ವಿ.ವಿ.ಎಸ್.ಲಕ್ಷ್ಮಣ್ ಎನ್‌ಸಿಎ ಅವಧಿ ಸೆಪ್ಟೆಂಬರ್‌ನಲ್ಲಿ ಅಂತ್ಯ: ಬಿಸಿಸಿಐ ಅವರನ್ನು ಉಳಿಸಿಕೊಳ್ಳುವುದೇ?
ಚೆನ್ನೈ, ಮೇ 24 (ಪಿಟಿಐ)- ವಿ.ವಿ.ಎಸ್. ಲಕ್ಷ್ಮಣ್ ಅವರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ( ಎನ್‌ಸಿಎ) ಮುಖ್ಯಸ್ಥನ ಅಧಿಕಾರಾವಧಿ ಸೆಪ್ಟೆಂಬರ್ ನಲ್ಲಿ ಅಂತ್ಯಗೊಳ್ಳಲಿದೆ. ಅವರನ್ನು ಬಿಬಿಸಿಐ ಉಳಿಸಿಕೊಳ್ಳುವುದೇ ಎಂಬ ಪ್ರಶ್ನೆ ಎದುರಾಗಿದೆ.
ಅವರು ದೇಶಿ ತಂಡದ ಮುಖ್ಯ ಕೋಚ್ ಆಗಲು ಹಿಂದೇಟು ಹಾಕುತ್ತಿರುವುದು ಬಹಿರಂಗ ರಹಸ್ಯ.ಕೋಲ್ಕತ್ತಾ ನೈಟ್ ರೈಡರ್ಸ್ ನ ಮೆಂಟರ್ ಗೌತಮ್ ಗಂಭೀರ್ ಬಿಸಿಸಿಐಗೆ ಲಭ್ಯವಿರುವ ಆಯ್ಕೆಗಳಲ್ಲಿ ಒಂದು. ಗಂಭೀರ್ ಅವರ ಸ್ವೀಕಾರಾರ್ಹತೆ ಬಗ್ಗೆ ಕಾರ್ಯದರ್ಶಿ ಜಯ್ ಶಾ ಅವರು ರಾಷ್ಟ್ರೀಯ ತಂಡದ ಹಿರಿಯ ಆಟಗಾರರೊಂದಿಗೆ ಮಾತನಾಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆಸ್ಟ್ರೇಲಿಯದ ಅಭ್ಯರ್ಥಿಗಳ ಆಯ್ಕೆಯನ್ನು ನಿರಾಕರಿಸಿರುವ ಷಾ, ಮಂಡಳಿಯು ಭಾರತೀಯ ತರಬೇತುದಾರರನ್ನು ಹುಡುಕುತ್ತಿದೆ. ಅವರಿಗೆ ದೇಶಿ ಕ್ರಿಕೆಟ್ ಪರಿಸರ ವ್ಯವಸ್ಥೆಯ ಒಳಹೊರಗನ್ನು ತಿಳಿದಿರುತ್ತಾರೆ ಎಂದು ಹೇಳಿದ್ದಾರೆ.
ಲಕ್ಷ್ಮಣ್ ಮೂರು ವರ್ಷದಿಂದ ಭಾರತದ ಹಂಗಾಮಿ ಕೋಚ್ ಆಗಿದ್ದಾರೆ. ಆದರೆ, ಮುಂದಿನ ಮೂರೂವರೆ ವರ್ಷ ಕಾಲ ದೈಹಿಕ ಮತ್ತು ಮಾನಸಿಕವಾಗಿ ತ್ರಾಸದಾಯಕವಾಗಿರುವ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ.ಇಂಡಿಯ ಎ, ಎಮರ್ಜಿಂಗ್, U-19 ಮತ್ತು ಜೂನಿಯರ್ ಮಹಿಳಾ ಕ್ರಿಕೆಟ್ ನ ರಚನಾತ್ಮಕ ಮುಖ್ಯಸ್ಥರಾದ ಅವರನ್ನು ಬಿಸಿಸಿಐ ಮನವೊಲಿಸಬಹುದು.
