Tirupati laddu Controversy| ತುಪ್ಪ ಗುಣಮಟ್ಟ ಪರೀಕ್ಷೆಯಲ್ಲಿ ತೇರ್ಗಡೆ: ಎ.ಆರ್‌.‌ ಫುಡ್ಸ್‌
x

Tirupati laddu Controversy| ತುಪ್ಪ ಗುಣಮಟ್ಟ ಪರೀಕ್ಷೆಯಲ್ಲಿ ತೇರ್ಗಡೆ: ಎ.ಆರ್‌.‌ ಫುಡ್ಸ್‌

ತುಪ್ಪವನ್ನು ಪರೀಕ್ಷಿಸಿದ್ದಕ್ಕೆ ನಮ್ಮ ಬಳಿ ಪ್ರಮಾಣಪತ್ರಗಳಿವೆ. ಎಫ್‌ಎಸ್‌ಎಸ್‌ಎಐ ಕೂಡ ನಮ್ಮ ತುಪ್ಪವನ್ನು ಪರೀಕ್ಷಿಸಿದ್ದು, ಯಾವುದೇ ಕಲಬೆರಕೆ ಕಂಡುಬಂದಿಲ್ಲ ಎಂದು ಎ ಆರ್ ಫುಡ್ಸ್‌ ಹೇಳಿದೆ.


ತಿರುಪತಿ ದೇಗುಲಕ್ಕೆ ತಾನು ಪೂರೈಸುವ ತುಪ್ಪವು ಕಠಿಣ ಗುಣಮಟ್ಟದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದೆ ಎಂದು ತಮಿಳುನಾಡಿನ ಕಂಪನಿಯೊಂದು ಹೇಳಿದೆ.

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಡೆಸಿದ ಗುಣಮಟ್ಟ ನಿಯಂತ್ರಣ ಮತ್ತು ಆಹಾರ ಸುರಕ್ಷತೆ ಪರೀಕ್ಷೆಗಳಲ್ಲಿ ತುಪ್ಪ ಉತ್ತೀರ್ಣವಾಗಿದೆ ಎಂದು ದಿಂಡಿಗಲ್‌ನ ಎ.ಆರ್. ಫುಡ್ಸ್‌ನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು ದ ಫೆಡರಲ್‌ಗೆ ತಿಳಿಸಿದ್ದಾರೆ.

ಎಲ್ಲವೂ ಚೆನ್ನಾಗಿದೆ-ಸಂಸ್ಥೆ: ಕಂಪನಿಯ ಗುಣಮಟ್ಟ ನಿಯಂತ್ರಣ ಅಧಿಕಾರಿ ಲೆನಿ, ಕಂಪನಿಯು ಟಿಟಿಡಿಗೆ ರವಾನಿಸುವ ಕಂಟೇನರ್‌ಗಳಲ್ಲಿರುವ ತುಪ್ಪವನ್ನು ಕಳುಹಿಸುವ ಮೊದಲು ಮತ್ತು ಆನಂತರ ಪರೀಕ್ಷಿಸಿದೆ ಎಂದು ಹೇಳಿದರು.

ʻನಮ್ಮ ಬಳಿ ಪ್ರಮಾಣಪತ್ರಗಳಿವೆ. ನಾವು ಎನ್‌ಎಬಿಎಲ್‌ ಪ್ರಮಾಣಪತ್ರಗಳನ್ನು ತುಪ್ಪದ ಕಂಟೇನರ್‌ಗಳೊಟ್ಟಿಗೆ ಕಳುಹಿಸಿದ್ದೇವೆ. ನಾವು ಕಳಿಸಿದ ತುಪ್ಪವನ್ನು ಟಿಟಿಡಿಯಲ್ಲಿ ಪರೀಕ್ಷಿಸಲಾಗಿದೆ ಮತ್ತು ಅದರಲ್ಲಿ ಯಾವುದೇ ಕಲಬೆರಕೆ ಪತ್ತೆಯಾಗಿಲ್ಲ, ಎಂದು ಹೇಳಿದರು.

ತುಪ್ಪವನ್ನು ಪರೀಕ್ಷಿಸಲಾಗಿದೆ: ಎ ಆರ್ ಫುಡ್ಸ್ ನ ಮತ್ತೊಬ್ಬ ಗುಣಮಟ್ಟ ನಿಯಂತ್ರಣ ಅಧಿಕಾರಿ ಕಣ್ಣನ್ ಮಾತನಾಡಿ, ಕಂಪನಿ ನಾಲ್ಕು ಟ್ಯಾಂಕರ್ ತುಪ್ಪವನ್ನು ಟಿಟಿಡಿಗೆ ಕಳುಹಿಸಿದೆ. ಈ ಎಲ್ಲಾ ಟ್ಯಾಂಕರ್‌ಗಳ ಉತ್ಪನ್ನವನ್ನು ಪರೀಕ್ಷಿಸಿದ್ದು, ಪ್ರಮಾಣಪತ್ರಗಳಿವೆ. ಎಫ್‌ಎಸ್‌ಎಸ್‌ ಎ ಐ ನಮ್ಮ ತುಪ್ಪವನ್ನು ಪರೀಕ್ಷಿಸಿದ್ದು, ಯಾವುದೇ ಕಲಬೆರಕೆ ಕಂಡುಬಂದಿಲ್ಲ. ಆ ವರದಿಯೂ ನಮ್ಮ ಬಳಿ ಇದೆ,ʼ ಎಂದರು.

ʻಅಗ್ಮಾರ್ಕ್ ಪ್ರಮಾಣೀಕರಣ ತಂಡದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದೇವೆ. ನಮ್ಮ ತುಪ್ಪದಲ್ಲಿ ಕಲಬೆರಕೆ ನಡೆದ ಯಾವುದೇ ಪುರಾವೆಗಳಿಲ್ಲ.ನಮ್ಮ ಬಳಿ ಸಾಕ್ಷ್ಯಗಳಿವೆ,' ಎಂದು ಹೇಳಿದರು. ಆದರೆ, ಸಂಸ್ಥೆ ಈಗ ಟಿಟಿಡಿಗೆ ತುಪ್ಪವನ್ನು ಪೂರೈಸುತ್ತಿಲ್ಲ.

ಲಡ್ಡು ವಿವಾದ: ಹಿಂದಿನ ಸರ್ಕಾರ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಮತ್ತು ಕಳಪೆ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು.

Read More
Next Story