UNION BUDGET 2024: ಸಬ್ಸಿಡಿ ಬಿಲ್ ಶೇ.7.8 ಕಡಿತ
x

UNION BUDGET 2024: ಸಬ್ಸಿಡಿ ಬಿಲ್ ಶೇ.7.8 ಕಡಿತ


ನವದೆಹಲಿ, ಜುಲೈ 23- ವಿತ್ತೀಯ ವಿವೇಚನೆ ಕ್ರಮವಾಗಿ ಆಹಾರ, ರಸಗೊಬ್ಬರ ಮತ್ತು ಇಂಧನ ಸಬ್ಸಿಡಿ ವೆಚ್ಚವನ್ನು ಶೇ.7.8 ರಷ್ಟು ಕಡಿಮೆ ಮಾಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಸಬ್ಸಿಡಿ ಹಂಚಿಕೆ 3,81,175 ಕೋಟಿ ರೂ. ಇರಲಿದ್ದು, ಹಿಂದಿನ ವರ್ಷದ ಮೊತ್ತ 4,13,466 ಕೋಟಿ ರೂ. ಈ ಕಡಿತವು ಫೆಬ್ರವರಿಯ ಮಧ್ಯಂತರ ಬಜೆಟ್‌ನಲ್ಲಿ ಅಂದಾಜು ಮಾಡಲಾದ ಮೊತ್ತದೊಂದಿಗೆ ಹೊಂದಾಣಿಕೆ ಆಗುತ್ತದೆ.

ಆಹಾರ ಸಬ್ಸಿಡಿ 2,05,250 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಇದು ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಹಣಕಾಸಿನ ಪರಿಷ್ಕೃತ ಅಂದಾಜು 2,12,332 ಕೋಟಿ ರೂ.ಗಿಂತ ಕಡಿಮೆ. ಈ ಸಬ್ಸಿಡಿಯು ಸರ್ಕಾರ ಸಂಗ್ರಹಿಸುವ ಆಹಾರ ಧಾನ್ಯಗಳ ಆರ್ಥಿಕ ವೆಚ್ಚ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ ಎಸ್‌ ಎ) ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಮಾರಾಟದ ನಡುವಿನ ವ್ಯತ್ಯಾಸವನ್ನು ಒಳಗೊಳ್ಳುತ್ತದೆ. ಇದರಿಂದ ಸರಿಸುಮಾರು 80 ಕೋಟಿ ಜನರಿಗೆ ಪ್ರಯೋಜನ ಆಗಲಿದೆ.

ರಸಗೊಬ್ಬರ ಸಬ್ಸಿಡಿ ಗಮನಾರ್ಹವಾದ ಕಡಿತವನ್ನು ಕಂಡಿದ್ದು, ಹಿಂದಿನ ಹಣಕಾಸು ವರ್ಷದ 1,88,894 ಕೋಟಿ ರೂ.ಗೆ ಹೋಲಿಸಿದರೆ, 1,64,000 ಕೋಟಿ ರೂ.ಗೆ ಕುಸಿದಿದೆ. ಈ ಸಬ್ಸಿಡಿ ತಯಾರಕರನ್ನು ಬೆಂಬಲಿಸುವುದಲ್ಲದೆ, ರೈತರಿಗೆ ಕೈಗೆಟಕುವ ಬೆಲೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಯೂರಿಯಾ ಮತ್ತು ಇನ್ನಿತರ ರಸಗೊಬ್ಬರಗಳಾದ ಡಿಎಪಿ ಮತ್ತು ಎಂಒಪಿ ಸೇರಿದೆ.

ಪೆಟ್ರೋಲಿಯಂ ಸಬ್ಸಿಡಿಯನ್ನು ಮುಖ್ಯವಾಗಿ, ಅಡುಗೆ ಅನಿಲಕ್ಕೆ (ಎಲ್‌ಪಿಜಿ) 11,925 ಕೋಟಿ ರೂ.ಗೆ ಕಡಿಮೆ ಮಾಡಲಾಗಿದೆ. 2023-24ರ ಪರಿಷ್ಕೃತ ಅಂದಾಜಿನಲ್ಲಿ 12,240 ಕೋಟಿ ರೂ. ಇದ್ದಿತ್ತು.

ಜನಕಲ್ಯಾಣ ಕಾರ್ಯಕ್ರಮ ಮತ್ತು ಹಣಕಾಸಿನ ಬಲವರ್ಧನೆಯನ್ನು ಸಮತೋಲನಗೊಳಿಸುವ ವಿಧಾನವನ್ನು ಅನುಸರಿಸಲಾಗಿದೆ.

Read More
Next Story