ಮಸಾಜ್‌ ಸರ್ವೀಸ್‌ ಬುಕ್‌ ಮಾಡೋ ಮುನ್ನ ಎಚ್ಚರ…! ಈ ವಿಡಿಯೊ ನೋಡಿ
x
ಗ್ರಾಹಕರ ಮೇಲೆ ಹಲ್ಲೆ ನಡೆಸಿದ ಮಸಾಜ್‌ ಪಾರ್ಟ್ನರ್‌

ಮಸಾಜ್‌ ಸರ್ವೀಸ್‌ ಬುಕ್‌ ಮಾಡೋ ಮುನ್ನ ಎಚ್ಚರ…! ಈ ವಿಡಿಯೊ ನೋಡಿ

ಮುಂಬೈನ ವಡಾಲಾದಲ್ಲಿ ಅರ್ಬನ್ ಕಂಪನಿ ಆ್ಯಪ್ ಮೂಲಕ ಮಸಾಜ್ ಬುಕ್ ಮಾಡಿದ್ದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಮಸಾಜ್ ಪಾರ್ಟ್ನರ್ ಕೂದಲು ಹಿಡಿದು ಎಳೆದು ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.


Click the Play button to hear this message in audio format

ಮಸಾಜ್ ಸೇವೆ ಬುಕ್ ಮಾಡಿದ್ದ 46 ವರ್ಷದ ಮಹಿಳೆಯ ಮೇಲೆ, ಸೇವೆ ನೀಡಲು ಬಂದಿದ್ದ ಯುವತಿ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಮುಂಬೈನಲ್ಲಿ ಶುಕ್ರವಾರ ನಡೆದಿದೆ. ಘಟನೆಯ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಏನಿದು ಘಟನೆ?

ಸಂತ್ರಸ್ತ ಮಹಿಳೆ ಬಹಳ ದಿನಗಳಿಂದ 'ಫ್ರೋಜನ್‌ ಶೋಲ್ಡರ್‌' (Frozen Shoulder - ಭುಜದ ಬಿಗಿತ) ಸಮಸ್ಯೆಯಿಂದ ಬಳಲುತ್ತಿದ್ದರು. ನೋವಿನ ಉಪಶಮನಕ್ಕಾಗಿ ಅವರು ಜನವರಿ 23, 2026 ರಂದು ಅರ್ಬನ್ ಕಂಪನಿ ಆ್ಯಪ್ ಮೂಲಕ ಮಸಾಜ್ ಸೇವೆಯನ್ನು ಬುಕ್ ಮಾಡಿದ್ದರು. ಅಶ್ವಿನಿ ಎಂಬ ಹೆಸರಿನ ಮಸಾಜ್‌ ಪಾರ್ಟ್ನರ್‌ ನಿಗದಿತ ಸಮಯಕ್ಕೆ ಮಹಿಳೆಯ ಮನೆಗೆ ತಲುಪಿದ್ದರು. ಈ ವೇಳೆ ಭಾರೀ ಜಗಳ ನಡೆದಿದ್ದು, ತಾರಕಕ್ಕೇರಿದೆ.

ಘಟನೆಯ ವಿಡಿಯೋ ಇಲ್ಲಿದೆ

ಜಗಳಕ್ಕೆ ಕಾರಣವೇನು?

ಮಹಿಳೆಯ ದೂರಿನ ಪ್ರಕಾರ, ಜಗಳ ಶುರುವಾಗಿದ್ದು ಮಸಾಜ್‌ಗಾಗಿ ತಂದಿದ್ದ ಸಲಕರಣೆಗಳ ವಿಷಯದಲ್ಲಿ. ಮಸಾಜ್ ಮಾಡುವ ಯುವತಿ ಮನೆಯೊಳಗೆ ತಂದಿದ್ದ ಮಸಾಜ್ ಬೆಡ್ ಬಹಳ ದೊಡ್ಡದಾಗಿತ್ತು.ಇದನ್ನು ಕಂಡ ಮಹಿಳೆ ತನ್ನ ಮನೆಯಲ್ಲಿ ಜಾಗದ ಅಭಾವವಿರುವುದರಿಂದ ಅದನ್ನು ಬಳಸದಂತೆ ತಿಳಿಸಿದರು.

ಮಸಾಜ್‌ ಪಾರ್ಟ್ನರ್‌ ನಡವಳಿಕೆ ಮತ್ತುಮಾತುಗಾರಿಕೆ ಸರಿಯಿಲ್ಲದ ಕಾರಣ ಮಹಿಳೆ ತಕ್ಷಣವೇ ಸೇವೆಯನ್ನು ರದ್ದುಗೊಳಿಸಲು (Cancel) ನಿರ್ಧರಿಸಿದರು. ಮಹಿಳೆಯು ಆ್ಯಪ್‌ನಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿ ಹಣ ವಾಪಸ್‌ ಪಡೆಯುವ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ, ಮಸಾಜ್ ಪಾರ್ಟ್ನರ್ ಆಕ್ರೋಶಗೊಂಡರು.

ದೈಹಿಕಹಲ್ಲೆ ಮತ್ತು ವೈರಲ್ ವಿಡಿಯೋ

ಬುಕಿಂಗ್ರದ್ದತಿಯಿಂದ ಸಿಟ್ಟಿಗೆದ್ದ ಮಸಾಜ್ ಪಾರ್ಟ್ನರ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆಎಂದು ಆರೋಪಿಸಲಾಗಿದೆ. ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕೂದಲು ಹಿಡಿದು ಎಳೆದಾಡಿದ್ದಾರೆ. ಮುಖಕ್ಕೆ ಪಂಚ್ (ಗುದ್ದು) ನೀಡಿದ್ದು, ತಳ್ಳಾಟದಲ್ಲಿ ಮಹಿಳೆ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ಮೈಮೇಲೆ ಗಾಯಗಳಾಗಿವೆ.

ಮಹಿಳೆಯಮಗ ಜಗಳ ಬಿಡಿಸಲು ಬಂದಾಗಆತನಿಗೂ ತಳ್ಳಾಟ ನಡೆಸಲಾಗಿದೆ. ಮಗ ಕಿರುಚುತ್ತಾ ಆಕೆಯನ್ನುಮನೆಯಿಂದ ಹೊರಗೆ ಹೋಗುವಂತೆ ಹೇಳುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿದೆ.

ಘಟನೆನಡೆದ ತಕ್ಷಣ ಮಹಿಳೆ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿದರು. ಪೊಲೀಸರು ಬರುವಷ್ಟರಲ್ಲಿ ಆರೋಪಿ ಮಹಿಳೆ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರು ತನಿಖೆ ನಡೆಸಿದಾಗ ಆ್ಯಪ್‌ನಲ್ಲಿ ನಮೂದಿಸಲಾದ ಮಸಾಜ್ ಪಾರ್ಟ್ನರ್‌ನ ಹೆಸರು ಮತ್ತುವಿವರಗಳಲ್ಲಿ ಕೆಲವು ತಾಂತ್ರಿಕ ವ್ಯತ್ಯಾಸಗಳು ಕಂಡುಬಂದಿವೆ. ವಡಾಲಾಟ್ರಕ್ ಟರ್ಮಿನಲ್ ಪೊಲೀಸರು ಸದ್ಯ NC ದಾಖಲಿಸಿಕೊಂಡಿದ್ದು, ವೈರಲ್ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.

Read More
Next Story