Wikipedia: ಸಂಭಾಜಿ ವಿರುದ್ಧ ಅವಹೇಳನ ಆರೋಪ; ವಿಕಿಪೀಡಿಯಾ ಸಂಪಾದಕರ ವಿರುದ್ಧ ಪ್ರಕರಣ ದಾಖಲು
x
AI ರಚಿತ ಚಿತ್ರ.

Wikipedia: ಸಂಭಾಜಿ ವಿರುದ್ಧ ಅವಹೇಳನ ಆರೋಪ; ವಿಕಿಪೀಡಿಯಾ ಸಂಪಾದಕರ ವಿರುದ್ಧ ಪ್ರಕರಣ ದಾಖಲು

Wikipedia : ಪ್ರಕಟಿತ ಮಾಹಿತಿ ತೆಗೆದುಹಾಕುವ ಕುರಿತು ವಿಕಿಮೀಡಿಯಾದಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ಕನಿಷ್ಠ ನಾಲ್ಕು ವಿಕಿಪೀಡಿಯಾ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ಛತ್ರಪತಿ ಸಂಭಾಜಿ ಕುರಿತು ಆಕ್ಷೇಪಾರ್ಹ ವಿಷಯವೊಂದು ಪ್ರಕಟವಾಗಿರುವುದರ ಬಗ್ಗೆ ಮಾಹಿತಿ ನೀಡಿದ ಹೊರತಾಗಿಯೂ ಅದನ್ನು ತೆಗೆದು ಹಾಕದ ವಿಕಿಪೀಡಿಯಾ ಸಂಪಾದಕರ ವಿರುದ್ಧ ಮಹಾರಾಷ್ಟ್ರ ಸೈಬರ್ ಘಟಕ ಕೇಸ್​ ದಾಖಲಿಸಿದೆ. ನಾಲ್ಕು ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ. ವಿಕಿಮೀಡಿಯಾ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ಅದು ವಿಕಿಪೀಡಿಯಾವನ್ನು ನಿರ್ವಹಿಸುತ್ತದೆ.

ತಪ್ಪು ಮಾಹಿತಿ ಕುರಿತು ಕ್ಯಾಲಿಫೋರ್ನಿಯಾದ ವಿಕಿಮೀಡಿಯಾ ಫೌಂಡೇಶನ್‌ಗೆ ಸೂಚನೆ ಕಳುಹಿಸಿ, ಅದನ್ನು ತೆಗೆಯುವಂತೆ ವಿನಂತಿಸಲಾಗಿತ್ತು. ಪ್ರಕಟಿತ ಮಾಹಿತಿ ತಪ್ಪಾಗಿದ್ದು ಮಹಾರಾಷ್ಟ್ರದಲ್ಲಿ ಕಾನೂನು ಸಮಸ್ಯೆಗೆ ಕಾರಣವಾಗಬಹುದು ಎಂದು ತಿಳಿಸಲಾಗಿತ್ತು. ಮರಾಠ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜನ ಪುತ್ರನಾಗಿರುವ ಸಂಭಾಜಿ ಮಹಾರಾಜರನ್ನು ಭಾರತದಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಆದರೆ ವಿಕಿಪೀಡಿಯಾದಲ್ಲಿ ಪ್ರಕಟಿತ ಮಾಹಿತಿಯಿಂದ ಅವರ ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದು, ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿತ್ತು.

ಸೈಬಲ್​ ಸೆಲ್​ನ ಮನವಿಗೆ ವಿಕಿಮೀಡಿಯಾದಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ನಾಲ್ಕು ವಿಕಿಪೀಡಿಯಾ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿಕಿಪೀಡಿಯಾ ಉಚಿತ ಮಾಹಿತಿ ಕೋಶ

ವಿಕಿಪೀಡಿಯಾ ಉಚಿತವಾಗಿ ಲಭ್ಯವಿರುವ ವಿಶ್ವಕೋಶವಾಗಿದ್ದು, ಇದನ್ನು ಸ್ವಯಂಸೇವಕರ ಸಹಕಾರದ ಮೂಲಕ ಆರಂಭಿಸಿ, ನಿರ್ವಹಿಸಲಾಗುತ್ತಿದೆ. ಈ ವೇದಿಕೆಯಲ್ಲಿ ನಿರ್ದಿಷ್ಟ ವ್ಯಕ್ತಿಗಳು ಮಾತ್ರ ಯಾವುದೇ ವಿಷಯವನ್ನು ಅಪ್‌ಲೋಡ್ ಮತ್ತು ಎಡಿಟ್​​ ಮಾಡಬಹುದು.

ವಿಕಿಪೀಡಿಯಾದಲ್ಲಿ ಪ್ರಕಟಗೊಂಡಿರುವ ಮಾಹಿತಿಯು ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಲನಚಿತ್ರ 'ಛಾವ”ದ ಕತೆಗೆ ಸಂಬಂಧಿಸಿದ್ದು. ಈ ಚಲನಚಿತ್ರ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ.

Read More
Next Story