Actor Vijay Party: ವಿಜಯ್ ರಾಜಕೀಯ ಪ್ರವೇಶದಿಂದ ಇಂಡಿಯಾ ಬಣಕ್ಕೆ ಲಾಭ ಎಂದ ಕಾಂಗ್ರೆಸ್
x
ನಟ ವಿಜಯ್‌

Actor Vijay Party: ವಿಜಯ್ ರಾಜಕೀಯ ಪ್ರವೇಶದಿಂದ 'ಇಂಡಿಯಾ' ಬಣಕ್ಕೆ ಲಾಭ ಎಂದ ಕಾಂಗ್ರೆಸ್

ವಿಜಯ್‌ ಪಕ್ಷದಿಂದ ಬದಲಾವಣೆ ಅಸಾಧ್ಯ. ಆದರೆ ಹೊಸ ರಾಜಕೀಯ ಪಕ್ಷದಿಂದಾಗಿ ಇಂಡಿಯಾ ಬಣಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಹೇಳಿದೆ.


Actor Vijay Party: ವಿಜಯ್ ರಾಜಕೀಯ ಪ್ರವೇಶದಿಂದ 'ಇಂಡಿಯಾ' ಬಣಕ್ಕೆ ಲಾಭ ಎಂದ ಕಾಂಗ್ರೆಸ್ತಮಿಳು ನಟ ಥಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ಕಾಂಗ್ರೆಸ್‌ ಮೊದಲ ಪ್ರತಿಕ್ರಿಯೆ ನೀಡಿದ್ದು , ಇದು ಇಂಡಿಯಾ ಮೈತ್ರಿಕೂಟಕ್ಕೆ ಲಾಭ ತಂದುಕೊಡಲಿದೆ ಎಂದು ಹೇಳಿದೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸ್ಥಾಪಕ ವಿಜಯ್ ಹಿಂದಿನ ಶನಿವಾರ (ಅಕ್ಟೋಬರ್ 27 ರಂದು) ತಮ್ಮ ಮೊದಲ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಬೃಹತ್‌ ಸಭೆಯಲ್ಲಿ ಅವರು ತಮ್ಮ ರಾಜಕೀಯ ಕಾರ್ಯಸೂಚಿ ಪ್ರಕಟಿಸಿದ್ದರು.

ವಿಜಯ್ ಅವರ ಭಾಷಣ ಮತ್ತು ಅವರ ಪ್ರವೇಶವು ರಾಜಕೀಯ ರಂಗದಲ್ಲಿ ಯಾವ ರೀತಿಯ ಬದಲಾವಣೆ ತರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ), ಬದಲಾವಣೆ ಅಸಾಧ್ಯ ಎಂದು ಹೇಳಿದೆ. ಆದರೆ ಹೊಸ ರಾಜಕೀಯ ಪಕ್ಷದಿಂದಾಗಿ ಇಂಡಿಯಾ ಬಣಕ್ಕೆ "ಹೆಚ್ಚು ಪ್ರಯೋಜನಕಾರಿಯಾಗಲಿದೆ" ಎಂದು ಹೇಳಿದೆ.

"ತಮಿಳುನಾಡಿನ ರಾಜಕೀಯದಲ್ಲಿ ಯಾವುದೇ ಬದಲಾವಣೆ ಉಂಟಾಗದು . ಆದರೆ ಅವರ ರಾಜಕೀಯ ಪ್ರಯಾಣವು ಇಂಡಿಯಾ ಬಣದ ಗೆಲುವಿಗೆ ಹೆಚ್ಚು ಅನುಕೂಲಕರವಾಗಲಿದೆ " ಎಂದು ಟಿಎನ್‌ಸಿಸಿ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಶುಕ್ರವಾರ (ನವೆಂಬರ್ 1ರಂದು) ಹೇಳಿದ್ದಾರೆ.

ತಮ್ಮ ಹೇಳಿಕೆಯ ಹೊರತಾಗಿಯೂ ವಿಜಯ್ ಅವರ ರಾಜಕೀಯ ಪ್ರವೇಶವು ಇಂಡಿಯಾ ಮೈತ್ರಿಕೂಟಕ್ಕೆ ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದನ್ನು ವಿವರಿಸಲು ಸೆಲ್ವಪೆರುಂತಗೈ ಮುಂದಾಗಲಿಲ್ಲ.

ವಿಜಯ್ ಅವರು ಹುಟ್ಟುಹಾಕಿದ ಅಧಿಕಾರ ಹಂಚಿಕೆ ಕಲ್ಪನೆ ಮತ್ತು ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಅದು ಬೀರಬಹುದಾದ ಪರಿಣಾಮದ ಬಗ್ಗೆ ಮಾತನಾಡಿದ ಅವರು "ಪಕ್ಷ ಸ್ಥಾಪನೆ ಅಲೆದಾಡುತ್ತಿರುವವರಿಗೆ ಅಲೆ ಕಂಪನ ಉಂಟುಮಾಡಿರಬಹುದು. ಆದರೆ ಇಂಡಿಯಾ ಬಣವು ಬಲವಾಗಿಯೇ ಉಳಿಯಲಿದೆ ಎಂದು ಹೇಳಿದರು.

2004ರಿಂದ 2014ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅಂತೆಯೇ ವಿಜಯ್‌ ಅವರ ಅಧಿಕಾರ ಹಂಚಿಕೆಯ ಕಲ್ಪನೆಯನ್ನು ನಾವು ಒಪ್ಪುತ್ತೇವೆ. ಆದರೆ ಅಧಿಕಾರ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರವನ್ನು ರಾಷ್ಟ್ರೀಯ ನಾಯಕತ್ವ ತೆಗೆದುಕೊಳ್ಳುತ್ತದೆ" ಎಂದು ಅವರು ಹೇಳಿದರು.

2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಿಕಿರವಂಡಿ ಗ್ರಾಮದಲ್ಲಿ ನಡೆದ ವಿಜಯ್‌ ಸ್ಥಾಪಿಸಿದ್ದ ಟಿವಿಕೆಯ ಮೊದಲ ರಾಜ್ಯ ಸಮ್ಮೇಳನದಲ್ಲಿ ಭಾರಿ ಜನಸಮೂಹ ಸೇರಿತ್ತು. ಈ ವೇಳೆ ಮಾತನಾಡಿದ್ದ ವಿಜಯ್, ತಮ್ಮ ಪಕ್ಷವು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು

ಪ್ರತ್ಯೇಕತಾವಾದಿಗಳು ಮತ್ತು ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಡುವುದಾಗಿ ಅವರು ಇದೇ ವೇಳೆ ಘೋಷಿಸಿದ್ದರು. ನಮ್ಮ ಸೈದ್ಧಾಂತಿಕ ಶತ್ರುಗಳು ಪ್ರತ್ಯೇಕತಾವಾದಿಗಳು. ರಾಜಕೀಯ ಶತ್ರುಗಳೆಂದರೆ ದ್ರಾವಿಡ ಮಾದರಿಯನ್ನು ಮಾತನಾಡಿ ವಂಶಪಾರಂಪರ್ಯ ರಾಜಕೀಯದಲ್ಲಿ ತೊಡಗಿರುವ ರಾಜಕೀಯ ಪಕ್ಷ ಎಂದು ಹೇಳಿದ್ದರು.

Read More
Next Story