
ಬೃಹತ್ ತೈಲ ಟ್ಯಾಂಕರ್ ಒಂದನ್ನು ಅಮೆರಿಕದ ಅಧಿಕಾರಿಗಳು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ವಶಪಡಿಸಿಕೊಂಡಿದ್ದಾರೆ.
ವೆನೆಜುವೆಲಾ ನಂಟು: ಉತ್ತರ ಅಟ್ಲಾಂಟಿಕ್‌ನಲ್ಲಿ ತೈಲ ಟ್ಯಾಂಕರ್ ವಶಕ್ಕೆ ಪಡೆದ ಅಮೆರಿಕ‘
ನಿಷೇಧಿತ ಪಟ್ಟಿಯಲ್ಲಿದ್ದ ಈ ಹಡಗು, ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನವನ್ನು ಭೇದಿಸಲು ಯತ್ನಿಸುತ್ತಿತ್ತು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ದಿಗ್ಬಂಧನಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ವೆನೆಜುವೆಲಾಗೆ ನಂಟು ಹೊಂದಿದ್ದ ಬೃಹತ್ ತೈಲ ಟ್ಯಾಂಕರ್ ಒಂದನ್ನು ಅಮೆರಿಕದ ಅಧಿಕಾರಿಗಳು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯು ಅಮೆರಿಕ ಮತ್ತು ವೆನೆಜುವೆಲಾ ನಡುವಿನ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ನಿಷೇಧಿತ ಪಟ್ಟಿಯಲ್ಲಿದ್ದ ಈ ಹಡಗು, ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನವನ್ನು ಭೇದಿಸಲು ಯತ್ನಿಸುತ್ತಿತ್ತು ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈ ನೌಕೆಯ ಚಲನವಲನಗಳ ಮೇಲೆ ಅಮೆರಿಕದ ಕಡಲ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿದ್ದವು. ಅಂತಿಮವಾಗಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಇದನ್ನು ತಡೆದು ವಶಕ್ಕೆ ಪಡೆಯಲಾಗಿದೆ.
ಹಿಜ್ಬುಲ್ಲಾ ಜೊತೆಗಿನ ನಂಟು?
ವಶಪಡಿಸಿಕೊಳ್ಳಲಾದ ಹಡಗಿನ ಹಿನ್ನೆಲೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಲೆಬನಾನ್‌ನ ಸಶಸ್ತ್ರ ಬಂಡುಕೋರ ಸಂಘಟನೆ 'ಹಿಜ್ಬುಲ್ಲಾ'ಗೆ ಸಂಬಂಧಿಸಿದ ಕಂಪನಿಯೊಂದಕ್ಕೆ ಈ ಹಡಗು ಹಿಂದೆ ಸರಕು ಸಾಗಣೆ ಮಾಡಿತ್ತು ಎಂಬ ಗಂಭೀರ ಆರೋಪವಿದೆ. ಈ ಕಾರಣಕ್ಕಾಗಿ 2024ರಲ್ಲೇ ಅಮೆರಿಕ ಈ ನೌಕೆಯನ್ನು 'ಕಪ್ಪು ಪಟ್ಟಿ'ಗೆ ಸೇರಿಸಿ ನಿಷೇಧ ಹೇರಿತ್ತು. ಭಯೋತ್ಪಾದನೆಗೆ ಆರ್ಥಿಕ ನೆರವು ಅಥವಾ ಸಂಪನ್ಮೂಲ ಒದಗಿಸುವ ಜಾಲದ ಭಾಗವಾಗಿ ಈ ಹಡಗು ಕಾರ್ಯನಿರ್ವಹಿಸುತ್ತಿದೆ ಎಂಬುದು ಅಮೆರಿಕದ ವಾದವಾಗಿದೆ.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಆಡಳಿತದ ಮೇಲೆ ಒತ್ತಡ ಹೇರಲು ಅಮೆರಿಕ ಈಗಾಗಲೇ ಕಠಿಣ ತೈಲ ನಿರ್ಬಂಧಗಳನ್ನು ವಿಧಿಸಿದೆ. ಇದರ ನಡುವೆಯೇ ತೈಲ ಟ್ಯಾಂಕರ್ ವಶಪಡಿಸಿಕೊಂಡಿರುವುದು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿದೆ. ಈ ಹಡಗಿನಲ್ಲಿ ಎಷ್ಟು ಪ್ರಮಾಣದ ತೈಲವಿತ್ತು ಮತ್ತು ಪ್ರಸ್ತುತ ಹಡಗು ಎಲ್ಲಿದೆ ಎಂಬ ನಿಖರ ಮಾಹಿತಿಯನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.

