ವರನ ಕಡೆಯಿಂದ ಸಿಕ್ಕಿದ ನಗ, ನಗದು ಸಮೇತ ಛತ್ರದಿಂದ ವಧು ಪರಾರಿ!
x
ಪ್ರಾತಿನಿಧಿಕ ಚಿತ್ರ.

ವರನ ಕಡೆಯಿಂದ ಸಿಕ್ಕಿದ ನಗ, ನಗದು ಸಮೇತ ಛತ್ರದಿಂದ ವಧು ಪರಾರಿ!

ಉತ್ತರ ಪ್ರದೇಶದ ಖಜ್ನಿಯ ಭರೋಹಿಯಾ ಶಿವ ದೇವಾಲಯದಲ್ಲಿ ಘಟನೆ ನಡೆದಿದೆ. ಕಮ್ಲೇಶ್ ಕುಮಾರ್ ಎಂಬ ರೈತ ತನ್ನ ಮೊದಲ ಪತ್ನಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಎರಡನೇ ಮದುವೆಯಾಗಲು ಹೊರಟ್ಟಿದ್ದರು.


ಗೋರಖ್‌ಪುರ್ : ವರನ ಕಡೆಯಿಂದ ಹಣ, ಬಂಗಾರ, ಸೀರೆ ಸೇರಿದಂತೆ ಬೆಲೆಬಾಳುವ ವಸ್ತುಗಳು ಸಿಕ್ಕಿದ ತಕ್ಷಣವೇ ವಧು ಮದುವೆ ಛತ್ರದಿಂದಲೇ ಪರಾರಿಯಾದ ಘಟನೆ ಉತ್ತರ ಪ್ರದೇಶದ ಖಜ್ನಿಯಲ್ಲಿ ನಡೆದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಎಂದು ಪೊಲೀಸರು ಹೇಳಿದ್ದಾರೆ. ಆದರೆ ‌40 ವರ್ಷದ ವರ ಮಾತ್ರ ಮಾಧ್ಯಮಗಳ ಮುಂದೆ ಬಂದು ತಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಂಡಿದ್ದಾನೆ.

ಖಜ್ನಿಯ ಭರೋಹಿಯಾ ಶಿವ ದೇವಾಲಯದಲ್ಲಿ ಘಟನೆ ನಡೆದಿದೆ. ಕಮ್ಲೇಶ್ ಕುಮಾರ್ ಎಂಬ ರೈತ ತನ್ನ ಮೊದಲ ಪತ್ನಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಎರಡನೇ ಮದುವೆಯಾಗಲು ಹೊರಟ್ಟಿದ್ದರು. ಅಂತೆಯ ಎಲ್ಲವೂ ನಿಶ್ಚಯಗೊಂಡು ಮದುವೆಯ ವಿಧಿವಿಧಾನಗಳನ್ನು ಆರಂಭಿಸಿದ್ದರು.ಮದುವೆ ಸಂಬಂಧಕ್ಕಾಗಿ ಮಧ್ಯವರ್ತಿಗೆ ರೂ. 30,000 ನೀಡಿದ್ದರು. ಆದರೆ, ಈಗ ಹಣವೂ ಇಲ್ಲ, ಪತ್ನಿಯೂ ಇಲ್ಲ ಎಂಬ ಸ್ಥಿತಿಯನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಈ ವಿಷಯದಲ್ಲಿ ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ ಘಟನೆಯ ವಿವರಗಳನ್ನು ವರ ಹೇಳಿಕೊಂಡಿದ್ದಾನೆ. ಶುಕ್ರವಾರ ವಧು ತನ್ನ ತಾಯಿಯೊಂದಿಗೆ ದೇವಾಲಯಕ್ಕೆ ಬಂದಿದ್ದಳು. ಅಂತೆಯೇ ಕಮ್ಲೇಶ್ ತಮ್ಮ ಕುಟುಂಬದೊಂದಿಗೆ ಮದುವೆಗೆ ಸಿದ್ಧತೆ ಮಾಡಿಕೊಂಡು ಬಂದಿದ್ದರು. ಬಂದವರೇ ವಧುವಿಗೆ ಸೀರೆಗಳು, ಸೌಂದರ್ಯ ಸಾಧನಗಳು ಮತ್ತು ಆಭರಣಗಳನ್ನು ನೀಡಿದ್ದರು. ಮೊದಲೇ ಮಾತುಕತೆ ನಡೆಸಿದಂತೆ ಮದುವೆ ಸಂಪೂರ್ಣ ವೆಚ್ಚವನ್ನು ಕಮ್ಲೇಶ್‌ ವಹಿಸಿಕೊಂಡಿದ್ದರು.

ಮದುವೆ ಶಾಸ್ತ್ರಗಳು ಆರಂಭವಾದಾಗ, ವಧು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದಳು. ಅಲ್ಲಿಂದ ವಾಪಸ್‌ ಬಂದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಕೆಯ ತಾಯಿಯೂ ಮದುವೆ ಛತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ.

"ನಾನು ನನ್ನ ಕುಟುಂಬವನ್ನು ಒಂದುಗೂಡಿಸಲು ಬಯಸಿದ್ದೆ. ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದೆ. ಆದರೆ ಈಗ ಇರುವುದನ್ನೂ ಕಳೆದುಕೊಂಡೆ," ಎಂದು ಕಮ್ಲೇಶ್ ಹೇಳಿದ್ದಾರೆ. ದಕ್ಷಿಣದ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ದೂರು ಬಂದರೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Read More
Next Story