VB-G RAM G ಮಸೂದೆ ಅಂಗೀಕಾರ; ಸಂಸತ್‌ನಲ್ಲಿ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ
x
ಸಂಸತ್‌ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಪ್ರತಿಪಕ್ಷ ನಾಯಕರು

VB-G RAM G ಮಸೂದೆ ಅಂಗೀಕಾರ; ಸಂಸತ್‌ನಲ್ಲಿ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ

ವಿರೋಧ ಪಕ್ಷದ ನಾಯಕರ ಭಾರೀ ಪ್ರತಿಭಟನೆಯ ನಡುವೇ ಸಂಸತ್‌ನಲ್ಲಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಅಂಗೀಕಾರಗೊಂಡಿದೆ. ಮಧ್ಯರಾತ್ರಿಯ ನಂತರ ರಾಜ್ಯಸಭೆಯು ಅದಕ್ಕೆ ಅನುಮೋದನೆ ನೀಡಿತು.


Click the Play button to hear this message in audio format

ಲೋಕಸಭೆಯಲ್ಲಿ ಗುರುವಾರ ಅಂಗೀಕಾರಗೊಂಡ VB-G RAM G ಮಸೂದೆಯನ್ನು ವಿರೋಧಿಸಿ ಪ್ರತಿಪಕ್ಷ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮಸೂದೆ ವಿರೋಧಿಸಿ ಗುರುವಾರ ರಾತ್ರಿ ವಿರೋಧ ಪಕ್ಷದ ನಾಯಕರು ಸಂಸತ್ತಿನ ಸಂಕೀರ್ಣದಲ್ಲಿ 12 ಗಂಟೆಗಳ ಕಾಲ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಿದರು ಮತ್ತು ದೇಶಾದ್ಯಂತ ಬೀದಿಗಿಳಿಯುವುದಾಗಿ ಎಚ್ಚರಿಸಿದ್ದಾರೆ.

ವಿರೋಧ ಪಕ್ಷದ ನಾಯಕರ ಭಾರೀ ಪ್ರತಿಭಟನೆಯ ನಡುವೇ ಸಂಸತ್‌ನಲ್ಲಿ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಅಂಗೀಕಾರಗೊಂಡಿದೆ. ಮಧ್ಯರಾತ್ರಿಯ ನಂತರ ರಾಜ್ಯಸಭೆಯು ಅದಕ್ಕೆ ಅನುಮೋದನೆ ನೀಡಿತು. ಇದರ ಬೆನ್ನಲ್ಲೇ ಈ ಕಾಯ್ದೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದ ಪ್ರತಿಪಕ್ಷ ನಾಯಕರು ಪ್ರತಿಭಟನೆ ಶುರುವಿಟ್ಟುಕೊಂಡಿದ್ದರು.

ಪ್ರತಿಪಕ್ಷಗಳ ಪ್ರತಿಭಟನೆ ದೃಶ್ಯ


ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಉಪನಾಯಕಿ ಸಾಗರಿಕಾ ಘೋಷ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಕೇಂದ್ರ ಸರ್ಕಾರವು VB-G RAM G ಮಸೂದೆಯನ್ನು ಜನರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು.

“ಮೋದಿ ಸರ್ಕಾರವು ಬಡವರ ವಿರೋಧಿ, ಜನ ವಿರೋಧಿ, ರೈತ ವಿರೋಧಿ, ಗ್ರಾಮೀಣ ಬಡವರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. VBGRG ಮಸೂದೆಯನ್ನು ತಂದಿರುವ ಮತ್ತು MGNREGA ಅನ್ನು ತೆಗೆದುಹಾಕಿರುವ ಉದ್ದೇಶವಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

ಇದು ಭಾರತದ ಬಡವರಿಗೆ ಮಾಡಿದ ಅವಮಾನ, ಇದು ಮಹಾತ್ಮ ಗಾಂಧಿಯವರಿಗೆ ಮಾಡಿದ ಅವಮಾನ, ಇದು ರವೀಂದ್ರನಾಥ ಟ್ಯಾಗೋರ್‌ಗೆ ಮಾಡಿದ ಅವಮಾನ. ಕೇವಲ ಐದು ಗಂಟೆಗಳ ನೋಟೀಸ್‌ನೊಂದಿಗೆ, ಈ ಮಸೂದೆಯನ್ನು ನಮಗೆ ನೀಡಲಾಯಿತು. ನಮಗೆ ಸರಿಯಾದ ಚರ್ಚೆಗೆ ಅವಕಾಶ ನೀಡಲಾಗಿಲ್ಲ" ಎಂದು ಘೋಷ್ ಆರೋಪಿಸಿದರು.

