ್ಪರ್ಧಿಸಲು ಹಿಂಜರಿಯುತ್ತಿದ್ದಾರೆ.
ಗೆಹ್ಲೋಟ್ ಅವರ ಪುತ್ರ ವೈಭವ್ ಅವರನ್ನು ಜಲೋರ್ ಕ್ಷೇತ್ರದಿಂದ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ರಾಹುಲ್ ಕಸ್ವಾನ್ ಅವರಿಗೆ ಚುರು ಕ್ಷೇತ್ರದಿಂದ ಟಿಕೆಟ್ ನೀಡಿದೆ. ಅಲ್ವಾರ್ ಲೋಕಸಭಾ ಕ್ಷೇತ್ರದಿಂದ ಲಲಿತ್ ಯಾದವ್, ಟೋಂಕ್ ನಿಂದ ಹರೀಶ್ ಮೀನಾ ಮತ್ತು ಜುಂಜುನು ಕ್ಷೇತ್ರದಿಂದ ಬ್ರಿಜೇಂದ್ರ ಓಲಾ ಸೇರಿದಂತೆ ಮೂವರು ಹಾಲಿ ಶಾಸಕರ ಹೆಸರುಗಳಿವೆ.
ಉನ್ನತ ನಾಯಕರಿಂದ ನಿಯಂತ್ರಣ: ಗೆಹ್ಲೋಟ್ ಜೋಧ್‌ಪುರ, ನಾಗೌರ್, ಬಿಕಾನೇರ್ ಮತ್ತು ಪಾಲಿ ಜಿಲ್ಲೆಗಳು, ಪೈಲಟ್ ಅವರಿಗೆ ದೌಸಾ, ಟೋಂಕ್ ಮತ್ತು ಧೌಲ್ಪುರ್ ಜಿಲ್ಲೆಗಳು, ರಾಜ್ಯ ಘಟಕದ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಅವರಿಗೆ ಸಿಕರ್ ಮತ್ತು ಜೈಪುರ ಜಿಲ್ಲೆ ಹಾಗೂ ಮಾಜಿ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರಿಗೆ ಉದಯಪುರ, ರಾಜ್‌ಸಮಂದ್ ಮತ್ತು ಭಿಲ್ವಾರಾ ಜಿಲ್ಲೆಗಳ ಜವಾಬ್ದಾರಿಯನ್ನು ವಹಿಸಲಾಗಿದೆ.