ಮಧುರೈ: ಎನ್‌ಟಿಕೆ ಪದಾಧಿಕಾರಿ ಹತ್ಯೆ
ಮಧುರೈ (ತಮಿಳುನಾಡು)- ಮಧುರೈನಲ್ಲಿ ನಾಮ್ ತಮಿಳರ್ ಕಚ್ಚಿಯ ಪದಾಧಿಕಾರಿಯೊಬ್ಬರನ್ನು ಅಪರಿಚಿತ ಗ್ಯಾಂಗ್ ಮಂಗಳವಾರ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳು ರಾಷ್ಟ್ರೀಯವಾದಿ ಪಕ್ಷವಾದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ)ಯ ಮಧುರೈ ಜಿಲ್ಲಾ ಉಪ ಕಾರ್ಯದರ್ಶಿ ಬಾಲಸುಬ್ರಮಣಿಯನ್ ಅವರನ್ನು ಬೆಳಗಿನ ವೇಳೆ ನಡಿಗೆಯಲ್ಲಿದ್ದಾಗ ಹಿಂಬಾಲಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈನಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಮುಖ್ಯಸ್ಥ ಕೆ. ಆರ್ಮ್‌ಸ್ಟ್ರಾಂಗ್ ಅವರ ಹತ್ಯೆ ನಡೆದ ಕೆಲವು ದಿನಗಳ ನಂತರ ಈ ಕೊಲೆ ಸಂಭವಿಸಿದೆ.
ಬಾಲಸುಬ್ರಮಣಿಯನ್ ಹತ್ಯೆಯಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪಕ್ಷದ ಮುಖ್ಯ ಸಂಯೋಜಕ ಸೀಮನ್ ಹತ್ಯೆಯನ್ನು ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ʻಬಾಲಸುಬ್ರಮಣಿಯನ್ ಅವರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸದಿದ್ದರೆ ನಾವು ಪ್ರತಿಭಟನೆ ನಡೆಸುತ್ತೇವೆ,ʼ ಎಂದು ಸೀಮನ್ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ @mkstalin ಮತ್ತು @CMOTamilnadu ಅವರನ್ನು ಟ್ಯಾಗ್ ಮಾಡಲಾಗಿದೆ. ʻಬಾಲಸುಬ್ರಮಣಿಯನ್ ಹತ್ಯೆ ಸುದ್ದಿ ಕೇಳಿ ಆಘಾತವಾಯಿತು. ಈ ಹೃದಯಹೀನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ,ʼ ಎಂದು ಅವರು ಹೇಳಿದರು.