USA Vice President: ಕುಟುಂಬದೊಂದಿಗೆ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ತಾಜ್‌ ಮಹಲ್‌ಗೆ ಭೇಟಿ
x

ಅಮೆರಿಕಾ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ತಮ್ಮ ಕುಟುಂಬದೊಂದಿಗೆ ತಾಜ್‌ ಮಹಲ್‌ಗೆ ಭೇಟಿ ನೀಡಿದ ಸಂದರ್ಭ

USA Vice President: ಕುಟುಂಬದೊಂದಿಗೆ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ತಾಜ್‌ ಮಹಲ್‌ಗೆ ಭೇಟಿ

ಬುಧವಾರ ಜೈಪುರದಿಂದ ಆಗ್ರಾ ವಿಮಾನ ನಿಲ್ದಾಣಕ್ಕೆ ಬಂದ ಜೆ.ಡಿ. ವ್ಯಾನ್ಸ್‌ ಹಾಗೂ ಅವರ ಕುಟುಂಬವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ಸ್ವಾಗತಿಸಿ ಕೆಲಹೊತ್ತು ಪರಸ್ಪರ ಚರ್ಚಿಸಿದರು.


ನಾಲ್ಕು ದಿನಗಳ ಭಾರತದ ಪ್ರವಾಸಕ್ಕಾಗಿ ಬಂದಿರುವ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಹಾಗೂ ಅವರ ಕುಟುಂಬ ಬುಧವಾರ ಆಗ್ರಾದ ತಾಜ್‌ ಮಹಲ್‌ಗೆ ಭೇಟಿ ನೀಡಿದೆ. " ತಾಜ್‌ ಮಹಲ್‌ ಅದ್ಭುತವಾಗಿದ್ದು, ನಿಜವಾದ ಪ್ರೀತಿಗೆ ಇದು ಸಾಕ್ಷಿ. ಮಾನವನ ನೈಪುಣ್ಯತೆಗೆ ಹಿಡಿದ ಕೈಗನ್ನಡಿಯಾಗಿದ್ದು ಭಾರತ ದೇಶಕ್ಕೆ ಬಹು ದೊಡ್ಡ ಗೌರವವಾಗಿದೆ ಎಂದು ಸಂದರ್ಶಕರ ಪುಸ್ತಕದಲ್ಲಿ ಅವರು ಬರೆದಿದ್ದಾರೆ.

ಬುಧವಾರ ಜೈಪುರದಿಂದ ಆಗ್ರಾ ವಿಮಾನ ನಿಲ್ದಾಣಕ್ಕೆ ಬಂದ ಜೆ.ಡಿ. ವ್ಯಾನ್ಸ್‌ ಹಾಗೂ ಅವರ ಕುಟುಂಬವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ಸ್ವಾಗತಿಸಿ ಕೆಲಹೊತ್ತು ಪರಸ್ಪರ ಚರ್ಚಿಸಿದ್ದಾರೆ. ಈ ಕುರಿತು ಸಿಎಂ ಯೋಗಿ ಆದಿತ್ಯಾನಾಥ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಗ್ರಾದ ವಿಮಾನ ನಿಲ್ದಾಣದಿಂದ ತಾಜ್‌ ಮಹಲ್‌ವರೆಗೆ ರಸ್ತೆಗಳನ್ನು ಅಲಂಕರಿಸಲಾಗಿದ್ದು ರಸ್ತೆಯ ಎರಡೂ ಬದಿಯಲ್ಲಿ ಸಾವಿರಾರು ಶಾಲಾ ವಿದ್ಯಾರ್ಥಿಗಳು ಉಭಯ ದೇಶಗಳ ಭಾವುಟ ಹಿಡಿದು ನಿಂತಿದ್ದರು. ವಿವಿಧ ಬಣ್ಣಗಳಿಂದ ರಂಗೋಲಿಗಳನ್ನು ಬಿಡಿಸಲಾಗಿತ್ತು ಹಾಗೂ ದಾರಿಯುದ್ದಕ್ಕೂ ಸ್ವಾಗತ ಕೋರುವ ಭಿತ್ತಿಪತ್ರಗಳನ್ನು ಹಾಕಲಾಗಿತ್ತು, ಪ್ರಮುಖ ವೃತ್ತಗಳಲ್ಲಿ ಮರಳು ಶಿಲ್ಪಕಲೆ ಪ್ರದರ್ಶಿಸಿದ್ದು ಒಟ್ಟಾರೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಹೆಚ್ಚುವರಿ ಬಿಗಿ ಭದ್ರತೆ

ಅಮೆರಿಕ ಉಪಾಧ್ಯಕ್ಷರ ಭೇಟಿ ಅತ್ಯಂತ ಮಹತ್ವದಾಗಿದ್ದು ಆಗ್ರಾದ ವಿಮಾನ ನಿಲ್ದಾಣದಿಂದ ತಾಜ್‌ ಮಹಲ್‌ವರೆಗಿನ ೧೨ ಕಿಲೋಮೀಟರ್‌ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು, ಯುಎಸ್‌ ಭದ್ರತಾ ಅಧಿಕಾರಿಗಳು ಕಳೆದ ಮೂರು ದಿನಗಳಿಂದಲೂ ಮುಂಚೂಣಿಯಲ್ಲಿ ನಿಂತು ಭದ್ರತೆಯನ್ನು ಪರಿಶಿಲಿಸುತ್ತಿದ್ದರು. ಜೆ.ಡಿ.ವ್ಯಾನ್ಸ್‌ ತಾಜ್‌ ಮಹಲ್‌ಗೆ ಭೇಟಿ ನೀಡಿ ವಾಪಸ್‌ ತೆರಳುವವರೆಗೂ ಅವರಿಗೆ ಬೆಂಗಾವಲು ವಾಹನಗಳು ಭದ್ರತೆ ಒದಗಿಸಿದ್ದವು. ಇದಕ್ಕೂ ಮೊದಲು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ತಮ್ಮ ಕುಟುಂಬದೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯ, ಜೈಪುರದ ಐತಿಹಾಸಿಕ ಅಂಬರ್‌ ಕೋಟೆಗೆ ಭೇಟಿ ನೀಡಿದ್ದರು.

Read More
Next Story