ʻಇದು ಕಾರ್ಯದರ್ಶಿ ಜಯ್ ಅವರಿಗೆ ಬಿಟ್ಟದ್ದು. ಅವರು ಲಕ್ಷ್ಮಣ್ ಅವರ ಮನವೊಲಿಸಬೇಕು; ಕನಿಷ್ಠ ಕೆಂಪು ಬಾಲ್ ಸರಣಿಯಲ್ಲಾದರೂ. ಒಂದು ವೇಳೆ ಅವರು ಪೂರ್ಣಾವಧಿ ಕೆಲಸ ಮಾಡಲು ಸಿದ್ಧರಿಲ್ಲದಿದ್ದರೆ, ಈ ವರ್ಷ ಆಸ್ಟ್ರೇಲಿಯ ಮತ್ತು ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ರೆಡ್ ಬಾಲ್ ಸರಣಿ ಆಡುವಾಗ ಸಲಹೆಗಾರರಾಗಿ ನೇಮಿಸಬಹುದು,ʼ ಎಂದು ಮಾಜಿ ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದರು.
ಲಕ್ಷ್ಮಣ್‌ಗೆ ಒಂದು ಫ್ರಾಂಚೈಸಿಯಿಂದ ಆಹ್ವಾನ ಇರುವುದರಿಂದ, ಎನ್‌ಸಿಎ ಅವಧಿ ಮುಗಿದ ನಂತರ ಐಪಿಎಲ್‌ಗೆ ಹಿಂತಿರುಗುವುದು ಕಷ್ಟಕರವಲ್ಲ ಎಂದು ತಿಳಿದುಬಂದಿದೆ. ʻ ಲಕ್ಷ್ಮಣ್ ಎನ್ಸಿಎಗಾಗಿ ಹೈದರಾಬಾದ್‌ನಿಂದ ಬೆಂಗಳೂರಿಗೆ ನೆಲೆ ಬದಲಿಸಬೇಕಾಯಿತು. ಸನ್‌ರೈಸರ್ಸ್ ಹೈದರಾಬಾದ್‌ನ ಮಾರ್ಗದರ್ಶಕರಾಗಿ ಗಳಿಸುತ್ತಿದ್ದುದಕ್ಕಿಂತ ಕಡಿಮೆ ವೇತನದ ಪ್ಯಾಕೇಜ್‌ಗೆ ಕೆಲಸ ಮಾಡಲು ಒಪ್ಪಿಕೊಂಡ ಅವರ ದೊಡ್ಡತನವನ್ನು ಮರೆಯಬಾರದು,ʼ ಎಂದು ಹೇಳಿದರು.
ಮುಂದಿನ ವರ್ಷದೊಳಗೆ ಎನ್‌ಸಿಎ ಬೆಂಗಳೂರಿನ ಹೊರವಲಯದಲ್ಲಿ ಪೂರ್ಣ ಪ್ರಮಾಣದ ಕ್ರಿಕೆಟ್ ಮೈದಾನ, ಅತ್ಯಾಧುನಿಕ ಜಿಮ್ನಾಷಿಯಂ, ಈಜುಕೊಳ ಮತ್ತು ವಸತಿ ಸಂಕೀರ್ಣದೊಂದಿಗೆ ಪ್ರಧಾನ ಕಚೇರಿಯನ್ನು ಹೊಂದಲಿದೆ. ಒಂದುವೇಳೆ ಲಕ್ಷ್ಮಣ್ ಎನ್‌ಸಿಎಗೆ ವಿದಾಯ ಹೇಳಿದರೆ, ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಆ ಸ್ಥಾನಕ್ಕೆ ಬರಬಹುದು.
ರಾಥೋರ್ ಅವರು ಅಕಾಡೆಮಿಯ ಬ್ಯಾಟಿಂಗ್ ಕೋಚ್ ಮತ್ತು ನಾಲ್ಕು ವರ್ಷ ರಾಷ್ಟ್ರೀಯ ಆಯ್ಕೆಗಾರರಾಗಿದ್ದರು. ಐದು ವರ್ಷದಿಂದ ರಾಷ್ಟ್ರೀಯ ತಂಡದಲ್ಲಿದ್ದರು. ಅವರ ಅಧಿಕಾರಾವಧಿ ಜೂನ್ ನಲ್ಲಿ ಟಿ20 ವಿಶ್ವಕಪ್‌ನೊಂದಿಗೆ ಕೊನೆಗೊಳ್ಳುತ್ತದೆ.