JD Vance India Visit: ಜೈಪುರದ ಅಂಬರ್ ಕೋಟೆಗೆ ಭೇಟಿ ನೀಡಿದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌
x

ಅಮೆರಿಕಾದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಕುಟುಂಬದೊಂದಿಗೆ ಅಂಬರ್‌ ಕೋಟೆಗೆ ಭೇಟಿ ನೀಡಿದ ಸಂದರ್ಭ

JD Vance India Visit: ಜೈಪುರದ ಅಂಬರ್ ಕೋಟೆಗೆ ಭೇಟಿ ನೀಡಿದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌

ಭಾರತಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿರುವ ಯುಎಸ್‌ ಎ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಜೈಪುರದ ಅಂಬರ್‌ ಕೋಟೆಗೆ ಭೇಟಿ ನೀಡಿದ್ದು ಅವರನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು.


ಭಾರತಕ್ಕೆ ಕುಟುಂಬ ಸಮೇತ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರು ಮಂಗಳವಾರ (ಏಪ್ರಿಲ್‌ 22) ಐತಿಹಾಸಿಕ ಅಂಬರ್‌ ಕೋಟೆಗೆ ಭಾರತೀಯ ಮೂಲದ ಪತ್ನಿ ಉಷಾ ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿದ್ದು ಅವರನ್ನು ಸಾಂಪ್ರದಾಯಿಕ ರಾಜಾಸ್ಥಾನಿ ಶೈಲಿಯಲ್ಲಿ ಸ್ವಾಗತಿಸಲಾಯಿತು.

ಈ ಭೇಟಿಯಲ್ಲಿ ಅವರು ಭಾರತ ಹಾಗೂ ಅಮೆರಿಕದ ಕುರಿತ ಬಗ್ಗೆ ಉಪನ್ಯಾಸ ನೀಡಲಿದ್ದು ,ನಂತರ ಪ್ರವಾಸದ ಭಾಗವಾಗಿ ಆಗ್ರಾದ ತಾಜ್‌ ಮಹಲ್‌ಗೆ ಭೇಟಿ ನೀಡಲಿದ್ದಾರೆ. ಬುಧವಾರ ಮತ್ತೆ ಜೈಪುರದ ಅರಮನೆಗೆ ಭೇಟಿ ಕೊಡಲಿದ್ದಾರೆ.

ಪ್ರಧಾನಿ ಮೋದಿ-ಜೆ.ಡಿ. ವ್ಯಾನ್ಸ್‌ ಭೇಟಿ:

ಸೋಮವಾರ (ಎಪ್ರಿಲ್‌ 21) ರಂದು ನವದೆಹಲಿಗೆ ಭೇಟಿ ನೀಡಿದ್ದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಸಂಜೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಉಭಯ ರಾಷ್ಟ್ರಗಳು ರಕ್ಷಣೆ, ತಂತ್ರಙ್ನಾನ, ಇಂಧನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ. ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತವೂ ಸೇರಿದಂತೆ ವಿಶ್ವದ ಅರವತ್ತಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಸುಂಕ ವಿಧಿಸಿ ತೊಂಬತ್ತು ದಿನಗಳ ವಿರಾಮ ನೀಡಿರುವ ವೇಳೆಯಲ್ಲಿ ಉಪಾಧ್ಯಕ್ಷರಾದ ಜೆ.ಡಿ. ವ್ಯಾನ್ಸ್‌ ಭೇಟಿ ಅತ್ಯಂತ ಮಹತ್ವ ಪಡೆದಕೊಂಡಿದೆ.

Read More
Next Story