Pahalgam Terror Attack | ಉಗ್ರರಿಗೆ ನಿರೀಕ್ಷಿಸದ ಸಾವು ಬರಲಿದೆ; ಪ್ರಧಾನಿ ಮೋದಿ ಎಚ್ಚರಿಕೆ
x

Pahalgam Terror Attack | ಉಗ್ರರಿಗೆ ನಿರೀಕ್ಷಿಸದ ಸಾವು ಬರಲಿದೆ; ಪ್ರಧಾನಿ ಮೋದಿ ಎಚ್ಚರಿಕೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಜನರ ಮೇಲೆ ದಾಳಿಯಷ್ಟೇ ಅಲ್ಲ. ಭಾರತದ ಆತ್ಮದ ಮೇಲಿನ ದಾಳಿಯಾಗಿದೆ. ಭಾರತೀಯ ನರಮೇಧಕ್ಕೆ ಕೈ ಹಾಕಿದವರು, ಅವರ ಹಿಂದಿರುವವರಿಗೂ ಕಲ್ಪನೆಗೂ ಮೀರಿದ ಶಿಕ್ಷೆ ಕೊಡುತ್ತೇವೆ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.


ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರನ್ನು ಹುಡುಕಿ ಹೊಡೆಯುತ್ತೇವೆ. ನಿರೀಕ್ಷೆಗೂ ಮೀರಿದ ಸಾವನ್ನು ಉಗ್ರರಿಗೆ ತೋರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉಗ್ರರಿಗೆ ತಕ್ಕ ಶಾಸ್ತಿ ಮಾಡದೇ ವಿರಮಿಸುವುದಿಲ್ಲ. ಅವರು (ಉಗ್ರರು) ನಿರೀಕ್ಷೆಯೇ ಮಾಡಿರದ ಸಾವು ಬಂದೆರಗಲಿದೆ ಎಂದು ಹೇಳಿದ್ದಾರೆ.

ಸಂಚು ರೂಪಿಸಿದವರಿಗೂ ಶಿಕ್ಷೆ ಕಾದಿದೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಜನರ ಮೇಲೆ ದಾಳಿಯಷ್ಟೇ ಅಲ್ಲ. ಭಾರತದ ಆತ್ಮದ ಮೇಲಿನ ದಾಳಿಯಾಗಿದೆ. ಭಾರತೀಯ ನರಮೇಧಕ್ಕೆ ಕೈ ಹಾಕಿದವರು, ಅವರ ಹಿಂದಿರುವವರಿಗೂ ಕಲ್ಪನೆಗೂ ಮೀರಿದ ಶಿಕ್ಷೆ ಕೊಡುತ್ತೇವೆ. ಭಯೋತ್ಪಾದಕರನ್ನು ದೇಶದಿಂದ ಹೊರ ಹಾಕುವ ಸಮಯ ಸನ್ನಿಹಿತವಾಗಿದೆ. ಭಾರತಿಯರೆಲ್ಲರೂ ಒಗ್ಗಟ್ಟಾದರೆ ಉಗ್ರರ ಸೊಂಟ ಮುರಿಯುವುದು ಕಷ್ಟವಲ್ಲ. ಈ ಭೂಮಿಯಿಂದಲೇ ಅವರನ್ನು ಹೊರಗಟ್ಟಬಹುದು ಎಂದು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ದಾಳಿಯಲ್ಲಿ ಮೃತಪಟ್ಟವರನ್ನು ಕನ್ನಡ ಮಾತನಾಡುವವರಿದ್ದರು. ಅದೇ ರೀತಿ ಹಿಂದಿ, ಮರಾಠಿ, ಗುಜರಾತಿ, ಒಡಿಯಾ, ಬಾಂಗ್ಲಾ ಹೀಗೆ ಒಬ್ಬೊಬ್ಬರು ಒಂದು ಭಾಷೆ ಮಾತನಾಡುವವರಿದ್ದರು. ಆದರೆ, ಎಲ್ಲರ ಸಾವಿನಿಂದ ಮಡುಗಟ್ಟಿರುವ ಆಕ್ರೋಶ ಮಾತ್ರ ಕಾರ್ಗಿಲ್ನಿಂದ ಕನ್ಯಾಕುಮಾರಿವರೆಗೂ ಒಂದೇ ರೀತಿ ಇದೆ. ಇದೇ ಆಕ್ರೋಶದಲ್ಲಿ ಉಗ್ರರನ್ನು ಸೆದೆ ಬಡಿಯುತ್ತೇವೆ. ಭಾರತದಿಂದ ಭಯೋತ್ಪಾದನೆ ತೊಲಗಿಸುವವರೆಗೂ ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.

ದೇಶದ ಆತ್ಮದ ಮೇಲಿನ ದಾಳಿ

ನಿರಾಯುಧ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ದೇಶದ ಆತ್ಮದ ಮೇಲಿನ ದಾಳಿಯಾಗಿದೆ. ಈ ದಾಳಿ ನಡೆಸಿದ ಭಯೋತ್ಪಾದಕರು ಮತ್ತು ದಾಳಿಗೆ ಸಂಚು ರೂಪಿಸಿದವರಿಗೆ ಊಹಿಸಲಾಗದಷ್ಟು ದೊಡ್ಡ ಶಿಕ್ಷೆ ನೀಡುತ್ತೇವೆ ಎಂದು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿಯೇ ಭಯೋತ್ಪಾದಕರ ಬೆನ್ನು ಮುರಿಯಲಿದೆ ಎಂದಿದ್ದಾರೆ.

Read More
Next Story