ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾದ ನವದೆಹಲಿ-ನೆವಾರ್ಕ್ ವಿಮಾನದ ಬಿಸಿನೆಸ್-ಕ್ಲಾಸ್ ಪ್ರಯಾಣಿಕರೊಬ್ಬರು ವಿಮಾನಯಾನ ಸಂಸ್ಥೆಯಿಂದ "ಬೇಯಿಸದ" ಆಹಾರವನ್ನು ನೀಡಲಾಯಿತು ಮತ್ತು ಸೀಟುಗಳು ಕೊಳಕು ಎಂದು ಆರೋಪಿಸಿದ್ದಾರೆ, ಪ್ರಯಾಣವನ್ನು "ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ" ಎಂದು ವಿವರಿಸಿದ್ದಾರೆ.

ಪ್ರಯಾಣಿಕ ವಿನೀತ್ ಕೆ ಅವರು ಈ ಬಗ್ಗೆ ಶನಿವಾರ (ಜೂನ್ 15) 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. ʻʻಗಲ್ಫ್ ಕ್ಯಾರಿಯರ್ ಎತಿಹಾದ್‌ನಿಂದ ಯುಎಸ್‌ಗೆ ಹೋಗಲು ಅಗ್ಗದ ದರದಲ್ಲಿ ತಡೆರಹಿತ ಸೇವೆಯನ್ನು ನಿರ್ವಹಿಸುವ ಏರ್ ಇಂಡಿಯಾ ಫ್ಲೈಟ್ ಆರಿಸಿಕೊಂಡಿದ್ದೇನೆ‌ʼʼ ಎಂದು ಹೇಳಿದ್ದಾರೆ.

'ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ'

ʻʻನಿನ್ನೆಯ ವಿಮಾನವು ದುಃಸ್ವಪ್ನಕ್ಕಿಂತ ಕಡಿಮೆಯಿಲ್ಲ. ಬುಕ್ ಮಾಡಲಾದ ಬಿಸಿನೆಸ್ ಕ್ಲಾಸ್ ಸೀಟುಗಳು ಸ್ವಚ್ಛವಾಗಿಲ್ಲ, ಸವೆದುಹೋಗಿವೆ ಮತ್ತು 35 ಆಸನಗಳಲ್ಲಿ ಕನಿಷ್ಠ 5 ಆಸನಗಳು ಉಪಯೋಗಕ್ಕೆ ಬಾರದಂತವುʼʼ ಎಂದು ಅವರು ಹೇಳಿದ್ದಾರೆ.

25 ನಿಮಿಷಗಳ ವಿಳಂಬದ ನಂತರ ಫ್ಲೈಟ್ ಟೇಕಾಫ್ ಆಗಿದೆ ಎಂದು ಆರೋಪಿಸಿರುವ ವಿನೀತ್, "ಟೇಕ್ ಆಫ್ ಆದ 30 ನಿಮಿಷಗಳ ನಂತರ ನಾನು ಮಲಗಲು ಬಯಸಿದ್ದೆ (3.30 AM) ಆದರೆ ನನ್ನ ಸೀಟ್ ಫ್ಲಾಟ್ ಬೆಡ್‌ಗೆ ಹೋಗುವುದಿಲ್ಲ ಎಂದು ಗೊತ್ತಾಯಿತು ಏಕೆಂದರೆ ಅದು ಕೆಲಸ ಮಾಡುವುದಿಲ್ಲ ಕೆಟ್ಟುಹೋಗಿದೆ. ಆನಂತರ ಸಿಬ್ಬಂದಿ ಬಳಿ ಹೇಳಿಕೊಂಡಾಗ ಅವರು 10 ನಿಮಿಷಗಳ ನಂತರ ಮತ್ತೊಂದು ಆಸನಕ್ಕೆ ಸ್ಥಳಾಂತರಿಸಿದರುʼʼ ಎಂದು ವಿವರಿಸಿದ್ದಾರೆ.

"ಕೆಲವು ವರ್ಷಗಳ ಕಾಲ ಎಮಿರೇಟ್ಸ್‌ನಲ್ಲಿ ಪ್ರಯಾಣ ಮಾಡಿದ್ದ ನಾನು ಇತ್ತೀಚೆಗೆ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡಿದ್ದೇನೆ. ಏಕೆಂದರೆ ಅವರು NY, ಚಿಕಾಗೋ ಮತ್ತು ಲಂಡನ್‌ಗೆ ನೇರ ವಿಮಾನಗಳನ್ನು ಒದಗಿಸುತ್ತಾರೆ. ನಾನು ಆಗಾಗ್ಗೆ ಈ ದೇಶಗಳಿಗೆ ಪ್ರಯಾಣ ಮಾಡುತ್ತೇನೆ ಎಂದು ವಿನೀತ್ ಹೇಳಿದ್ದಾರೆ..

'ಬೇಯಿಸದ ಆಹಾರ, ಹಳಸಿದ ಹಣ್ಣುಗಳು'

"ಕೆಲವು ಗಂಟೆಗಳ ನಂತರ ಎಚ್ಚರವಾಯಿತು, ಆಹಾರವನ್ನು ಬಡಿಸಲಾಯಿತು ಮತ್ತು ಬೆಂದಿರಲಿಲ್ಲ. (ವಿಮಾಣ ಪ್ರಯಾಣದಲ್ಲಿ ಈ ರೀತಿ ಎಂದಿಗೂ ನೋಡಿಲ್ಲ), ಹಣ್ಣುಗಳು ಹಳಸಿವೆʼʼ ಎಂದು ಅವರು ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ʻʻಟಿವಿ/ಸ್ಕ್ರೀನ್ ಕೆಲಸ ಮಾಡಲಿಲ್ಲ. ನಾನು ನೋಡುವುದಕ್ಕಾಗಿ ಅಲ್ಲ, ಕೇವಲ ಪ್ರಯತ್ನಿಸಿದೆ ಮತ್ತು ಅದು ಕೂಡ ಕೆಲಸ ಮಾಡುತ್ತಿರಲಿಲ್ಲ. ಇದೆಲ್ಲದರ ನಂತರ, ಅವರು ನನ್ನ ಲಗೇಜ್ ಅನ್ನು ಮುರಿದಿದ್ದಾರೆʼʼ ಎಂದು ಪ್ರಯಾಣಿಕರು ಹೇಳಿದರುʼʼ ಎಂದು ತಿಳಿಸಿದ್ದಾರೆ.

ʻʻ5,00,000 ರೂ.ಗೆ ಕೆಟ್ಟ ಆಹಾರ, ಹಳಸಿದ ಸೀಟ್, ಕೊಳಕು ಸೀಟ್ ಕವರ್‌ಗಳು, ಕೆಲಸ ಮಾಡದ ಟಿವಿ, ನನ್ನ ಲಗೇಜ್‌ಗೆ ಹಾನಿಯಾಗಿದೆ" ಎಂದು ವಿನೀತ್ ಕೆ ಹೇಳಿದ್ದಾರೆ.

Next Story