Parliament Session | ಅಭಿಷೇಕ್​ ಸಿಂಗ್ವಿ ಸೀಟಿನ ಬಳಿ ನೋಟಿನ ಕಂತೆ: ರಾಜ್ಯಸಭೆಯಲ್ಲಿ ಕೋಲಾಹಲ
x
Wad of notes found near Abhishek Singhvi's seat; Ruckus in Rajya Sabha

Parliament Session | ಅಭಿಷೇಕ್​ ಸಿಂಗ್ವಿ ಸೀಟಿನ ಬಳಿ ನೋಟಿನ ಕಂತೆ: ರಾಜ್ಯಸಭೆಯಲ್ಲಿ ಕೋಲಾಹಲ

ನೋಟು ಸಿಕ್ಕಿದ ವಿಷಯ ನನ್ನ ಗಮನಕ್ಕೆ ಬಂತು. ಯಾರಾದರೂ ಅದನ್ನು ಮರಳಿ ಪಡೆಯಲು ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ಶುಕ್ರವಾರ ಬೆಳಿಗ್ಗೆಯವರೆಗೆ ಯಾರೂ ಕೇಳಲಿಲ್ಲ. ಹೀಗಾಗಿ ತನಿಖೆಗೆ ಒಪ್ಪಿಸಿದೆ ಎಂದು ಸಭಾಧ್ಯಕ್ಷ ಧನ್ಕರ್ ಹೇಳಿದರು.


ಗುರುವಾರ ಸಂಸತ್​ನಲ್ಲಿ ತಪಾಸಣೆಯ ಮಾಡುವ ವೇಳೆ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನಿಗದಿಪಡಿಸಿದ ಆಸನ ಸಂಖ್ಯೆ 222 ರಲ್ಲಿ ನೋಟುಗಳ ಕಂತೆ ಸಿಕ್ಕಿತ್ತು ಎಂಬ ವಿಷಯ ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸಭಾಪತಿ ಜಗದೀಪ್ ಧನ್ಕರ್ ಶುಕ್ರವಾರ (ಡಿಸೆಂಬರ್ 6) ಸದನಕ್ಕೆ ಮಾಹಿತಿ ನೀಡಿದಾಗ ಭಾರೀ ವಾಕ್ಸಮರಕ್ಕೆ ಕಾರಣವಾಯಿತು.

"ಕಾನೂನಿನ ಪ್ರಕಾರ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ. ಅದು ಅದು ನಡೆಯುತ್ತಿದೆ" ಎಂದು ಧನ್ಕರ್ ಹೇಳಿದ್ದಾರೆ. ಅಭಿಷೇಕ್​ ಸಿಂಘ್ವಿ ಪ್ರತಿಕ್ರಿಯಿಸಿ ನೋಟುಗಳು ತಮಗೆ ಸೇರಿದ್ದಲ್ಲ. ಗುರುವಾರ ಕೇವಲ ಮೂರು ನಿಮಿಷಗಳ ಕಾಲ ಸದನದಲ್ಲಿದ್ದೆ. ಹೀಗಾಗಿ ತನಿಖೆಗೆ ಬೆಂಬಲ ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ನೋಟು ಸಿಕ್ಕಿದ ವಿಷಯ ನನ್ನ ಗಮನಕ್ಕೆ ಬಂತು. ಯಾರಾದರೂ ಅದನ್ನು ಮರಳಿ ಪಡೆಯಲು ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ಶುಕ್ರವಾರ ಬೆಳಿಗ್ಗೆಯವರೆಗೆ ಯಾರೂ ಮಾಡಲಿಲ್ಲ ಎಂದು ಧನ್ಕರ್ ಹೇಳಿದರು. ನೋಟುಗಳು ನಕಲಿಯೇ ಅಥವಾ ಅಸಲಿಯೇ ಎಂದು ನನಗೆ ತಿಳಿದಿಲ್ಲ ಎಂದು ರಾಜ್ಯಸಭೆ ಸ್ಪೀಕರ್​ ಹೇಳಿದರು, ಆದರೆ, 500 ರೂಪಾಯಿಯ ನೋಟುಗಳಂತೆ ಕಾಣುತ್ತಿವೆ ಎಂದು ಹೇಳಿದರು.

