ಇಡುಕ್ಕಿ: ಟೆಂಪೋ ಕಮರಿಗೆ ಬಿದ್ದು ಮೂವರು ಸಾವು
x
ಪ್ರಾತಿನಿಧಿಕ ಚಿತ್ರ

ಇಡುಕ್ಕಿ: ಟೆಂಪೋ ಕಮರಿಗೆ ಬಿದ್ದು ಮೂವರು ಸಾವು


ಇಡುಕ್ಕಿ (ಕೇರಳ), ಮಾ.19 : ತಮಿಳುನಾಡಿನಿಂದ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್‌, ಆದಿಮಲಿ ಬಳಿ ಕಮರಿಗೆ ಬಿದ್ದ ಪರಿಣಾಮ ಮಗು ಸೇರಿದಂತೆ ಮೂವರು ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.

ವಾಹನದಲ್ಲಿ 14 ಜನರಿದ್ದರು. 10 ಮಂದಿ ಗಾಯಗೊಂಡಿದ್ದಾರೆ ಎಂದು ಆದಿಮಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ʻಅಪಘಾತ ಸಂಜೆ 6 ರ ಸುಮಾರಿಗೆ ಸಂಭವಿಸಿದೆ. ಹೇಗೆ ಸಂಭವಿಸಿತು ಎಂಬ ಕುರಿತು ವಿವರ ಸಂಗ್ರಹಿಸುತ್ತಿದ್ದೇವೆʼ ಎಂದು ಅವರು ಹೇಳಿದರು. ಪ್ರವಾಸಿಗರು ತಮಿಳುನಾಡಿನ ಥೇನಿಯವರು. ಮಂಕುಲಂಗೆ ಭೇಟಿ ನೀಡಿ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿದೆ.

Read More
Next Story