ಮೋದಿ 3.0| ಪವನ್ ಕಲ್ಯಾಣ್ ಕ್ಯಾಬಿನೆಟ್ ಸೇರಲಿಲ್ಲ ಏಕೆ?
x

ಮೋದಿ 3.0| ಪವನ್ ಕಲ್ಯಾಣ್ ಕ್ಯಾಬಿನೆಟ್ ಸೇರಲಿಲ್ಲ ಏಕೆ?


ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಕೇಂದ್ರ ಸಂಪುಟಕ್ಕೆ ಸೇರದಿರಲು ನಿರ್ಧರಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಮೋದಿಯವರ ಸಂಪುಟದಲ್ಲಿ 30 ಕ್ಯಾಬಿನೆಟ್ ದರ್ಜೆ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರು ಇದ್ದಾರೆ.

ಪವನ್ ಕಲ್ಯಾಣ್ ಡಿಸಿಎಂ ಆಗುತ್ತಾರಾ?: ನವದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಪವನ್ ಕಲ್ಯಾಣ್ ಅವರು ಭಾಗವಹಿಸಿದ್ದರು ಆದರೆ, ಕ್ಯಾಬಿನೆಟ್ ಸೇರದಿರಲು ನಿರ್ಧರಿಸಿದರು. ಅವರು ಕೆಲಕಾಲಾನಂತರ ಕೇಂದ್ರ ಸಚಿವರಾಗಬಹುದು ಎಂಬ ವದಂತಿಯಿದೆ. ಬುಧವಾರ (ಜೂನ್ 12) ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗಬಹುದು.

ಪವನ್‌ ಕಲ್ಯಾಣ್ ಪಿತಾಪುರಂ ವಿಧಾನಸಭೆ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಜನಸೇನೆ ಎರಡು ಲೋಕಸಭಾ ಸ್ಥಾನಗಳ ನ್ನು ಗೆದ್ದುಕೊಂಡಿದೆ. ಟಿಡಿಪಿ 16 ಹಾಗೂ ಬಿಜೆಪಿ ಮೂರು ಸ್ಥಾನ ಗೆದ್ದಿದೆ. ಇತ್ತೀಚಿನ ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಪವನ್ ಕಲ್ಯಾಣ್ ಅವರನ್ನು ʻಚಂಡಮಾರುತʼ ಎಂದು ಹೊಗಳಿದ್ದರು. ʻ ಪವನ್ ತಂಗಾಳಿಯಲ್ಲ; ಅವನು ಚಂಡಮಾರುತ,‌ʼ ಅವರು ಹೇಳಿದ್ದರು.

ಸುರೇಶ್ ಗೋಪಿ ನಿರ್ಗಮನ ಇಲ್ಲ: ʻತಾವು ಮೋದಿ ನೇತೃತ್ವದ ಸರ್ಕಾರದಿಂದ ನಿರ್ಗಮನ ಬಯಸುತ್ತಿದ್ದೇನೆ ಎಂಬ ವರದಿಗಳು ತಪ್ಪುʼ ಎಂದು ಸುರೇಶ್ ಗೋಪಿ ಹೇಳಿದ್ದಾರೆ. ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಗೋಪಿ, ʻಕೇಂದ್ರ ಸಚಿವ ಸಂಪುಟದಲ್ಲಿ ಇರುವುದು ಮತ್ತು ಕೇರಳದ ಜನರನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ,ʼ ಎಂದು ಬರೆದಿದ್ದಾರೆ.

'ನಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪು ಸುದ್ದಿ ಹರಡುತ್ತಿವೆ. ಇದು ತೀರಾ ತಪ್ಪು. ಕೇಂದ್ರ ಸಂಪುಟದಲ್ಲಿ ಇರುವುದು ಮತ್ತು ಕೇರಳದ ಜನರನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ,ʼ ಎಂದು ತಿಳಿಸಿದ್ದಾರೆ.

Read More
Next Story