ಉತ್ತರಾಖಂಡದಲ್ಲಿ ಲಿವ್-ಇನ್ ರಿಲೇಶನ್‌ಶಿಪ್‌ಗೆ ನೋಂದಣಿ ಕಡ್ಡಾಯ, ತಪ್ಪಿದರೆ 20 ಸಾವಿರ ರೂ. ದಂಡ
x
ಪ್ರಾತಿನಿಧಿಕ ಚಿತ್ರ.

ಉತ್ತರಾಖಂಡದಲ್ಲಿ ಲಿವ್-ಇನ್ ರಿಲೇಶನ್‌ಶಿಪ್‌ಗೆ ನೋಂದಣಿ ಕಡ್ಡಾಯ, ತಪ್ಪಿದರೆ 20 ಸಾವಿರ ರೂ. ದಂಡ

Uttarakhand UCC : ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇರುವ ಜೋಡಿಗೆ ಮನೆ ಬಾಡಿಗೆಗೆ ಕೊಡುವ ಮನೆಮಾಲೀಕರು ಕರಾರು ಮಾಡಿಕೊಳ್ಳುವ ವೇಳೆ ಲಿವ್-ಇನ್ ನೋಂದಣಿ ಪ್ರಮಾಣಪತ್ರ ಪರಿಶೀಲಿಸಬೇಕು ಕಾನೂನಿನಲ್ಲಿ ಹೇಳಲಾಗಿದೆ.


ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಲಿವ್-ಇನ್ (Live-in) ಸಂಬಂಧದಲ್ಲಿರುವ ಜೋಡಿಗಳು ಜೀವನ ಆರಂಭಿಸಿದ 30 ದಿನಗಳ ಒಳಗೆ ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಉಲ್ಲಂಘಿಸಿದರೆ ಆರು ತಿಂಗಳವರೆಗೆ ಜೈಲುಶಿಕ್ಷೆ ಅಥವಾ 25,000 ರೂಪಾಯಿ ದಂಡದ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇರುವ ಜೋಡಿಗೆ ಮನೆ ಕೊಟ್ಟಿರುವ ಮನೆಮಾಲೀಕರೂ ತಮ್ಮ ಜೋಡಿ ಕೊಟ್ಟಿರುವ ನೋಂದಾಯಿತ ಪ್ರಮಾಣಪತ್ರ ಪರಿಶೀಲಿಸಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಕಾನೂನಿನಲ್ಲಿ ಇದೆ. ತಪ್ಪಿದರೆ ಅವರಿಗೂ 20,000 ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

ನಿಯಮದಲ್ಲಿ ಏನಿದೆ?

ಉತ್ತರಾಖಂಡ ಸಮಾನ ನಾಗರಿಕ ಸಂಹಿತೆಯ (UCC) ಜಾರಿಯಾದ ಮೊದಲ ದೇಶ. ಧರ್ಮ ಮತ್ತು ಸಂಸ್ಕೃತಿಯನ್ನು ಆಧರಿಸಿ ಇದ್ದ ಹಲವಾರು ಪ್ರತ್ಯೇಕ ಕಾನೂನುಗಳು ಒಂದೇ ಕಾನೂನು ಆಗಿದೆ. ಅದರಲ್ಲಿ ಸಹ ಜೀವನ ಒಂದು ಗಮನ ಸೆಳೆದ ನಿಯಮವಾಗಿದೆ. ಯಾಕೆಂದರೆ ಹೊಸ ತಲೆಮಾರಿನ ಯುವ ಜನಾಂಗ ಸಹ ಜೀವನದ ಒಲವು ಹೊಂದಿದ್ದಾರೆ. ಹೀಗಾಗಿ ಅವರಿಗೆ ಸಮಸ್ಯೆ ಎದುರಾಗಿದೆ.

ಸಮಾನ ನಾಗರಿಕ ಸಂಹಿತೆ ಬಹುಪತ್ನಿತ್ವ (Polygamy) ನಿಷೇಧಿಸುತ್ತದೆ ಮತ್ತು ಪುರುಷರು ಹಾಗೂ ಮಹಿಳೆಯರ ವಿವಾಹ ಯೋಗ್ಯ ವಯಸ್ಸನ್ನು 21 ವರ್ಷ ಎಂದು ನಿಗದಿ ಮಾಡಲಾಗಿದೆ.

