ಯೋಚಿಸಿ, ಅರ್ಥಮಾಡಿಕೊಳ್ಳಿ ಮತ್ತು ಸಮರ್ಪಕ ನಿರ್ಧಾರ ತೆಗೆದುಕೊಳ್ಳಿ: ರಾಹುಲ್
x

ಯೋಚಿಸಿ, ಅರ್ಥಮಾಡಿಕೊಳ್ಳಿ ಮತ್ತು ಸಮರ್ಪಕ ನಿರ್ಧಾರ ತೆಗೆದುಕೊಳ್ಳಿ: ರಾಹುಲ್


ಹೊಸದಿಲ್ಲಿ, ಅ.4- ದೇಶ ಪ್ರಸ್ತುತ ʻನಿರ್ಣಾಯಕ ಘಟ್ಟʼ ದಲ್ಲಿ ನಿಂತಿದೆ. ʻದೇಶವನ್ನು ಕಟ್ಟುವವರುʼ ಮತ್ತು ʻನಾಶ ಮಾಡುವವರʼ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದರು.

ದೇಶವು ಪ್ರಸ್ತುತ ʻನಿರ್ಣಾಯಕ ಘಟ್ಟʼ ದಲ್ಲಿ ನಿಂತಿದೆ. ಜನರಿಗೆ ತಮ್ಮ ಭವಿಷ್ಯ ತಮ್ಮದೇ ಕೈಯಲ್ಲಿದೆ ಎಂದು ಗೊತ್ತಾಗಬೇಕು. ಅವರು ಆಲೋಚಿಸಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಎಕ್ಸ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸಮಾಜದ ಪ್ರತಿಯೊಂದು ವರ್ಗವೂ ʻದೇಶವನ್ನು ಕಟ್ಟುವʼ ಮತ್ತು ಅದನ್ನು ʼನಾಶ ಮಾಡುವವರʼ ನಡುವಿನ ವ್ಯತ್ಯಾಸವನ್ನು ಗುರುತಿ ಸಬೇಕಾಗುತ್ತದೆ. ಕಾಂಗ್ರೆಸ್ ಮತ್ತು ಇಂಡಿಯ ಒಕ್ಕೂಟ ಎಂದರೆ ಯುವಕರಿಗೆ ಉದ್ಯೋಗ, ರೈತರಿಗೆ ಎಂಎಸ್‌ಪಿ ಖಾತರಿ, ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 400 ರೂ. ಕೂಲಿ, ಪ್ರತಿ ಬಡ ಮಹಿಳೆಯೂ ಲಕ್ಷಾಧಿಪತಿ, ಜಾತಿ ಗಣತಿ ಮತ್ತು ಆರ್ಥಿಕ ಸಮೀಕ್ಷೆ ಮತ್ತು ಸಂವಿಧಾನ ಮತ್ತು ನಾಗರಿ ಕರ ಹಕ್ಕುಗಳನ್ನು ದೃಢಗೊಳಿಸುವಿಕೆ ಎಂದು ಹೇಳಿದರು. ʻಬಿಜೆಪಿ ಎಂದರೆ ನಿರುದ್ಯೋಗ ದೃಢೀಕರಣ, ರೈತರ ಮೇಲಿನ ಸಾಲದ ಹೊರೆ, ಅಸುರಕ್ಷಿತ ಮತ್ತು ಹಕ್ಕುಗಳಿಲ್ಲದ ಮಹಿಳೆಯರು, ಕಡಿಮೆ ವೇತನದ ಅಸಹಾಯಕ ಕಾರ್ಮಿಕರು, ತಾರತಮ್ಯ ಮತ್ತು ಹಿಂದುಳಿದವರ ಶೋಷಣೆ ಮತ್ತು ಸರ್ವಾಧಿಕಾರ ಮತ್ತು ನೆಪಮಾತ್ರದ ಪ್ರಜಾಪ್ರಭುತ್ವʼ ಎಂದು ಹೇಳಿದರು.

ʻನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ; ಯೋಚಿಸಿ, ಅರ್ಥಮಾಡಿಕೊಳ್ಳಿ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳಿʼ ಎಂದು ಹೇಳಿದರು.

ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

Read More
Next Story