ಯುಕೆ ಚುನಾವಣೆ | ಕೇರಳ ಮೂಲದ ನರ್ಸ್ ಆಯ್ಕೆ
x

ಯುಕೆ ಚುನಾವಣೆ | ಕೇರಳ ಮೂಲದ ನರ್ಸ್ ಆಯ್ಕೆ


ಯುಕೆ ಚುನಾವಣೆಯಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಸೋಜನ್ ಜೋಸೆಫ್(49), ಆಶ್‌ಫೋರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರ 139 ವರ್ಷಗಳ ರಚನೆಯಾಗಿದ್ದು,ಗೆಲುವು ಸಾಧಿಸಿದ ಮೊದಲ ಲೇಬರ್ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಸೋಜನ್‌ 2001 ರಲ್ಲಿ ಯುಕೆಗೆ ಗೆ ವಲಸೆ ಬಂದರು.ಲೇಬರ್‌ ಪಾರ್ಟಿ 14 ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿದಿದ್ದು, ಈ ಚುನಾವಣೆಯಲ್ಲಿ ಆಯ್ಕೆಯಾದ 410 ಜನಪ್ರತಿನಿಧಿಗಳಲ್ಲಿ ಸೋಜನ್ ಒಬ್ಬರು.

ಕೆಂಟ್‌ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಮಾನಸಿಕ ಆರೋಗ್ಯ ನರ್ಸ್ ಆಗಿರುವ ಸೋಜನ್, ಟೋರಿಗಳಿಗೆ ಸುರಕ್ಷಿತವೆಂದು ಪರಿಗಣಿಸ ಲಾದ ಕ್ಷೇತ್ರದಲ್ಲಿ ಮಾಜಿ ರಾಜ್ಯ ಕಾರ್ಯದರ್ಶಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕ ಡಾಮಿಯನ್ ಗ್ರೀನ್ ಅವರನ್ನು 1,779 ಮತಗಳಿಂದ ಸೋಲಿಸಿದರು. ಗ್ರೀನ್ ಅವರು ಆಶ್ಫೋರ್ಡ್ ನ್ನು 27 ವರ್ಷಗಳ ಕಾಲ ಪ್ರತಿನಿಧಿಸಿದ್ದರು.

ಸೋಜನ್ ಬ್ರಿಟಿಷ್ ಸಂಸತ್ತಿಗೆ ಆಯ್ಕೆಯಾದ ಮೊದಲ ಮಲಯಾಳಂ ಭಾಷಿಕ. ಸೋಜನ್ ಅವರ ಪತ್ನಿ ಬ್ರೈಟಾ ಕೂಡ ನರ್ಸ್. ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೊಟ್ಟಾಯಂನ ಕೈಪುಳದಲ್ಲಿರುವ ಅವರ ಸ್ನೇಹಿತರು ಮತ್ತು ಸಂಬಂಧಿಕರು ಸಂಭ್ರಮಾಚರಣೆ ನಡೆಸಿದರು.ಸೋಜನ್ ಅವರ ಪತ್ನಿ ಬ್ರೈಟಾ ಕೂಡ ನರ್ಸ್. ದಂಪತಿಗೆ ಮೂವರು ಮಕ್ಕಳಿದ್ದಾರೆ.

ʻನಮಗೆ ಎಷ್ಟು ಸಂತೋಷವಾಗಿದೆ ಎಂಬುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.ಇಷ್ಟು ದೊಡ್ಡ ಚುನಾವಣೆಯಲ್ಲಿ ಅವರ ಗೆಲುವು ನಮಗೆಲ್ಲರಿಗೂ ಹೆಮ್ಮೆ ತಂದಿದೆ,ʼ ಎಂದು ಅವರ ತಂದೆ ಜೋಸೆಫ್ ಹೇಳಿದರು.

ʻಬೆಳೆಯುತ್ತಿರುವಾಗ ಮಗ ರಾಜಕೀಯ ಒಲವು ಹೊಂದಿರಲಿಲ್ಲ.ಅಧ್ಯಯನದಲ್ಲಿ ನಿರತರಾಗಿದ್ದ. ಆದರೆ, ಸಮಾಜವಾದದ ಒಲವು ಹೊಂದಿದ್ದರು. ಬಹುಶಃ ಅದೇ ಅವರನ್ನು ಲೇಬರ್ ಪಾರ್ಟಿಯತ್ತ ಆಕರ್ಷಿಸಿರಬಹುದು,ʼ ಎಂದು ಹೇಳಿದರು.

ಸೋಜನ್ ಯುಕೆಗೆ ತೆರಳುವ ಮೊದಲು ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ (ಮನೋವೈದ್ಯಶಾಸ್ತ್ರ) ಪದವಿ ಪಡೆದರು. 2021ರಲ್ಲಿ ಸ್ಥಳೀಯ ಕೌನ್ಸಿಲ್ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲುಂಡರು. ಎರಡು ವರ್ಷಗಳ ನಂತರ ಮತ್ತೆ ಸ್ಪರ್ಧಿಸಿ ಗೆದ್ದರು.

ಶುಕ್ರವಾರದ ವಿಜಯದ ನಂತರ ಕೆಂಟ್ ಆನ್‌ಲೈನ್‌ ಜೊತೆ ಮಾತನಾಡಿ,ʻಇದೊಂದು ಐತಿಹಾಸಿಕ ಕ್ಷಣ. ಟೌನ್ ಸೆಂಟರ್ ಮತ್ತು ರಸ್ತೆಗಳ ಸುಧಾರಣೆ ಮತ್ತು ಸಣ್ಣ ವ್ಯಾಪಾರಗಳಿಗೆ ಸಹಾಯ ಮಾಡುವುದು ನನ್ನ ಆದ್ಯತೆ,ʼ ಎಂದು ಹೇಳಿದರು.

Read More
Next Story