ಸೆಬಿ ಮುಖ್ಯಸ್ಥೆ ವಿರುದ್ಧ ಲೋಕಪಾಲ್‌ಗೆ ದೂರು
x

ಸೆಬಿ ಮುಖ್ಯಸ್ಥೆ ವಿರುದ್ಧ ಲೋಕಪಾಲ್‌ಗೆ ದೂರು

ಮಾಧಭಿ ಪುರಿ ಬುಚ್ ಅವರ ವಿರುದ್ಧ ದೂರನ್ನು ವಿದ್ಯುನ್ಮಾನ ಮತ್ತು ಭೌತಿಕ ರೂಪದಲ್ಲಿ ಲೋಕಪಾಲರಿಗೆ ಸಲ್ಲಿಸಲಾಗಿದೆ. ಅವರು 30 ದಿನಗಳೊಳಗೆ ಪ್ರಾಥಮಿಕ ತನಿಖೆಗೆ ಸಿಬಿಐ/ಇಡಿಗೆ ಸೂಚಿಸಬೇಕಾಗುತ್ತದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.


ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ಧ ಶುಕ್ರವಾರ (ಸೆಪ್ಟೆಂಬರ್ 13) ಲೋಕಪಾಲ್‌ಗೆ ದೂರು ಸಲ್ಲಿಸಿದ್ದಾರೆ.

ʻಮಾಧಭಿ ಪುರಿ ಬುಚ್ ಅವರ ವಿರುದ್ಧ ದೂರನ್ನು ವಿದ್ಯುನ್ಮಾನ ಮತ್ತು ಭೌತಿಕ ರೂಪದಲ್ಲಿ ಲೋಕಪಾಲರಿಗೆ ಸಲ್ಲಿಸಲಾಗಿದೆ. ಅವರು 30 ದಿನಗಳೊಳಗೆ ಪ್ರಾಥಮಿಕ ತನಿಖೆಗೆ ಸಿಬಿಐ/ಇಡಿಗೆ ಸೂಚಿಸಬೇಕಾಗುತ್ತದೆ; ಆನಂತರ ಪೂರ್ಣ ಎಫ್‌ಐಆರ್ ವಿಚಾರಣೆ ನಡೆಸಬೇಕು. ಈ ಹಗರಣದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಗೂ ಸಮನ್ಸ್ ನೀಡಬೇಕು ಮತ್ತು ಪ್ರತಿಯೊಂದು ಕೊಂಡಿಯ ತನಿಖೆ ನಡೆಸಬೇಕು,ʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊಯಿತ್ರಾ ತಮ್ಮ ಮೂರು ಪುಟಗಳ ಪತ್ರದಲ್ಲಿ, ವಿಷಯ ರಾಷ್ಟ್ರೀಯ ಮತ್ತು ಕೋಟಿಗಟ್ಟಲೆ ಹೂಡಿಕೆದಾರರ ಹಿತಾಸಕ್ತಿಗೆ ಸಂಬಂಧಿಸಿದ್ದು, ಈ ಕುರಿತು ತನಿಖೆ ಆಗಬೇಕಿದೆ. ಬುಚ್‌ ಅವರು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಆಗಸ್ಟ್‌ನಲ್ಲಿ ʻಸೆಬಿ ಅದಾನಿ ಗ್ರೂಪ್ ವಿರುದ್ಧ ಕ್ರಮ ಕೈಗೊಳ್ಳದೆ ಇರಲು ಮಾಧಬಿ ಪುರಿ ಬುಚ್ ಕಾರಣʼ ಎಂದು ಆರೋಪಿಸಿತ್ತು. ಆರೋಪವನ್ನು ಬುಚ್‌ ʻಆಧಾರರಹಿತʼ ಎಂದು ಹಾಗೂ ತಾನು ಬುಚ್ ಜೊತೆಗೆ ಯಾವುದೇ ವಾಣಿಜ್ಯ ಸಂಬಂಧ ಹೊಂದಿಲ್ಲ ಎಂದು ಅದಾನಿ ಗ್ರೂಪ್ ಹೇಳಿದೆ.

ಬರ್ಮುಡಾ ಮತ್ತು ಮಾರಿಷಸ್‌ನಲ್ಲಿನ ಆಫ್‌ಶೋರ್ ಫಂಡ್‌ಗಳಲ್ಲಿ ಬುಚ್ ಮತ್ತು ಅವರ ಪತಿ ಬೇನಾಮಿ ಹೂಡಿಕೆ ಮಾಡಿದ್ದಾರೆ. ಗೌತಮ್ ಅದಾನಿಯವರ ಸಹೋದರ ವಿನೋದ್ ಅದಾನಿ, ಈ ಹಣ ಬಳಸಿಕೊಂಡು ಫಂಡ್ ಮತ್ತು ಸ್ಟಾಕ್ ಬೆಲೆಗಳನ್ನು ಹೆಚ್ಚಿಸಿದ್ದಾರೆಂದು ಎಂದು ಹಿಂಡೆನ್‌ಬರ್ಗ್ ದೂರಿತ್ತು.

ಸೆಬಿ ಅಧ್ಯಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಟಿಎಂಸಿ ಈ ಹಿಂದೆ ಆಗ್ರಹಿಸಿತ್ತು.

Read More
Next Story