ಈ ನಿಯಮದ ಪ್ರಕಾರ, ಮನೆಮಾಲೀಕರು ಬಾಡಿಗೆಗೆ ಮನೆ ನೀಡುವ ಮೊದಲು ಲಿವ್-ಇನ್ ಸಂಬಂಧ ಪ್ರಮಾಣಪತ್ರ ಅಥವಾ ತಾತ್ಕಾಲಿಕ ಪ್ರಮಾಣಪತ್ರವನ್ನು ಪಡೆಯಲೇಬೇಕು. ಈ ದಾಖಲೆ ಪ್ರಕಾರ ಒಪ್ಪಂದ ಮಾಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ನೋಂದಣಾಧಿಕಾರಿಗಳು ದಂಡ ವಿಧಿಸಬಹುದು.

ನೋಂದಣಿ ಶುಲ್ಕ ಎಷ್ಟು?

ಉತ್ತರಾಖಂಡದಲ್ಲಿ ಲಿವ್-ಇನ್ ದಂಪತಿಗಳು ನೋಂದಣಿಗೆ 500 ರೂಪಾಯಿ ಶುಲ್ಕ ಪಾವತಿಸಬೇಕು. ಲಿವ್‌ ಇನ್‌ನಲ್ಲಿದ್ದ 30 ದಿನಗಳ ಒಳಗೆ ನೋಂದಣಿ ಮಾಡದಿದ್ದರೆ, ಹೆಚ್ಚುವರಿಯಾಗಿ ರೂ. 1,000 ದಂಡ ವಿಧಿಸಲಾಗುತ್ತದೆ.

ಆನ್‌ಲೈನ್ ಪೋರ್ಟಲ್ ಪರಿಚಯ

ರಾಜ್ಯ ಸರ್ಕಾರ ವಿವಾಹ, ವಿಚ್ಛೇದನ (Divorce), ಲಿವ್-ಇನ್ ಸಂಬಂಧ ಹಾಗೂ ಉಯಿಲು ಪತ್ರ (Will) ನೋಂದಣಿ ಸುಗಮಗೊಳಿಸಲು ಹೊಸ ಆನ್‌ಲೈನ್ ಪೋರ್ಟಲ್ ಪ್ರಾರಂಭಿಸಿದೆ.

ಪಕ್ಷ ಮತ್ತು ಪ್ರತಿಪಕ್ಷ ವಾದಗಳು

ಲಿವ್-ಇನ್ ಸಂಬಂಧಗಳ ನೋಂದಣಿ ಕಡ್ಡಾಯಗೊಳಿಸುವುದರಿಂದ ಅವರ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಮೇಲೆ ಹಸ್ತಕ್ಷೇಪವಾಗುತ್ತದೆ ಎಂಬ ಅಭಿಪ್ರಾಯವಿದೆ. ಅವರು ವ್ಯಕ್ತಿಗತ ಮಾಹಿತಿಯ ದುರುಪಯೋಗ ಹಾಗೂ ಸರ್ಕಾರ ಪ್ರೇರಿತ ದೌರ್ಜನ್ಯ ಎಂದು ಹೇಳಿದ್ದಾರೆ.

ವಿವಾದದ ನಡುವೆಯೂ ಉತ್ತರಾಖಂಡ ಸರ್ಕಾರ ಈ ಕಾನೂನು ಸಮಾಜಕ್ಕೆ ಒದಗಿಸುವ ಮಹತ್ವದ ಹೆಜ್ಜೆ ಎಂದು ಸಮರ್ಥಿಸಿಕೊಂಡಿದೆ. ಈ ನಿಯಮವು ಭಾರತದ ವೈಯಕ್ತಿಕ ಕಾನೂನುಗಳ ಶ್ರೇಣಿಯನ್ನು ಸಮಾನಗೊಳಿಸುವ ಪ್ರಮುಖ ಕ್ರಮವೆಂದು ಪರಿಗಣಿಸಲಾಗಿದೆ.

Read More
Next Story