ವಿಷಯ ಗಂಭೀರ ತನಿಖೆಗೆ ಒಳಪಟ್ಟಿದೆ. ಯಾರೂ ತನಿಖೆಯನ್ನು ವಿರೋಧಿಸಬಾರದು. ನಾವು ಔಪಚಾರಿಕ ಆರ್ಥಿಕತೆಯತ್ತ ಸಾಗುತ್ತಿದ್ದೇವೆ ಎಂಬ ಸಂದೇಶವನ್ನು ಕಳುಹಿಸಬೇಕಾಗಿದೆ" ಎಂದು ಧನ್ಕರ್ ಹೇಳಿದರು. ಮುಂದುವರಿದ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕುರಿತು, ಜನರು ಕರೆನ್ಸಿ ನೋಟುಗಳನ್ನು ಮರೆತು ಹೋಗುವಷ್ಟು ಮಟ್ಟಿಗೆ ಆರ್ಥಿಕತೆಯ ಸ್ಥಿತಿ ಉತ್ತಮವಾಗಿರುವುದನ್ನು ಇದು ಸೂಚಿಸುತ್ತದೆಯೇ" ಎಂದು ಪ್ರಶ್ನಿಸಿದರು.

ಖರ್ಗೆ ವಿರುದ್ಧ ಗರಂ

ಸದನದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ವೇಳೆ ಮಾತನಾಡಿ, ವಿಷಯವು ತನಿಖೆ ಹಂತದಲ್ಲಿದೆ. ಅದು ಮುಗಿದು ನೋಟುಗಳು ಯಾರಿಗೆ ಸೇರಿದೆ ಎಂದು ಖಚಿತವಾಗದ ಹೊರತು, ಸಭಾಧ್ಯಕ್ಷರು, ಸದಸ್ಯರ ಹೆಸರನ್ನು ಹೇಳಬಾರದಿತ್ತು ಎಂದು ಹೇಳಿದರು.

ಈ ವಿಷಯವು ತನಿಖೆಯ ಹಂತದಲ್ಲಿರುವವರೆಗೆ ಇದು ಚರ್ಚೆಯ ವಿಷಯವಾಗಬಾರದು ಎಂದು ಧನ್ಕರ್ ಪ್ರತಿಕ್ರಿಯಿಸಿದರು. ಆದರೆ ಅವರು ಆ ದಿನ ಆ ಆಸನದಲ್ಲಿ ಕುಳಿತುಕೊಂಡಿದ್ದಾರೆಯೇ ಎಂದು ಪರಿಶೀಲನೆ ನಡೆಸಿದ ಬಳಿಕ ಅವರ ಹೆಸರನ್ನು ಹೇಳಿದ್ದೇನೆ. ನೋಟುಗಳು ನಕಲಿಯೋ ಅಥವಾ ಅಸಲಿಯೋ ಮತ್ತು ಕಟ್ಟುಗಳು ನಿಜವಾಗಿಯೂ 100 ರೂಪಾಯಿ ನೋಟುಗಳದ್ದೋ ಅಥವಾ ಇನ್ಯಾವುದೋ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಕನಿಷ್ಠ ಕ್ರಮ ಕೈಗೊಳ್ಳಲಾಗಿದೆ: ಧನ್ಕರ್

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ನೋಟುಗಳನ್ನು ವಶಪಡಿಸಿಕೊಳ್ಳಲಾದ ಸೀಟ್ ಸಂಖ್ಯೆ ಮತ್ತು ಅಲ್ಲಿ ಕುಳಿತವರು ತಿಳಿದಿರುವಾಗ ಸಭಾಧ್ಯಕ್ಷರು ಸಿಂಘ್ವಿ ಹೆಸರು ಯಾಕೆ ಹೇಳಬಾರದು ಎಂದು ಪ್ರಶ್ನಿಸಿದರು. ಸಂಸದರು ನೋಟುಗಳ ಕಂತೆ ಜತೆ ಸದನಕ್ಕೆ ಬರುವುದು ಸರಿಯಲ್ಲ ಮತ್ತು ತನಿಖೆ ಅಗತ್ಯ ಎಂದು ರಿಜಿಜು ಹೇಳಿದರು.

ಧನ್ಕರ್ ಅವರು ತೆಗೆದುಕೊಂಡ ಕ್ರಮವು "ಕನಿಷ್ಠ" ಮತ್ತು "ಅತಿಕ್ರಮಣ"ಕ್ಕೆ ಸಮಾನವಾಗಿಲ್ಲ. . ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ತನಿಖೆ ನಡೆಯುತ್ತಿರುವಾಗ ಸದಸ್ಯರ ಹೆಸರನ್ನು ಹೇಗೆ ಘೋಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಆಗ ಧನ್ಕರ್​, ಖರ್ಗೆ ಅವರು ಸಭಾಧ್ಯಕ್ಷರ ಪೀಠದ ಮೇಲೆ ಅನುಮಾನ ವ್ಯಕ್ತಪಡಿಸುವುದು ಸರಿಯೇ ಎಂದು ಕೇಳಿದರು.

