ಕಲ್ಲಕುರಿಚಿ ಕಳ್ಳಬಟ್ಟಿ ದುರಂತ| ಪ್ರಮುಖ ಆರೋಪಿ ಬಂಧನ; ಸಾವಿನ ಸಂಖ್ಯೆ 55 ಕ್ಕೆ ಹೆಚ್ಚಳ
x

ಕಲ್ಲಕುರಿಚಿ ಕಳ್ಳಬಟ್ಟಿ ದುರಂತ| ಪ್ರಮುಖ ಆರೋಪಿ ಬಂಧನ; ಸಾವಿನ ಸಂಖ್ಯೆ 55 ಕ್ಕೆ ಹೆಚ್ಚಳ

ಕಳ್ಳಬಟ್ಟಿ ದಂಧೆಗೆ ಕಡಿವಾಣ ಹಾಕುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದಾರೆ. ಆದರೆ, ವಿರೋಧ ಪಕ್ಷಗಳು ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿವೆ.

ಕಲ್ಲಕುರಿಚಿ ಜಿಲ್ಲೆಯಲ್ಲಿ 55 ಜನರ ಸಾವಿಗೆ ಕಾರಣವಾದ ವಿಷಯುಕ್ತ ಕಳ್ಳಬಟ್ಟಿ ಮದ್ಯವನ್ನು ಪೂರೈಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಶನಿವಾರ ವರದಿಯಾಗಿದೆ.

ಜಿಲ್ಲೆಯ ಕರುಣಾಪುರಂ ಗ್ರಾಮಕ್ಕೆ ಮದ್ಯ ಪೂರೈಸಿದ ಚಿನ್ನದೊರೈ ಎಂಬುವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

29 ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಎಂ.ಎಸ್.ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾದವರಲ್ಲಿ ಮೂವರು ಪುರುಷರು ಚೇತರಿಸಿಕೊಂಡಿದ್ದಾರೆ. ಆದರೆ, ಡಜನ್‌ಗಟ್ಟಲೆ ಜನರ ಸ್ಥಿತಿ ಗಂಭೀರವಾಗಿದೆ.

ನಿವೃತ್ತ ನ್ಯಾಯಾಧೀಶ ಬಿ. ಗೋಕುಲದಾಸ್ ನೇತೃತ್ವದ ತನಿಖಾ ಆಯೋಗ ತನಿಖೆಯನ್ನು ಆರಂಭಿಸಿದೆ. ರಾಜ್ಯ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದೆ. ಘಟನೆ ನಂತರ ಕ್ರಿಮಿನಲ್ ಇತಿಹಾಸ ಹೊಂದಿರುವ ಮೂವರನ್ನು ಬಂಧಿಸಲಾಗಿದೆ.

ಕಳ್ಳಬಟ್ಟಿ ದಂಧೆಗೆ ಕಡಿವಾಣ ಹಾಕುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದಾರೆ. ಆದರೆ, ವಿರೋಧ ಪಕ್ಷಗಳು ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿವೆ.

Read More
Next Story