Language Divide : ಬಜೆಟ್ ಪ್ರತಿಯಿಂದ ರೂಪಾಯಿ ಚಿಹ್ನೆ ತೆಗೆದುಹಾಕಿದ ತಮಿಳುನಾಡು ಸರ್ಕಾರ, ವಿವಾದ
x

Language Divide : ಬಜೆಟ್ ಪ್ರತಿಯಿಂದ ರೂಪಾಯಿ ಚಿಹ್ನೆ ತೆಗೆದುಹಾಕಿದ ತಮಿಳುನಾಡು ಸರ್ಕಾರ, ವಿವಾದ

ಶುಕ್ರವಾರ (ಮಾರ್ಚ್ 15) ರಾಜ್ಯ ಬಜೆಟ್ ಮಂಡಿಸಲು ಸಿದ್ಧವಾಗಿರುವ ಹಣಕಾಸು ಸಚಿವ ತಂಗಮ್ ತೆಣ್ಣಾರಸು ಅವರು ಹೊಸ ಲೋಗೋವನ್ನು ಅನಾವರಣಗೊಳಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


ಕೇಂದ್ರ ಸರ್ಕಾರದೊಂದಿಗೆ ಭಾಷಾ ಸಮರ ಮುಂದುವರಿಸಿರುವ ತಮಿಳುನಾಡು ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, 2025-26ರ ರಾಜ್ಯ ಬಜೆಟ್ ದಾಖಲೆಗಳಲ್ಲಿ ಅಧಿಕೃತ ಭಾರತೀಯ ರೂಪಾಯಿಯ ಚಿಹ್ನೆ (₹) ಬದಲಿಗೆ ತಮಿಳು ಲಿಪಿಯ ரூ (ರೂ.) ಎಂದು ಬದಲಾಯಿಸಿದೆ.

ತಮಿಳುನಾಡು ಆಡಳಿತ ಪಕ್ಷದ ಪ್ರಕಾರ ಈ ನಿರ್ಧಾರವು ಸರ್ಕಾರದ ಭಾಷಾ ಮತ್ತು ಸಾಂಸ್ಕೃತಿಕ ಅಸ್ತಿತ್ವದ ವಿಷಯದಲ್ಲಿ ತೆಗೆದುಕೊಂಡಿರುವ ಪ್ರಮುಖ ಹೆಜ್ಜೆಯಾಗಿದೆ. ரூ ಚಿಹ್ನೆ ரூபாய்"(ರೂಪಾಯಿ) ಎಂಬ ತಮಿಳು ಪದದಿಂದ ರೂಪುಗೊಂಡಿದೆ. ಬಜೆಟ್ ಲೋಗೋದಲ್ಲಿ ಎಲ್ಲರಿಗೂ ಎಲ್ಲವೂ" (எல்லார்க்கும் எல்லாம்) ಎಂಬ ಸಾಲನ್ನೂ ಸೇರಿಸಲಾಗಿದೆ. ಈ ನಿರ್ಧಾರ ಎಲ್ಲರವನ್ನೂ ಒಳಗೊಳ್ಳುವ (inclusive) ಆಡಳಿತ ಮಾದರಿಯ ಭಾಗವಾಗಿದೆ ಎಂದು ಡಿಎಂಕೆ ಸರ್ಕಾರ ಅಭಿಪ್ರಾಯಪಟ್ಟಿದೆ.

ಎನ್​​ಇಪಿಗೆ ತಮಿಳುನಾಡಿನ ವಿರೋಧ

ಶುಕ್ರವಾರ (ಮಾರ್ಚ್ 15) ರಾಜ್ಯ ಬಜೆಟ್ ಮಂಡಿಸಲು ಸಿದ್ಧವಾಗಿರುವ ಹಣಕಾಸು ಸಚಿವ ತಂಗಮ್ ತೆಣ್ಣಾರಸು ಅವರು ಹೊಸ ಲೋಗೋವನ್ನು ಅನಾವರಣಗೊಳಿಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕಳೆದ ವರ್ಷಗಳವರೆಗೆ, ಬಜೆಟ್ ವರದಿ ಪ್ರತಿಗಳಲ್ಲಿ ಅಧಿಕೃತ ರೂಪಾಯಿ ಚಿಹ್ನೆ (₹) ಬಳಕೆಯಾಗುತ್ತಿತ್ತು. ಆದರೆ ಈ ವರ್ಷದಿಂದ ரூ ಬಳಕೆಯಾಗಿದ್ದು, ತಮಿಳುನಾಡಿನ ಕೇಂದ್ರ ಸರ್ಕಾರದ ಭಾಷಾ ನೀತಿಯ ವಿರುದ್ಧದ ನಿಲುವಿಗೆ ಅನುಗುಣವಾಗಿದೆ. ತಮಿಳುನಾಡು, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರಲ್ಲಿ ಪ್ರಸ್ತಾಪಿಸಲಾದ ತ್ರಿ ಭಾಷಾ ಸೂತ್ರದ (Three-language formula) ವಿರುದ್ಧ ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಈ ನೀತಿಯು ಹಿಂದಿ ಹೇರಿಕೆಯ ಪ್ರಯತ್ನ** ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

ಗಮನಾರ್ಹ ಸಂಗತಿಯೆಂದರೆ ₹ ರೂಪಾಯಿ ಚಿಹ್ನೆಯನ್ನು ತಮಿಳುನಾಡು ಮೂಲದ ಉದಯ್​ ಕುಮಾರ್ ಧರ್ಮಲಿಂಗಂ ಅವರು 2010ರಲ್ಲಿ ವಿನ್ಯಾಸಗೊಳಿಸಿದ್ದರು. ಇದು ದೇಶವ್ಯಾಪಿ ಅಂಗೀಕಾರಗೊಂಡಿತ್ತು.

