ಇಂಡಿಯಾ ಒಕ್ಕೂಟ ಸರ್ಕಾರ: ನಾಳೆ ನಿರ್ಧಾರ- ರಾಹುಲ್
x

ಇಂಡಿಯಾ ಒಕ್ಕೂಟ ಸರ್ಕಾರ: ನಾಳೆ ನಿರ್ಧಾರ- ರಾಹುಲ್


ಇಂಡಿಯ ಒಕ್ಕೂಟ ವಿರೋಧ ಪಕ್ಷವಾಗಿ ಉಳಿಯಬೇಕೇ ಅಥವಾ ಸರ್ಕಾರ ರಚಿಸಲಿದೆಯೇ ಎಂಬ ಪ್ರಶ್ನೆಯನ್ನು ನಾಳೆ ನಡೆಯಲಿರುವ ಇಂಡಿಯ ಒಕ್ಕೂಟದ ಸಭೆಯಲ್ಲಿ ಇರಿಸಲಾಗುವುದು ಎಂದು ಸಂಸದ ರಾಹುಲ್‌ ಗಾಂಧಿ ಹೇಳಿದರು.

ಮಂಗಳವಾರ ಸಂಜೆ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಂಟಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ ಅವರು, ಜೆಡಿಯು, ಟಿಡಿಪಿಯನ್ನು ಸಂಪರ್ಕಿಸುವ ಕುರಿತು ನಾಳೆ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು. ನಾವು ನಮ್ಮ ಪಾಲುದಾರರನ್ನು ಗೌರವಿಸುತ್ತೇವೆ ಮತ್ತು ಅವರೊಂದಿಗೆ ಸಮಾಲೋಚನೆಯಿಲ್ಲದೆ ಹೇಳಿಕೆ ನೀಡುವುದಿಲ್ಲ. ಬಹಳ ಸೂಕ್ಷ್ಮವಾದ ಮಾರ್ಗವಿದೆ; ಒಕ್ಕೂಟ ನಿರ್ಧರಿಸಿದ್ದನ್ನು ಒಪ್ಪುತ್ತೇವೆ,ʼ ಎಂದು ತಿಳಿಸಿದರು.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ʻನಾವು ನಮ್ಮಒಕ್ಕೂಟದ ಪಾಲುದಾರರು ಮತ್ತು ನಮ್ಮೊಟ್ಟಿಗೆ ಸೇರಲು ಬಯಸುವವರ ಜೊತೆ ಮಾತನಾಡದೆ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ, ಅದರಿಂದ ಮೋದಿಯನ್ನು ಎಚ್ಚರಿಸುತ್ತದೆ,ʼ ಎಂದು ಹೇಳಿದರು.

ʻಫಲಿತಾಂಶ ಜನರು ಮತ್ತು ಪ್ರಜಾಪ್ರಭುತ್ವದ ಗೆಲುವು. ಚುನಾವಣೆ ಜನರು ಮತ್ತು ಮೋದಿ ನಡುವಿನ ಹೋರಾಟ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಜನ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿಲ್ಲ. ಬಿಜೆಪಿ ಒಬ್ಬ ವ್ಯಕ್ತಿ ಪರ ಜನಾದೇಶ ಕೋರಿದ್ದು, ಜನಾದೇಶ ಅವರ ವಿರುದ್ಧವಾಗಿರುವುದು ಈಗ ಸ್ಪಷ್ಟವಾಗಿದೆ. ಇದು ನರೇಂದ್ರ ಮೋದಿಯವರ ನೈತಿಕ ಸೋಲು,ʼ ಎಂದರು.

ʻಕಾಂಗ್ರೆಸ್ ಪಕ್ಷ ಮತ್ತು ಇಂಡಿಯ ಒಕ್ಕೂಟವು ವಿವಿಧ ಸಂಸ್ಥೆಗಳು ಸೃಷ್ಟಿಸಿದ ಅಡೆತಡೆಗಳ ಹೊರತಾಗಿಯೂ ಸಕಾರಾತ್ಮಕ ಪ್ರಚಾರ ಮಾಡಿದೆ. ಬೆಲೆ ಏರಿಕೆ, ರೈತರ ಸಮಸ್ಯೆ, ನಿರುದ್ಯೋಗ ಮತ್ತು ಸಂಸದೀಯ ಸಂಸ್ಥೆಗಳ ಬುಡಮೇಲುಗೊಳಿಸುವಿಕೆ ಕುರಿತು ಮಾತಾಡಿದ್ದೇವೆ. ಜನ ನಮ್ಮೊಂದಿಗೆ ಸೇರಿಕೊಂಡರು, ಬೆಂಬಲಿಸಿದರು. ಪ್ರಧಾನಮಂತ್ರಿಯವರು ನಡೆಸಿದ ಪ್ರಚಾರವನ್ನು ದೀರ್ಘಕಾಲ ಮರೆಯಲು ಸಾಧ್ಯವಿಲ್ಲ. ಅವರು ಹರಡಿದ ಸುಳ್ಳುಸುದ್ದಿಗಳನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ರಾಹುಲ್ ಅವರ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆಗಳು ನಮ್ಮ ಪ್ರಚಾರ ಮತ್ತು ನಮ್ಮ ಪ್ರಣಾಳಿಕೆಗೆ ಅಡಿಪಾಯ ನೀಡಿತು,ʼ ಎಂದು ವಿವರಿಸಿದರು.

Read More
Next Story