ಬ್ರಿಟನ್‌ನಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ: 7 ಭಾರತೀಯರು ಸೇರಿ 280 ಮಂದಿ ಬಂಧನ
x

ಆಗಸ್ಟ್ 3 ರಂದು, ಸಾಮಾಜಿಕ ಮಾಧ್ಯಮದ ಹಿಂದಿರುವ ಕ್ರಿಮಿನಲ್ ಗ್ಯಾಂಗ್‌ಗಳನ್ನು ಹತ್ತಿಕ್ಕಲು ಹೊಸ ಕಾನೂನಿನ ಯೋಜನೆಗಳನ್ನು ಯುಕೆ ಬಹಿರಂಗಪಡಿಸಿತು. 

ಬ್ರಿಟನ್‌ನಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ: 7 ಭಾರತೀಯರು ಸೇರಿ 280 ಮಂದಿ ಬಂಧನ

ಗೃಹ ಕಚೇರಿಯ ಪ್ರಕಾರ, ಕಾರ್ಯಾಚರಣೆ ಬಳಿಕ 53 ವ್ಯಕ್ತಿಗಳ ಆಶ್ರಯ ಬೆಂಬಲವನ್ನು (asylum support) ಪರಿಶೀಲಿಸಲಾಗುತ್ತಿದೆ.


ಬ್ರಿಟನ್‌ನಲ್ಲಿ ಅಕ್ರಮವಾಗಿ ಡೆಲಿವರಿ ಕೆಲಸ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಗೃಹ ಕಚೇರಿ ಇತ್ತೀಚೆಗೆ "ಆಪರೇಷನ್ ಈಕ್ವಲೈಸ್" ಎಂಬ ಹೆಸರಿನಲ್ಲಿ ಒಂದು ವಾರ ಕಾಲ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 280 ಜನರನ್ನು ಬಂಧಿಸಲಾಗಿದ್ದು, ಅವರಲ್ಲಿ 7 ಭಾರತೀಯರು ಕೂಡ ಸೇರಿದ್ದಾರೆ.

ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಗಿಗ್ ಆರ್ಥಿಕತೆ (gig economy) ಮತ್ತು ಡೆಲಿವರಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವುದಾಗಿತ್ತು. ಜುಲೈ 20 ರಿಂದ 27ರ ಅವಧಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಒಟ್ಟು 1,780 ಜನರನ್ನು ತಡೆದು ವಿಚಾರಣೆ ನಡೆಸಲಾಗಿದೆ. ಬಂಧಿತರಲ್ಲಿ ಪಶ್ಚಿಮ ಲಂಡನ್‌ನ ಹಿಲ್ಲಿಂಗ್ಡನ್‌ನಲ್ಲಿ ನಡೆದ ದಾಳಿಯಲ್ಲಿ ಸಿಕ್ಕಿಬಿದ್ದ ಏಳು ಭಾರತೀಯರೂ ಸೇರಿದ್ದಾರೆ. ಇವರಲ್ಲಿ ಐವರನ್ನು ಅಕ್ರಮ ಕೆಲಸದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ.

ಕಠಿಣ ಕ್ರಮ ಮತ್ತು ಬೆಂಬಲ ಕಡಿತ

ಗೃಹ ಕಚೇರಿಯ ಪ್ರಕಾರ, ಕಾರ್ಯಾಚರಣೆ ಬಳಿಕ 53 ವ್ಯಕ್ತಿಗಳ ಆಶ್ರಯ ಬೆಂಬಲವನ್ನು (asylum support) ಪರಿಶೀಲಿಸಲಾಗುತ್ತಿದೆ. ತನಿಖೆ ನಂತರ ಅವರ ಆರ್ಥಿಕ ಬೆಂಬಲವನ್ನು ಅಮಾನತುಗೊಳಿಸುವ ಅಥವಾ ರದ್ದುಗೊಳಿಸುವ ಸಾಧ್ಯತೆ ಇದೆ. ಬ್ರಿಟನ್​​ನ ಗಡಿ ಭದ್ರತೆ ಮತ್ತು ಆಶ್ರಯ ಸಚಿವೆ ಡೇಮ್ ಏಂಜೆಲಾ ಈಗಲ್ ಮಾತನಾಡಿ, "ಕಾನೂನುಬಾಹಿರವಾಗಿ ಕೆಲಸ ಮಾಡುವುದು ಗಡಿ ಭದ್ರತೆಯನ್ನು ದುರ್ಬಲಗೊಳಿಸುತ್ತದೆ. ಇದನ್ನು ತಡೆಯಲು ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ," ಎಂದು ಎಚ್ಚರಿಸಿದ್ದಾರೆ.

ವ್ಯಾಪಾರ ಸಂಸ್ಥೆಗಳಿಗೂ ಎಚ್ಚರಿಕೆ

ಈ ಕಾರ್ಯಾಚರಣೆಯಲ್ಲಿ, ಅಕ್ರಮ ಕಾರ್ಮಿಕರನ್ನು ನೇಮಿಸಿಕೊಂಡ ಆರೋಪದ ಮೇಲೆ 51 ವ್ಯವಹಾರಗಳಿಗೆ (ಕಾರು ತೊಳೆಯುವ ಕೇಂದ್ರಗಳು, ರೆಸ್ಟೋರೆಂಟ್‌ಗಳು, ಮತ್ತು ಚಿಲ್ಲರೆ ಅಂಗಡಿಗಳು) ಸಿವಿಲ್ ಪೆನಾಲ್ಟಿ ರೆಫರಲ್ ನೋಟಿಸ್ ನೀಡಲಾಗಿದೆ. ಈ ಸಂಸ್ಥೆಗಳು ಉದ್ಯೋಗಿಗಳನ್ನು ಸರಿಯಾಗಿ ಪರಿಶೀಲಿಸದೆ ನೇಮಿಸಿಕೊಂಡಿರುವುದು ಸಾಬೀತಾದರೆ, ಭಾರಿ ದಂಡ ತೆರಬೇಕಾಗುತ್ತದೆ.

Read More
Next Story