ಸಾಮೂಹಿಕ ಅತ್ಯಾಚಾರ; 3 ಚಾಲಕರು, ನಿರ್ವಾಹಕ, ಕ್ಯಾಷಿಯರ್ ಬಂಧನ
x

ಸಾಮೂಹಿಕ ಅತ್ಯಾಚಾರ; 3 ಚಾಲಕರು, ನಿರ್ವಾಹಕ, ಕ್ಯಾಷಿಯರ್ ಬಂಧನ


ಡೆಹ್ರಾಡೂನ್‌ನ ಅಂತಾರಾಜ್ಯ ಬಸ್ ಟರ್ಮಿನಲ್‌ನಲ್ಲಿ ಹದಿಹರೆಯದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮೂವರು ಬಸ್ ಚಾಲಕರು, ನಿರ್ವಾಹಕ ಮತ್ತು ಕ್ಯಾಷಿಯರ್ ಸೇರಿದಂತೆ ಐವರನ್ನು ಉತ್ತರಾಖಂಡ್ ಪೊಲೀಸರು ಬಂಧಿಸಿದ್ದಾರೆ.

ಘಟನೆ ಆಗಸ್ಟ್ 12 ರಂದು ನಡೆದಿದ್ದು, ಪೊಲೀಸರಿಗೆ ಈ ಬಗ್ಗೆ ಶನಿವಾರ (ಆಗಸ್ಟ್ 17) ತಿಳಿಸಲಾಗಿದೆ. ಆಗಸ್ಟ್ 12 ರಂದು ಡೆಹ್ರಾಡೂನ್ ಐಎಸ್‌ಬಿಟಿಯಲ್ಲಿ ಹದಿಹರೆಯದ ಹುಡುಗಿಯೊಬ್ಬಳು ತಡರಾತ್ರಿ ಒಂಟಿಯಾಗಿ ಕುಳಿತಿದ್ದ ಬಗ್ಗೆ ಡೆಹ್ರಾಡೂನ್ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಗೆ ಮಾಹಿತಿ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯಿಂದ ಪತ್ತೆ: ಆಕೆಯನ್ನು ಸರ್ಕಾರಿ ಬಾಲಕಿಯರ ವಸತಿಗೆ ಕರೆದೊಯ್ಯಲಾಗಿದ್ದು, ಕೌನ್ಸೆಲಿಂಗ್ ಸಮಯದಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಗೊತ್ತಾಗಿದೆ. ಆಗಸ್ಟ್ 17 ರಂದು ಸಿಡಬ್ಲ್ಯುಸಿ ಸದಸ್ಯರ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 70 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿ ಸಲಾಗಿದೆ.

ಐಎಸ್‌ಬಿಟಿಯಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು ಐವರನ್ನು ಬಂಧಿಸಿದರು. ಧರ್ಮೇಂದ್ರಕುಮಾರ್ (32), ರಾಜ್‌ಪಾಲ್ (57), ದೇವೇಂದ್ರ (52), ರಾಜೇಶ್ ಕುಮಾರ್ ಸೋಂಕರ್ (38) ಮತ್ತು ರವಿಕುಮಾರ್ (34) ಬಂಧಿತರು.

ಪಂಜಾಬ್‌ಗೆ ತೆರಳುತ್ತಿದ್ದ ಬಾಲಕಿ: ತಾನು ಉತ್ತರ ಪ್ರದೇಶದ ಮೊರಾದಾಬಾದ್‌ನ ನಿವಾಸಿಯಾಗಿದ್ದು, ಮೊದಲು ದೆಹಲಿ, ಆನಂತರ ಡೆಹ್ರಾಡೂನ್‌ಗೆ ಬಸ್‌ನಲ್ಲಿ ಹೋದೆ ಎಂದು ಹುಡುಗಿ ಹೇಳಿದ್ದಾಳೆ.

ದೆಹಲಿಯ ಕಾಶ್ಮೀರಿ ಗೇಟ್ ಐಎಸ್‌ಬಿಟಿಯಲ್ಲಿ ಬಾಲಕಿ ತನ್ನನ್ನು ಸಂಪರ್ಕಿಸಿ, ಪಂಜಾಬ್‌ಗೆ ಹೇಗೆ ಹೋಗಬಹುದು ಎಂದು ಕೇಳಿದ್ದಳು. ಬಸ್ಸಿನಲ್ಲಿ ಡೆಹ್ರಾಡೂನ್‌ಗೆ ಹೋಗಿ, ಅಲ್ಲಿಂದ ಪಂಜಾಬ್‌ಗೆ ಇನ್ನೊಂದು ಬಸ್‌ನಲ್ಲಿ ಹೋಗುವಂತೆ ಹೇಳಿದ್ದೆ ಎಂದು ಆರೋಪಿಗಳಲ್ಲಿ ಒಬ್ಬನಾದ ದೇವೇಂದ್ರ ಪೊಲೀಸರಿಗೆ ತಿಳಿಸಿದ್ದಾನೆ.

ಬಸ್ ಡೆಹ್ರಾಡೂನ್ ತಲುಪಿ, ಪ್ರಯಾಣಿಕರು ಕೆಳಗಿಳಿದ ನಂತರ ದೇವೇಂದ್ರ ಮತ್ತು ಚಾಲಕ ಧರ್ಮೇಂದ್ರ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಪಕ್ಕದಲ್ಲಿ ನಿಲ್ಲಿಸಿದ್ದ ಬಸ್‌ಗಳ ಚಾಲಕರಾದ ರವಿ ಮತ್ತು ರಾಜ್‌ಪಾಲ್ ಕೂಡ ಬಾಲಕಿ ಮೇಲೆ ಹಲ್ಲೆ ಲೈಂಗಿಕ ನಡೆಸಿದರು. ದೇವೇಂದ್ರ ಪ್ರಯಾಣಿಕರಿಂದ ಸಂಗ್ರಹಿಸಿದ ಹಣ ಕಟ್ಟುವಾಗ ವಿಷಯವನ್ನು ಕ್ಯಾಷಿಯರ್ ರಾಜೇಶ್‌ಗೆ ಹೇಳಿದ್ದು, ಆತ ಕೂಡ ಅತ್ಯಾಚಾರ ನಡೆಸಿದ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story