ಎನ್‌ಸಿಪಿ, ಕಾಂಗ್ರೆಸ್ ಘೋಷಿಸಿದ ಅಭ್ಯರ್ಥಿಗೆ ಬೆಂಬಲ: ಉದ್ಧವ್
x

ಎನ್‌ಸಿಪಿ, ಕಾಂಗ್ರೆಸ್ ಘೋಷಿಸಿದ ಅಭ್ಯರ್ಥಿಗೆ ಬೆಂಬಲ: ಉದ್ಧವ್


ಮಹಾ ವಿಕಾಸ್ ಅಘಾಡಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಘೋಷಿಸಿದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ (ಆಗಸ್ಟ್ 16) ಹೇಳಿದರು.

ಮುಂಬೈನಲ್ಲಿ ಎಂವಿಎ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ವಿಧಾನಸಭೆ ಚುನಾವಣೆಯು ಮಹಾರಾಷ್ಟ್ರದ ಸ್ವಾಭಿಮಾನವನ್ನು ಕಾಪಾಡುವ ಹೋರಾಟ ಎಂದರು.

ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಎಂವಿಎ ಒಕ್ಕೂಟವು ಶಿವ ಸೇನೆ (ಯುಬಿಟಿ), ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಕಾಂಗ್ರೆಸ್ ನ್ನು ಒಳಗೊಂಡಿದೆ.

ʻನಾನು ನನಗಾಗಿ ಹೋರಾಡುತ್ತಿಲ್ಲ; ಮಹಾರಾಷ್ಟ್ರದ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಎಂಬುದಕ್ಕಿಂತ, ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಬೇಕು,ʼ ಎಂದು ಹೇಳಿದರು.

ಮಹಾರಾಷ್ಟ್ರದ ಹೆಮ್ಮೆ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಸ್ವಯಂ ಹಿತಾಸಕ್ತಿಯನ್ನು ಮೀರಿ ಹೋರಾಡಬೇಕು. ರಾಜ್ಯದಲ್ಲಿ ವಿಪಕ್ಷಗಳ ಮೈತ್ರಿಕೂಟದ ರಾಯಭಾರಿಗಳಾಗಬೇಕು ಎಂದು ಕಾರ್ಯಕರ್ತರನ್ನು ಠಾಕ್ರೆ ಕೇಳಿಕೊಂಡರು.

ಪ್ರಧಾನಿ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜಾತ್ಯತೀತ ನಾಗರಿಕ ಸಂಹಿತೆ ಬಗ್ಗೆ ಮಾತಾಡಿದ್ದನ್ನು ಪ್ರಶ್ನಿಸಿದ ಠಾಕ್ರೆ, ʻಅವರು ಹಿಂದುತ್ವವನ್ನು ತ್ಯಜಿಸಿದರಾ?ʼ ಎಂದು ಆಶ್ಚರ್ಯಪಟ್ಟರು. ʻಬಿಜೆಪಿ ಸಂಪೂರ್ಣ ಬಹುಮತದಲ್ಲಿದ್ದಾಗ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಏಕೆ ಅಂಗೀಕರಿಸಲಿಲ್ಲ?ʼ ಎಂದು ಕೇಳಿದರು.

Read More
Next Story