
ತೆಲಂಗಾಣ: 6 ಬಿಆರ್‌ಎಸ್ ಎಂಎಲ್‌ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆ
ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ 6 ಶಾಸಕರು ಸೇರಿದಂತೆ ಹಲವು ನಾಯಕರು ಪಕ್ಷವನ್ನು ತೊರೆದಿರುವುದರಿಂದ, ಬಿಆರ್‌ಎಸ್ ಬಲ ಕಡಿಮೆಯಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಮ್ಮುಖದಲ್ಲಿ ಆರು ಬಿಆರ್‌ಎಸ್ ಎಂಎಲ್‌ಸಿಗಳು ಗುರುವಾರ ರಾತ್ರಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಬಲ 10ಕ್ಕೆ ಏರಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಆರು ಶಾಸಕರು ಸೇರಿದಂತೆ ಹಲವಾರು ನಾಯಕರು ಪಕ್ಷವನ್ನು ತೊರೆದಿರುವುದರಿಂದ, ಭಾರತ್ ರಾಷ್ಟ್ರ ಸಮಿತಿ ವಲಸೆಯಿಂದ ಸೊರಗಿದೆ.
ತೆಲಂಗಾಣ ವಿಧಾನ ಪರಿಷತ್ತಿನ ಜಾಲತಾಣದ ಪ್ರಕಾರ, 40 ಸದಸ್ಯರ ಸದನದಲ್ಲಿ ಬಿಆರ್‌ಎಸ್ 25, ಕಾಂಗ್ರೆಸ್ ನಾಲ್ಕು, ನಾಲ್ವರು ನಾಮನಿರ್ದೇ ಶಿತರು, ಎಐಎಂಐಎಂನ ಇಬ್ಬರು, ಬಿಜೆಪಿ, ಪಿಆರ್‌ಟಿಯುನ ತಲಾ ಒಬ್ಬರು ಮತ್ತು ಒಬ್ಬ ಸ್ವತಂತ್ರ ಎಂಎಲ್‌ಸಿ ಇದ್ದಾರೆ. ಎರಡು ಸ್ಥಾನಗಳು ಖಾಲಿ ಇವೆ.
ಗುರುವಾರ ರಾತ್ರಿ (ಜುಲೈ 4) ಎರಡು ದಿನಗಳ ಪ್ರವಾಸದಿಂದ ರೇವಂತ್ ರೆಡ್ಡಿ ಅವರು ವಾಪಸಾದ ಬಳಿಕ ಎಂಎಲ್‌ಸಿಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
Next Story