ಸೈನೈಡ್ ಬಳಸಿ ನಾಲ್ವರು ಮಹಿಳೆಯ ಹತ್ಯೆ;  ಮೂವರ ಬಂಧನ
x
ಸೈನೈಡ್‌ ನೀಡಿ ಮಹಿಳೆಯ ಹತ್ಯೆಗೈದ ಮೂವರು ಮಹಿಳೆಯರ ಬಂಧನ

ಸೈನೈಡ್ ಬಳಸಿ ನಾಲ್ವರು ಮಹಿಳೆಯ ಹತ್ಯೆ; ಮೂವರ ಬಂಧನ

ಸೈನೈಡ್‌ ನೀಡಿ ನಾಲ್ವರು ಮಹಿಳೆಯರನ್ನು ಹತ್ಯೆಗೈದ ಮೂವರು ಸರಣಿ ಹಂತಕರನ್ನು ಆಂಧ್ರಪ್ರದೇಶದ ಗುಂಟೂರು ಪೊಲೀಸರು ಬಂಧಿಸಿದ್ದಾರೆ.


Click the Play button to hear this message in audio format

ಸೈನೈಡ್‌ ನೀಡಿ ನಾಲ್ವರು ಮಹಿಳೆಯರನ್ನು ಹತ್ಯೆಗೈದ ಮೂವರು ಸರಣಿ ಹಂತಕರನ್ನು ಆಂಧ್ರಪ್ರದೇಶದ ಗುಂಟೂರು ಪೊಲೀಸರು ಬಂಧಿಸಿದ್ದಾರೆ.

ಮೂವರು ಆರೋಪಿಗಳನ್ನು ಎಂ ರಜಿನಿ (40), ಎಂ ವೆಂಕಟೇಶ್ವರಿ (32), ಮತ್ತು ರಜಿನಿಯ ತಾಯಿ ಜಿ ರಮಣಮ್ಮ (60) ಎಂದು ಗುರುತಿಸಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಗುಂಟೂರು ಎಸ್‌ ಪಿ ಸತೀಶ್ ಕುಮಾರ್, ಎರಡು ತಿಂಗಳ ಹಿಂದೆ ಚೇಬ್ರೋಲುವಿನಲ್ಲಿ ಅಪರಿಚಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಮೃತರನ್ನು ತೆನಾಲಿ ಪಟ್ಟಣದ ಯದ್ಲಾಲಿಂಗಯ್ಯ ಕಾಲೋನಿಯ ನಾಗೂರಬಿ ಎಂದು ಗುರುತಿಸಲಾಗಿದೆ. ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು, ಪೊಲೀಸರು ಹಲವಾರು ಶಂಕಿತರನ್ನು ಪತ್ತೆಹಚ್ಚಿದರು ಮತ್ತು ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದರು.ತಪ್ಪೊಪ್ಪಿಗೆ ಮೇರೆಗೆ ಮೂವರು ಆರೋಪಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಆರೋಪಿಗಳು ಸುಳ್ಳು ಹೇಳಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೃತಳನ್ನು ಸಾವಿಗೂ ಮುನ್ನ ಸಾಗಿಸಿದ್ದ ಆಟೋ ಚಾಲಕನನ್ನು ವಿಚಾರಣೆಗೊಳಪಡಿಸಿದಾಗ ಮೂವರು ಆರೋಪಿಗಳು ನಾಗೂರಬಿಯವರೊಂದಿಗೆ ಅದೇ ವಾಹನದಲ್ಲಿ ಪ್ರಯಾಣಿಸಿರುವುದು ಬೆಳಕಿಗೆ ಬಂದಿದೆ. ನಂತರ ಪೊಲೀಸರು ತನಿಖೆ ವೇಳೆ ಮಹಿಳೆಯರು ಸುಳ್ಳು ಮಾಹಿತಿ ನೀಡಿರುವುದನ್ನು ಅರಿತು ಅವರನ್ನು ಬಂಧಿಸಲಾಗಿದೆ.

