RG Kar Hospital : ಆಸ್ಪತ್ರೆಯ ಕ್ವಾಟ್ರರ್ಸ್‌ನಲ್ಲಿ ಆರ್‌ಜಿ ಕಾರ್ ವಿದ್ಯಾರ್ಥಿ ಶವವಾಗಿ ಪತ್ತೆ
x

RG Kar Hospital : ಆಸ್ಪತ್ರೆಯ ಕ್ವಾಟ್ರರ್ಸ್‌ನಲ್ಲಿ ಆರ್‌ಜಿ ಕಾರ್ ವಿದ್ಯಾರ್ಥಿ ಶವವಾಗಿ ಪತ್ತೆ

RG Kar Hospital: ಐವಿ ಪ್ರಸಾದ್ ಕಮರ್‌ಹತಿ ಇಎಸ್ಐ ಆಸ್ಪತ್ರೆಯ ಕ್ವಾರ್ಟ್ರಸ್‌ನಲ್ಲಿ ವಿದ್ಯಾರ್ಥಿನಿ ವಾಸಿಸುತ್ತಿದ್ದಳು ಮತ್ತು ಆಕೆಯ ತಾಯಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ವೈದ್ಯಕೀಯ ವಿದ್ಯಾರ್ಥಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎರಡನೇ ವರ್ಷದ ವಿದ್ಯಾರ್ಥಿನಿಯ ಶವ ಆಕೆಯ ಕ್ವಾರ್ಟರ್ಸ್ ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಐವಿ ಪ್ರಸಾದ್ ಕಮರ್‌ಹತಿ ಇಎಸ್ಐ ಆಸ್ಪತ್ರೆಯ ಕ್ವಾರ್ಟ್ರಸ್‌ನಲ್ಲಿ ವಿದ್ಯಾರ್ಥಿನಿ ವಾಸಿಸುತ್ತಿದ್ದಳು ಮತ್ತು ಆಕೆಯ ತಾಯಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬರಾಕ್ಪೋರ್ ಪೊಲೀಸ್ ಕಮಿಷನರೇಟ್‌ನ ಕಮರ್‌ಹತಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ. ಎಂದು ಅವರು ಹೇಳಿದ್ದಾರೆ.

ತಾಯಿಯ ಫೋನ್ ಕರೆಗಳಿಗೆ ಸ್ಪಂದಿಸದ ಕಾರಣ ಅನುಮಾನದಿಂದ ಮನೆಗೆ ಬಂದು ನೋಡಿದಾಗ ಆಕೆಯ ಶವ ಪತ್ತೆಯಾಗಿದೆ. ಮರುದಿನ ಸರ್ಕಾರಿ ಸಾಗರ್ ದತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ 9 ರಂದು ಆರ್ ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು ಮತ್ತು ಕೆಲಸದ ಸ್ಥಳದ ಭದ್ರತೆಯನ್ನು ಹೆಚ್ಚಿಸುವಂತೆ ಒತ್ತಾಯಿಸಲಾಯಿತು.

Read More
Next Story