ಸದನದ ಘನತೆಗೆ ಧಕ್ಕೆ: ನಡ್ಡಾ

ಸದನದ ನಾಯಕ ಜೆ.ಪಿ.ನಡ್ಡಾ ಅವರು ಈ ಘಟನೆಯು "ಬಹಳ ಗಂಭೀರ ಸ್ವರೂಪದ್ದಾಗಿದೆ". ಪಕ್ಷಪಾತದ ರಾಜಕೀಯದ ವಿಷಯವಲ್ಲ ಎಂದು ಹೇಳಿದರು. ಈ ಘಟನೆಯು ಸದನದ ಘನತೆಗೆ ಧಕ್ಕೆ ಬಂದಿದೆ ಮತ್ತು ಸಮಗ್ರ ತನಿಖೆಗೆ ಅಗತ್ಯು ಎಂದು ಹೇಳಿದರು.

ಈ ವೇಳೆ ಖರ್ಗೆ, ನಾನು ತನಿಖೆಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಯಾವುದೇ ವಿಷಯವನ್ನು ಗೌಪ್ಯವಾಗಿಡುವಂತೆ ಕೋರಿಲ್ಲ. ತನಿಖೆಯೇ ಮುಗಿಯದಿದ್ದಾಗ ಸದಸ್ಯರ ಹೆಸರನ್ನು ಉಲ್ಲೇಖಿಸಬಾರದಿತ್ತು ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, "ಇಂದು ಭಾರೀ ಪ್ರಮಾಣದ ನೋಟುಗಳು ಸಿಕ್ಕಿವೆ. ಪ್ರತಿಪಕ್ಷಗಳ ಕಡೆಯಿಂದ ನಾಳೆ ಏನು ಸಿಗಬಹುದು. ಅವರು ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ನಕಲಿ ಕತೆಗಳನ್ನು ಕಟ್ಟುತ್ತಾರೆ ಎಂದು ಹೇಳಿದರು.

ಆಶ್ಚರ್ಯಚಕಿತನಾಗಿದ್ದೇನೆ; ಸಿಂಘ್ವಿ

ಘಟನೆಯ ಬಗ್ಗೆ ಅಭಿಷೇಕ್​ಮನು ಸಿಂಘ್ವಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ನಾನು ನಿನ್ನೆ ಮಧ್ಯಾಹ್ನ 12.57 ಕ್ಕೆ ಸದನಕ್ಕೆ ಹೋಗಿದ್ದೆ. ಮಧ್ಯಾಹ್ನ 1 ಗಂಟೆಗೆ ಸದನ ಆರಂಭವಾಯಿತು. ಮಧ್ಯಾಹ್ನ 1 ರಿಂದ 1.30 ರ ನಡುವೆ ಕ್ಯಾಂಟೀನ್​ನಲ್ಲಿ ಕುಳಿತು ಊಟ ಮಾಡಿದೆ. ಮಧ್ಯಾಹ್ನ 1.30ಕ್ಕೆ ನಾನು ಸಂಸತ್ತಿನಿಂದ ಹೊರಟೆ. ಆದ್ದರಿಂದ, ನಿನ್ನೆ ಸದನದಲ್ಲಿ ನನ್ನ ಒಟ್ಟು ಹಾಜರಾತಿ ಮೂರು ನಿಮಿಷ. ಕ್ಯಾಂಟಿನ್​ನಲ್ಲಿ 30 ನಿಮಿಷ. ಇಂತಹ ವಿಷಯಗಳಲ್ಲಿಯೂ ರಾಜಕೀಯ ಮಾಡುವುದು ವಿಲಕ್ಷಣ" ಎಂದು ಅವರು ಹೇಳಿದರು.

"ಈ ಕುರಿತು ತನಿಖೆ ನಡೆಯಲೇಬೇಕು. ಸದನದಲ್ಲಿ ಯಾರೂ ಒಂದು ಇನ್ಯಾರೊ ಸ್ಥಳದಲ್ಲಿ ಯಾವುದೋ ವಸ್ತುಗಳನ್ನು ಇಡುವುದಕ್ಕೆ ಹೇಗೆ ಸಾಧ್ಯ. ಇಂಥ ವಿಚಾರದಲ್ಲಿ ತಳ ಮಟ್ಟದಲ್ಲಿಯೇ ತನಿಖೆ ನಡೆಸಲು ನೆರವು ನೀಡಬೇಕು ಎಂದು ಅವರು ಹೇಳಿದರು.

Read More
Next Story