ಹಿರಿಯ ನಾಯಕ ಆಡ್ವಾಣಿ ಆರೋಗ್ಯ ಸ್ಥಿರ
ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ(96) ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರು ವೈದ್ಯರ ತಂಡದ ನಿಗಾದಲ್ಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಅವಿಭಜಿತ ಭಾರತದಲ್ಲಿ ಜನಿಸಿದ ಆಡ್ವಾಣಿ ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ನಿಂದ ಬಿಡುಗಡೆಗೊಳಿಸಿದ ಕೆಲವು ದಿನಗಳ ನಂತರ ಇಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು.
ʻಬುಧವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅವರು ಪ್ರಸ್ತುತ ನರವಿಜ್ಞಾನ ವಿಭಾಗದ ವೈದ್ಯರ ತಂಡದ ನಿಗಾದಲ್ಲಿದ್ದಾರೆ,ʼ ಎಂದು ಅಪೋಲೋ ಆಸ್ಪತ್ರೆ ಮೂಲಗಳು ಗುರುವಾರ ತಿಳಿಸಿವೆ.
ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆಡ್ವಾಣಿ ಅವರು ಪುತ್ರಿ ಪ್ರತಿಭಾ ಆಡ್ವಾಣಿ ಜೊತೆಗೆ ಆಸ್ಪತ್ರೆಗೆ ಆಗಮಿಸಿದ್ದರು. ಅವರನ್ನು ನರರೋಗ ವಿಭಾಗದ ಹಿರಿಯ ಸಲಹೆಗಾರ ಡಾ. ವಿನಿತ್ ಸೂರಿ ಅವರ ನೇತೃತ್ವದ ತಂಡ ನೋಡಿಕೊಳ್ಳುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.