Union Budget 2024: ಮಹಿಳೆಯರಿಗೆ ವಸತಿನಿಲಯ, ಶಿಶುವಿಹಾರ, ಕೌಶಲ ಕಾರ್ಯಕ್ರಮಗಳಿಗೆ 3 ಲಕ್ಷ ಕೋಟಿ ರೂ.
x

Union Budget 2024: ಮಹಿಳೆಯರಿಗೆ ವಸತಿನಿಲಯ, ಶಿಶುವಿಹಾರ, ಕೌಶಲ ಕಾರ್ಯಕ್ರಮಗಳಿಗೆ 3 ಲಕ್ಷ ಕೋಟಿ ರೂ.

ಮಹಿಳೆಯರು ಖರೀದಿಸುವ ಆಸ್ತಿಯ ಮೇಲಿನ ಸುಂಕವನ್ನು ಮತ್ತಷ್ಟು ಕಡಿಮೆ ಮಾಡುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ʻಯುವಜನರು, ರೈತರು ಮತ್ತು ಬಡವರ ಜೊತೆಗೆ ಮಹಿಳೆಯರು ತಮ್ಮ ಆದ್ಯತೆʼ ಎಂದು ಹೇಳಿದರು.

ʻಮಧ್ಯಂತರ ಬಜೆಟ್‌ನಂತೆ ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಮೇಲೆ ಕೇಂದ್ರೀಕರಿಸಬೇಕಿದೆʼ ಎಂದು ಅವರು ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು.

ʻಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ ಸರ್ಕಾರವು 3 ಲಕ್ಷ ಕೋಟಿ ರೂ. ವಿನಿಯೋಗಿಸುತ್ತಿದೆ" ಎಂದು ಹೇಳಿದರು. ಇವುಗಳಲ್ಲಿ ಮಹಿಳಾ ನಿರ್ದಿಷ್ಟ ಕೌಶಲ ಕಾರ್ಯಕ್ರಮಗಳು, ಕೆಲಸ ಮಾಡುವ ಮಹಿಳೆಯರಿಗಾಗಿ ಹಾಸ್ಟೆಲ್‌ಗಳು ಮತ್ತು ಅವರು ಕೆಲಸ ಮತ್ತು ಮನೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಶಿಶುವಿಹಾರಗಳು ಇರಲಿವೆ.

ಹಾಸ್ಟೆಲ್‌ ಮತ್ತು ಶಿಶುವಿಹಾರ: ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸರ್ಕಾರವು ಮಹಿಳಾ ವಸತಿ ನಿಲಯಗಳನ್ನು ಸ್ಥಾಪಿಸುತ್ತದೆ ಎಂದು ಸೀತಾರಾಮನ್ ಹೇಳಿದರು. ʻಕೈಗಾರಿಕೆಗಳ ಸಹಯೋಗದಲ್ಲಿ ಮಹಿಳಾ ಹಾಸ್ಟೆಲ್‌ಗಳು ಮತ್ತು ಶಿಶುವಿಹಾರಗಳ ಸ್ಥಾಪನೆ ಮೂಲಕ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಸುಲಭಗೊಳಿಸುತ್ತೇವೆ,ʼ ಎಂದು ಹೇಳಿದರು. ಮಹಿಳಾ ನಿರ್ದಿಷ್ಟ ಕೌಶಲ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಮಹಿಳಾ ಸ್ವ ಸಹಾಯ ಗುಂಪು ಉದ್ಯಮಗಳಿಗೆ ಮಾರುಕಟ್ಟೆ ಪ್ರವೇಶ ಉತ್ತೇಜಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

ಆಸ್ತಿ ಖರೀದಿಗೆ ಕಡಿಮೆ ಸುಂಕ: ಮಹಿಳೆಯರು ಖರೀದಿಸುವ ಆಸ್ತಿ ಮೇಲಿನ ಸುಂಕವನ್ನು ಮತ್ತಷ್ಟು ಕಡಿಮೆ ಮಾಡುವ ಮತ್ತು ಅದನ್ನು ನಗರಾಭಿವೃದ್ಧಿ ಯೋಜನೆಗಳ ಅಗತ್ಯ ಅಂಶವನ್ನಾಗಿ ಮಾಡುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಲಿದೆ. ಹೆಚ್ಚು ಸ್ಟ್ಯಾಂಪ್ ಡ್ಯೂಟಿ ಇರುವ ರಾಜ್ಯಗಳನ್ನು ಎಲ್ಲರಿಗೂ ಮಧ್ಯಮ ದರ ವಿಧಿಸಲು ಪ್ರೋತ್ಸಾಹಿಸಲಾಗುತ್ತದೆ, ʼ ಎಂದು ಹೇಳಿದರು.

ನಿರಾಶಾದಾಯಕ: ಮಾಯಾವತಿ- ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು, ಬಜೆಟ್ ಮಹಿಳೆಯರಿಗೆ ನಿರಾಶೆ ತಂದಿದೆ. ಬಡವರು, ನಿರುದ್ಯೋಗಿಗಳು, ರೈತರು ಮತ್ತು ನಿರ್ಲಕ್ಷಿತ ಮತ್ತು ಅಂಚಿನಲ್ಲಿರುವ ಜನರಿಗೆ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.

ʻಇಂದು ಮಂಡಿಸಿದ ಕೇಂದ್ರ ಬಜೆಟ್ ಅದೇ ಹಳೆಯ ಮಾದರಿಯನ್ನು ಅನುಸರಿಸುತ್ತದೆ. ಬೆರಳೆಣಿಕೆಯಷ್ಟು ಶ್ರೀಮಂತರನ್ನು ಹೊರತುಪಡಿಸಿ, ದೇಶದ ಬಡವರು, ನಿರುದ್ಯೋಗಿಗಳು, ರೈತರು, ಮಹಿಳೆಯರು, ಕಾರ್ಮಿಕರು, ಅಂಚಿನಲ್ಲಿರುವ ಮತ್ತು ನಿರ್ಲಕ್ಷಿತ ಸಮುದಾಯಗಳಿಗೆ ಉತ್ತಮ ದಿನಗಳ ಭರವಸೆಯನ್ನು ನೀಡುವುದಿಲ್ಲ,ʼ ಎಂದು ಮಾಯಾವತಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Read More
Next Story