ಆರೋಪಿಗಳು ನಾಗೂರ್ಬಿಯನ್ನು ಸೈನೈಡ್ ಬೆರೆಸಿ ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾರೆ. ಸುಲಭವಾಗಿ ಹಣ ಸಂಪಾದಿಸಲು, ಆರೋಪಿತ ಮಹಿಳೆಯರು ಇತರ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿದರು, ಅವರ ನಂಬಿಕೆಯನ್ನು ಗಳಿಸಿ ಅಪರಾಧ ಎಸಗುತ್ತಿದ್ದರು. ಪ್ರತ್ಯೇಕ ಪ್ರದೇಶಗಳ ಪ್ರವಾಸ ಎಂದು ಕರೆದುಕೊಂಡು ಹೋಗಿ ಸೈನೈಡ್ ಮಿಶ್ರಿತ ತಂಪು ಪಾನೀಯಗಳನ್ನು ನೀಡಿ, ಅವರನ್ನು ಕೊಂದು ಚಿನ್ನಾಭರಣಗಳನ್ನು ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ವರ್ಷಗಳಿಂದ ಸಮಾಜ ಸೇವಕಿಯಾಗಿ ಕೆಲಸ ಮಾಡಿದ್ದ ಪ್ರಮುಖ ಆರೋಪಿ ಎಂ ರಜಿನಿ ಕಾಂಬೋಡಿಯಾದಲ್ಲಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಈಕೆ ತನ್ನ ತಾಯಿಯೊಂದಿಗೆ ಸೇರಿ 2022ರಲ್ಲಿ ಆಸ್ತಿಗಾಗಿ ಅತ್ತೆ ಸುಬ್ಬಲಕ್ಷ್ಮಿ ಹಾಗೂ 2023ರ ಆಗಸ್ಟ್‌ನಲ್ಲಿ ತೆನಾಲಿ ನಿವಾಸಿ ನಾಗಮ್ಮ (60) ಎಂಬುವರನ್ನು ಸಾಲ ತೀರಿಸಲಾಗದೆ ಕೊಂದಿದ್ದಳು. ಅವರು ಭೂದೇವಿಯ ಜೊತೆಗೆ ಭೂದೇವಿಯ ಪತಿ ಮೋಶೆಯನ್ನು ಚಿತ್ರಹಿಂಸೆ ನೀಡಿದ್ದಕ್ಕಾಗಿ ಕೊಂದಿದ್ದಳು. ಬೇರೆ ಬೇರೆ ಘಟನೆಗಳಲ್ಲಿ ಇತರ ಮೂವರು ಮಹಿಳೆಯರನ್ನು ಕೊಲ್ಲಲು ಪ್ರಯತ್ನಿಸಿದರು ಆದರೆ ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡತ್ತಾಯಿ ಹತ್ಯೆಗಳು

ಈ ಹತ್ಯೆಗಳು ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿರುವ ಕೂಡತ್ತಾಯಿಯಲ್ಲಿ ನಡೆದ ಅನುಮಾನಾಸ್ಪದ ಸಾವುಗಳನ್ನೇ ಹೋಲುತ್ತದೆ. ಈ ಪ್ರಕರಣದಲ್ಲಿ 2002 ರಿಂದ 2016 ರವರೆಗಿನ 14 ವರ್ಷಗಳ ಅವಧಿಯಲ್ಲಿ ಆರು ಸಾವುಗಳಾಗಿತ್ತು. 2019 ರ ಕೊನೆಯಲ್ಲಿ ತನಿಖೆ ಮಾಡಲಾಯಿತು. ತನಿಖೆ ವೇಳೆ ಜಾಲಿ ಜೋಸೆಫ್ ಎಂಬ ಮಹಿಳೆಯನ್ನು ಬಂಧಿಸಲಾಯಿತು. 47 ವರ್ಷದ ಗೃಹಿಣಿಯಾಗಿರುವ ಈಕೆ ಕೋಝಿಕ್ಕೋಡ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉಪನ್ಯಾಸಕನೆಂದು ಸುಳ್ಳು ಹೇಳಿಕೊಂಡು ಎಲ್ಲರನ್ನು ವಂಚಿಸಿದಳು ಮತ್ತು ಸೈನೈಡ್ ಅನ್ನು ವಿಷವಾಗಿ ಬಳಸಿ ಆರು ಕೊಲೆಗಳನ್ನು ಮಾಡಿದ್ದಾಳೆ.

Read More
Next Story