"ಇಂತಹ ಮಹತ್ವದ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಮತ್ತು ವಿರೋಧ ಪಕ್ಷಗಳು ಅದನ್ನು ಪರಿಶೀಲಿಸಲಿ, ವಿರೋಧ ಪಕ್ಷಗಳು ಅದರ ಬಗ್ಗೆ ಚರ್ಚಿಸಲಿ, ಎಲ್ಲಾ ಪಾಲುದಾರರು ಅದರ ಬಗ್ಗೆ ಚರ್ಚಿಸಲಿ, ಆದರೆ ಸರ್ಕಾರ ಇಲ್ಲಿ ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ. ಅಲ್ಲದೇ ಇದು ಪ್ರಜಾಪ್ರಭುತ್ವದ ಕೊಲೆ" ಎಂದು ಅವರು ಹೇಳಿದರು.

"ಈಗ ನಾವು ಭಾರತದ ಜನರ ವಿರುದ್ಧ, ಭಾರತದ ಬಡವರ ವಿರುದ್ಧ, ಭಾರತದ ಗ್ರಾಮೀಣ ಬಡವರ ವಿರುದ್ಧ ಮೋದಿ ಸರ್ಕಾರ ಈ ಕರಾಳ ಕಾನೂನನ್ನು ತಂದಿರುವ ವಿಧಾನದ ವಿರುದ್ಧ 12 ಗಂಟೆಗಳ ಧರಣಿ, 12 ಗಂಟೆಗಳ ಧರಣಿ ನಡೆಸಲಿದ್ದೇವೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ "ಭಾರತದ ಕಾರ್ಮಿಕರಿಗೆ ಇದು ಬಹುಶಃ ಅತ್ಯಂತ ದುಃಖದ ದಿನ. ಬಿಜೆಪಿ ಸರ್ಕಾರವು MGNREGA ಅನ್ನು ರದ್ದುಗೊಳಿಸುವ ಮೂಲಕ 12 ಕೋಟಿ ಜನರ ಜೀವನೋಪಾಯದ ಮೇಲೆ ದಾಳಿ ಮಾಡಿದೆ. ಮೋದಿ ಸರ್ಕಾರವು ರೈತ ವಿರೋಧಿ ಮತ್ತು ಬಡವರ ವಿರೋಧಿ ಎಂಬುದು ಮತ್ತೆ ಅವರು ಸಾಬೀತುಪಡಿಸಿದ್ದಾರೆ" ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್, "MGNREGA ಕರಡು ರಚಿಸಿದಾಗ, 14 ತಿಂಗಳುಗಳ ಕಾಲ ಸಮಾಲೋಚನೆಗಳನ್ನು ನಡೆಸಲಾಯಿತು. ಇದನ್ನು ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು. ಈ ಯೋಜನೆಯು ರಾಜ್ಯಗಳ ಮೇಲೆ ತೀವ್ರ ಹೊರೆಯನ್ನು ಹಾಕುತ್ತದೆ. ಪರಿಣಾಮವಾಗಿ, ಈ ಯೋಜನೆ ವಿಫಲವಾಗುತ್ತದೆ" ಎಂದರು.

"ಅಂತೆಯೇ ಅವರು ಮಹಾತ್ಮ ಗಾಂಧಿಯವರ ಹೆಸರನ್ನು ಸ್ವತಃ ತೆಗೆದುಹಾಕಿದ್ದಾರೆ. ಗಾಂಧಿ ಇಲ್ಲದೆ ಸ್ವಾತಂತ್ರ್ಯವಿಲ್ಲ, ಅದು ಈ ದೇಶದಲ್ಲಿನ ಸಂಪೂರ್ಣ ನಂಬಿಕೆ. ಬ್ರಿಟನ್ ಸಂಸತ್ತಿನಲ್ಲಿಯೂ ಸಹ ನಾವು ಗಾಂಧಿ ಪ್ರತಿಮೆಯನ್ನು ಹೊಂದಿದ್ದೇವೆ, ಆದರೆ ಇಲ್ಲಿ ಭಾರತೀಯ ಸಂಸತ್ತಿನಲ್ಲಿ ಅವರ ಪ್ರತಿಮೆ ಎಲ್ಲೋ ಅಡಗಿದೆ, ಮತ್ತು ಈಗ ಅವರ ಹೆಸರನ್ನು ಹೊಂದಿರುವ ಯೋಜನೆಯಿಂದಲೂ ಅವರ ಹೆಸರನ್ನು ತೆಗೆದುಹಾಕಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More
Next Story