ಹಿಮಾಚಲ ಪ್ರದೇಶ:  ಮೂವರು ಸ್ವತಂತ್ರ ಶಾಸಕರು ಬಿಜೆಪಿಗೆ
x
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು

ಹಿಮಾಚಲ ಪ್ರದೇಶ: ಮೂವರು ಸ್ವತಂತ್ರ ಶಾಸಕರು ಬಿಜೆಪಿಗೆ


ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ ಹಿಮಾಚಲ ಪ್ರದೇಶದ ಮೂವರು ಸ್ವತಂತ್ರ ಶಾಸಕರು ವಿಧಾನಸಭೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಆಶಿಶ್ ಶರ್ಮಾ (ಹಮೀರ್‌ಪುರ), ಹೋಶಿಯಾರ್ ಸಿಂಗ್ (ಡೆಹ್ರಾ) ಮತ್ತು ಕೆಎಲ್ ಠಾಕೂರ್ (ನಲಗಢ) ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದರು.

ಬಿಜೆಪಿಗೆ ಸೇರ್ಪಡೆ: ತಾವು ಬಿಜೆಪಿ ಸೇರುತ್ತೇವೆ ಮತ್ತು ಅದರ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಹೋಶಿಯಾರ್ ಸಿಂಗ್ ಹೇಳಿದರು. ʻಬಿಜೆಪಿ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆʼ ಎಂದು ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳಿಗೆ ತಿಳಿಸಿದರು. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಶಾಸಕರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಸ್ವತಂತ್ರ ಶಾಸಕರು ಆರೋಪಿಸಿದ್ದಾರೆ.

ಮೂವರು ಶಾಸಕರು, ಆರು ಕಾಂಗ್ರೆಸ್ ಬಂಡಾಯಗಾರರು ಕಳೆದ ತಿಂಗಳು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದರು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ನಾಟಕೀಯವಾಗಿ ಸೋತಿದ್ದರು.

Read More
Next Story