ಶ್ರೀಶೈಲಂ ಸುರಂಗ ದುರಂತ: 8 ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ!
x
ಕುಸಿದು ಬಿದ್ದ ಸುರಂಗ ಮಾರ್ಗದ ದೃಶ್ಯ.

ಶ್ರೀಶೈಲಂ ಸುರಂಗ ದುರಂತ: 8 ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣ!

2023ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ಒಳಗೆ ಕುಸಿದಾಗ ಕಾರ್ಮಿಕರನ್ನು, ರಾಟ್- ಹೋಲ್ ಗಣಿಗಾರರ ತಂಡ (ಇಲಿ-ರಂಧ್ರ ಗಣಿಗಾರಿಕೆ) ತಂಡ ಹೊರಕ್ಕೆ ತಂದಿತ್ತು. ಅದೇ ತಂಡವನ್ನು ತೆಲಂಗಾಣಕ್ಕೆ ಕರೆಸಿಕೊಳ್ಳಲಾಗಿದೆ.


ಎರಡು ದಿನದ ಹಿಂದೆ ತೆಲಂಗಾಣದಲ್ಲಿ ನಿರ್ಮಾಣ ಹಂತದ ಸುರಂಗ ಒಳಗಿನ ಭಾಗ ಕುಸಿದ ಪರಿಣಾಮ ಸಿಲುಕಿಕೊಂಡಿರುವ 8 ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ತೀವ್ರಗೊಂಡಿದೆ. ಆದರೆ, ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ.

ಘಟನೆ ನಡೆದ ಸ್ಥಳದಲ್ಲಿ ಮಣ್ಣು ಕುಸಿದಿದೆ. ಹೀಗಾಗಿ ಒಳಗೆ ಕೆಸರು ತುಂಬಿದ್ದು ರಕ್ಷಣಾ ತಂಡಕ್ಕೆ ಇದುವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಕ್ಷಣಾ ಕಾರ್ಯಾಚರಣೆಯು ಅಂತಿಮ ಹಂತಕ್ಕೆ ತಲುಪಲು ಇನ್ನೂ 3-4 ದಿನಗಳು ಹಿಡಿಯಬಹುದು ಎಂದು ಸಚಿವ ಜೆ. ಕೃಷ್ಣರಾವ್​​ ಸಚಿವರು ತಿಳಿಸಿದ್ದಾರೆ.

2023ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದ ಒಳಗೆ ಕುಸಿದಾಗ ಕಾರ್ಮಿಕರನ್ನು, ರಾಟ್- ಹೋಲ್ ಗಣಿಗಾರರ ತಂಡ (ಇಲಿ-ರಂಧ್ರ ಗಣಿಗಾರಿಕೆ) ತಂಡ ಹೊರಕ್ಕೆ ತಂದಿತ್ತು. ಅದೇ ತಂಡವನ್ನು ತೆಲಂಗಾಣಕ್ಕೆ ಕರೆಸಿಕೊಳ್ಳಲಾಗಿದೆ.

"ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಬಹಳಷ್ಟು ಕಡಿಮೆಯಿದೆ. ಏಕೆಂದರೆ, ನಾನು ಘಟನಾ ಸ್ಥಳದಿಂದ ಸುರಂಗದ ಕೊನೆಯವರೆಗೆ ಹೋಗಿದ್ದೇನೆ. ಅಲ್ಲಿಂದ 50 ಮೀಟರ್​ ದೂರದಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಸುರಂಗದ 9 ಮೀಟರ್ ವ್ಯಾಸದಲ್ಲಿ ಮಣ್ಣು ತುಂಬಿತ್ತು. ನಾವು ಕಾರ್ಮಿಕರ ಹೆಸರುಗಳನ್ನು ಕೂಗಿ ಕರೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ" ಎಂದು ಸಚಿವರು ಹೇಳಿದ್ದಾರೆ.

48 ಗಂಟೆಗಳಿಂದಲೂ ಕಾರ್ಯಾಚರಣೆ

ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಯೋಜನೆಯ ಸುರಂಗದ ಒಂದು ಭಾಗವು ಶನಿವಾರ ಕುಸಿದುಬಿದ್ದಿತ್ತು. ಸುರಂಗದಲ್ಲಿ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ದುರಸ್ತಿಗೆಂದು ಕಾರ್ಮಿಕರು ತೆರಳಿದ್ದಾಗ ಮಣ್ಣು ಕುಸಿದು ಬಿದ್ದಿತ್ತು. ದುರಂತ ನಡೆದು 48 ಗಂಟೆಗಳು ಕಳೆದರೂ, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಇತರೆ ಸಂಸ್ಥೆಗಳ ನಿರಂತರ ಪ್ರಯತ್ನಗಳ ಹೊರತಾಗಿಯೂ ಕಾರ್ಮಿಕರನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ.

ಆಧುನಿಕ ತಂತ್ರಜ್ಞಾನದ ನೆರವು

ಸುಧಾರಿತ ತಂತ್ರಜ್ಞಾನದ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಚುರುಕು ಮಾಡಲಾಗಿದೆ. ಸುರಂಗ ಸ್ಥಳದಲ್ಲಿ ಎಂಡೋಸ್ಕೋಪಿಕ್ ಮತ್ತು ರೊಬೊಟಿಕ್ ಕ್ಯಾಮೆರಾಗಳನ್ನೂ ಅಳವಡಿಸಿದ್ದಾರೆ. ಕಾರ್ಯಾಚರಣೆಗೆ ಸಹಾಯ ಮಾಡಲು ಎನ್‌ಡಿಆರ್‌ಎಫ್ ಶ್ವಾನದಳವೂ ಬಂದಿದೆ.


ಉತ್ತರ ಪ್ರದೇಶದ ಮನೋಜ್ ಕುಮಾರ್ ಮತ್ತು ಶ್ರೀನಿವಾಸ್, ಜಮ್ಮು ಮತ್ತು ಕಾಶ್ಮೀರದ ಸನ್ನಿ ಸಿಂಗ್, ಪಂಜಾಬ್‌ನ ಗುರ್ಪ್ರೀತ್ ಸಿಂಗ್ ಮತ್ತು ಜಾರ್ಖಂಡ್ ಮೂಲದ ಸಂದೀಪ್ ಸಾಹು, ಜೆಗ್ಟಾ ಕ್ಸೆಸ್, ಸಂತೋಷ್ ಸಾಹು ಮತ್ತು ಅನುಜ್ ಸಾಹು ಎಂದು ಗುರುತಿಸಲಾಗಿದೆ. ಈ 8 ಮಂದಿಯ ಪೈಕಿ ಇಬ್ಬರು ಇಂಜಿನಿಯರ್‌ಗಳು, ಇಬ್ಬರು ಆಪರೇಟರ್‌ಗಳು ಮತ್ತು ಉಳಿದ ನಾಲ್ವರು ಕಾರ್ಮಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story