ಕಚ್ | ಜ್ವರದಿಂದ 15 ಮಂದಿ ಸಾವು, ಕೇಂದ್ರ ಆರೋಗ್ಯ ಸಚಿವಾಲಯ ಕಣ್ಗಾವಲು
ಹೊಸದಿಲ್ಲಿ: ಗುಜರಾತ್‌ನ ಕಚ್‌ನಲ್ಲಿ ಗುರುತಿಸಲಾಗದ ಜ್ವರದಿಂದ 15 ಮಂದಿ ಮೃತಪಟ್ಟಿದ್ದು,ಕೇಂದ್ರ ಆರೋಗ್ಯ ಸಚಿವಾಲಯವು ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ), ಸಮಗ್ರ ರೋಗ ಸಮೀಕ್ಷೆ ಕಾರ್ಯಕ್ರಮ(ಐಡಿಎಸ್‌ಪಿ), ಐಎಚ್‌ಐಪಿ ನೆಟ್‌ವರ್ಕ್ ಮತ್ತು ಒನ್ ಹೆಲ್ತ್ ಮಿಷನ್ ಮೂಲಕ ರೋಗ ಪತ್ತೆ-ಹರಡುವಿಕೆಗೆ ಸಂಬಂಧಪಟ್ಟಂತೆ ತಕ್ಷಣ ಪ್ರತಿಕ್ರಿಯಿಸಲು ಪರಿಣಾಮಕಾರಿ ಕಣ್ಗಾವಲು ಕಾರ್ಯವಿಧಾನವನ್ನು ಸ್ಥಾಪಿಸಿದೆ ಎಂದು ತಿಳಿದುಬಂದಿದೆ.
ತಂಡಗಳ ನಿಯೋಜನೆ: ಗುಜರಾತ್ ಸರ್ಕಾರವು ಕಚ್ ಜಿಲ್ಲೆಯ ಎರಡು ತಾಲೂಕುಗಳ ಏಳು ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಜ್ಞ ವೈದ್ಯರು ಮತ್ತು 50 ವೈದ್ಯಕೀಯ ತಂಡಗಳನ್ನು ನಿಯೋಜಿಸಿದೆ.
ಜ್ವರ ಮತ್ತು ಆನಂತರ ಸಾವಿಗೆ ನಿಖರ ಕಾರಣ ಗುರುತಿಸಲು ಸೋಂಕಿತರ ಮಾದರಿಗಳನ್ನು ಗಾಂಧಿನಗರದಲ್ಲಿರುವ ಗುಜರಾತ್ ಬಯೋಟೆಕ್ನಾ ಲಜಿ ರಿಸರ್ಚ್ ಸೆಂಟರ್ (ಜಿಬಿಆರ್‌ಸಿ) ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದೆ.
ಮೇಲ್ವಿಚಾರಣೆ: ವಿಮಾನ ನಿಲ್ದಾಣ, ಬಂದರುಗಳಂಥ ಪ್ರವೇಶ ಸ್ಥಳಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಐಸಿಎಂಆರ್‌ನ ಪ್ರಯೋಗಾ ಲಯಗಳ ಜಾಲವು ರೋಗನಿರ್ಣಯವನ್ನು ನೋಡಿಕೊಳ್ಳಲಿದೆ ಮತ್ತು ಅಗತ್ಯವಿದ್ದರೆ ಡಯಾಗ್ನೋಸ್ಟಿಕ್ ಕಿಟ್‌ಗಳ ಪೂರೈಕೆ ಹೆಚ್ಚಿಸುವ ಸಾಮರ್ಥ್ಯವಿದೆ.
ಪ್ರಧಾನಮಂತ್ರಿಗಳ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಲಭ್ಯ ಮಿಷನ್(PM-ABHIM) ಅಡಿಯಲ್ಲಿ ತುರ್ತು ಸೇವೆಗಳ ಹೆಚ್ಚಳ ಹಾಗೂ ಏಮ್ಸ್ ಮೂಲಕ ತೃತೀಯ ಆರೈಕೆ ಸೇವೆಗಳನ್ನು ಬಲಪಡಿಸಲಾಗಿದೆ. ಸಾಕಷ್ಟು ವೈದ್ಯಕೀಯ ಆಮ್ಲಜನಕ ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.