ತಮಿಳುನಾಡಿನ ಹೆಮ್ಮೆಯ ಪ್ರತೀಕ

ಡಿಎಂಕೆ ವಕ್ತಾರ ಕಾನ್ಸ್ಟೆಂಟೈನ್ ರವೀಂದ್ರನ್ ದ ಫೆಡರಲ್​ ಜತೆ ಮಾತನಾಡಿ, ಈ ನಿರ್ಧಾರವು 8 ಕೋಟಿಗೂ ಅಧಿಕ ತಮಿಳು ಜನರ ಹೆಮ್ಮೆಯ ಪ್ರತೀಕ ಎಂದು ಹೇಳಿದ್ದಾರೆ.

*ಈ ತೀರ್ಮಾನವನ್ನು ಮುಖ್ಯಮಂತ್ರಿಯೊಬ್ಬರು ಮಾತ್ರ ಕೈಗೊಂಡಿಲ್ಲ. ಇದು 8 ಕೋಟಿ ತಮಿಳರ ಶಕ್ತಿಯ ಪ್ರತೀಕವಾಗಿದೆ. ನಮ್ಮ ತಾಯ್ನುಡಿಗೆ ಸವಾಲು ಎದುರಾದರೆ ನಾವು ಸದಾ ಅದನ್ನು ರಕ್ಷಿಸಲು ಸಜ್ಜಾಗಿರುತ್ತೇವೆ. ಇದು ಕೆಲವರಿಗೆ ರಾಜಕೀಯ ನಿರ್ಧಾರವನ್ನಾಗಿ ಕಾಣಬಹುದು. ಅದು ನಮ್ಮ ದೃಷ್ಟಿಯಲ್ಲಿ 'ಭಾಷಾ ಹೆಮ್ಮೆ ಮತ್ತು ಅಸ್ತಿತ್ವದ ಸಂಕೇತ' ಅಧಿಕೃತ ವರದಿಗಳಲ್ಲಿ ರೂಪಾಯಿ ಚಿಹ್ನೆ ಮುಂದುವರಿದಿದ್ದರೂ ಲೋಗೋದಲ್ಲಿ ತಮಿಳು ಅಕ್ಷರ "ரூ" ಕಾಣಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿ” ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಜೆಟ್ ಲೋಗೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. எல்லார்க்கும் எல்லாம்" (ಎಲ್ಲರಿಗೂ ಎಲ್ಲವೂ) ಎಂಬ ತಮಿಳು ವಾಕ್ಯವನ್ನು ಬರೆಯಲಾಗಿದೆ. ಇದು ಅಭಿವೃದ್ಧಿಯ ಬದ್ಧತೆ ಎಂದು ಹೇಳಿದ್ದಾರೆ.

ಡಿಎಂಕೆ ವಕ್ತಾರ ಸರವಣನ್ ಅಣ್ಣಾದುರೈ ಮಾತನಾಡಿ “ಇದು ಯಾವುದೇ ಕಾನೂನುಬಾಹಿರ ನಿರ್ಧಾರವಲ್ಲ, ಇದು ಕೇಂದ್ರ ಸರ್ಕಾರದ ವಿರುದ್ಧ ಸಮರವೂ ಅಲ್ಲ. ನಮ್ಮ ಸರ್ಕಾರ ತಮಿಳು ಭಾಷೆಗೆ ಪ್ರಾಮುಖ್ಯತೆ ನೀಡುತ್ತದೆ, ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರತಿ ಪಕ್ಷದ ಟೀಕೆ

ಈ ಹೊಸ ಬದಲಾವಣೆಯ ವಿರುದ್ಧ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ₹ ಚಿಹ್ನೆಯನ್ನು ವಿನ್ಯಾಸಗೊಳಿಸಿದ ಉದಯ್​ ಕುಮಾರ್ ಮಾಜಿ ಡಿಎಂಕೆ ಶಾಸಕನ ಪುತ್ರ. ಅವರೇ ರೂಪಿಸಿದ ಚಿಹ್ನೆಯನ್ನು ಡಿಎಂಕೆ ಸರ್ಕಾರ ನಿರಾಕರಿಸುತ್ತಿದೆ. ಎಂ.ಕೆ. ಸ್ಟಾಲಿನ್ ಅವರಿಗಿಂತ ದೊಡ್ಡ ಮೂರ್ಖ ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

Read More
Next Story